newsfirstkannada.com

RCBಗೆ ಶುಭ ಶಕುನ.. ಶುಭ ಶಕುನ ಬಂದೈತೆ.. ಗೆಲ್ಲೋ ಲೆಕ್ಕಾಚಾರ ಹೇಳುತ್ತಿದೆ ಈ ತಿಂಗಳು

Share :

Published May 22, 2024 at 1:23pm

Update May 22, 2024 at 1:47pm

    ಮೇ ತಿಂಗಳಲ್ಲಿ ಆರ್​ಸಿಬಿ ಎಷ್ಟು ಪಂದ್ಯಗಳನ್ನ​ ಗೆದ್ದುಕೊಂಡಿದೆ

    ಕ್ವಾಲಿಫೈಯರ್- 2ಗೆ ಅರ್ಹತೆ ಪಡೆಯಲು 2 ತಂಡ ಪೈಪೋಟಿ

    ರಾಜಸ್ಥಾನ ರಾಯಲ್ಸ್​ಗೆ ಮೇ ತಿಂಗಳು ಎಂದರೆ ಕಂಟಕನಾ..?

ಎಲಿಮಿನೇಟರ್ ಪಂದ್ಯದಲ್ಲಿಂದು ರಾಜಸ್ಥಾನ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಖಾಡಕ್ಕೆ ಇಳಿಯಲಿದೆ. ಕದನದಲ್ಲಿ ಗೆದ್ದು ಕ್ವಾಲಿಫೈಯರ್-2ಗೆ ಅರ್ಹತೆ ಪಡೆಯಲು ಎರಡು ತಂಡಗಳು ಪೈಪೋಟಿ ನಡೆಸಲಿವೆ. ಆದ್ರೆ ಇದರಲ್ಲಿ ಇಂಟ್ರೆಸ್ಟಿಂಗ್ ಅಂದ್ರೆ ಮೇ ತಿಂಗಳು. ಮೇ ತಿಂಗಳು ಆರ್​ಸಿಬಿಗೆ ನವ ವಸಂತನೇ ಎಂದು ಹೇಳಬಹುದು.

ಹೈಟೆನ್ಶನ್ ಮ್ಯಾಚ್​ಗೆ ಇಂದು ಅಹ್ಮದಾಬಾದ್​ನ ಮೋದಿ ಸ್ಟೇಡಿಯಂ ರೆಡಿಯಾಗಿದ್ದು ಈಗಾಗಲೇ ಎರಡು ತಂಡದ ಪ್ಲೇಯರ್ಸ್​ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಪಂದ್ಯದ ವೇಳೆ ಆರ್​ಆರ್​​ಗಿಂತ ಆರ್​​ಸಿಬಿ ಹೆಚ್ಚು ಬಲಿಷ್ಠವಾಗಿದೆ. ಕಳೆದ 5 ಪಂದ್ಯಗಳಿಂದ ಗೆಲುವನ್ನೇ ಕಾಣದ ರಾಜಸ್ಥಾನ​​​​​​​​ದ​ ತಂಡದಲ್ಲಿ ಆತ್ಮವಿಶ್ವಾಸ ಕೊರತೆಯಿದೆ. ಬಲಾಬಲದ ಲೆಕ್ಕಾಚಾರದಲ್ಲೂ ಆರ್​ಸಿಬಿನೇ ಮುಂದಿದೆ.

ಇದನ್ನೂ ಓದಿ: ಪವರ್​ ಪ್ಲೇನಲ್ಲಿ RCBಗೆ ಬೇಕಿದೆ ಪವರ್ ಫುಲ್ ಆಟ.. ಈ ಸ್ಟಾರ್​ ಪ್ಲೇಯರ್​​ನಿಂದ ಮಾತ್ರ ಅದು ಸಾಧ್ಯ!

ಮೇನಲ್ಲಿ ಆರ್​ಆರ್​ ಆಡಿದ 5 ಪಂದ್ಯಗಳು?

ಐಪಿಎಲ್‌ನಲ್ಲಿ ಆರ್‌ಸಿಬಿ ಹಾಗೂ ಆರ್‌ಆರ್​​ ತಂಡಗಳ ಕಥೆ ನಿಜಕ್ಕೂ ತದ್ವಿರುದ್ಧವಾಗಿದೆ. ಏಕೆಂದರೆ ಮೇ ತಿಂಗಳಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಆರ್​ಸಿಬಿ ಜಯಭೇರಿ ಬಾರಿಸಿದ್ರೆ, ಇತ್ತ ಆರ್​ಆರ್​ ಮೇನಲ್ಲಿ ಆಡಿದ 5 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಸೋತು, ಒಂದು ಪಂದ್ಯ ಮಾತ್ರ ಮಳೆಯಿಂದ ರದ್ದಾಗಿದೆ. ಮೊದಲ 9 ಪಂದ್ಯಗಳಲ್ಲಿ ರಾಜಸ್ಥಾನ​ 8 ಪಂದ್ಯ ಗೆದ್ದು ಒಂದರಲ್ಲಿ ಮಾತ್ರ ಸೋತಿತ್ತು. ಆದ್ರೆ ವಿಚಿತ್ರ ಎಂಬಂತೆ ಮೇ ತಿಂಗಳದಲ್ಲಿ ಒಂದು ಪಂದ್ಯ ಕೂಡ ರಾಜಸ್ಥಾನ ಗೆದ್ದಿಲ್ಲ. ಇದೇ ಆರ್​ಸಿಬಿಗೆ ಇಂದು ವರದಾನವಾಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಗೃಹಲಕ್ಷ್ಮಿಯ ಹಣದಿಂದ ಈ ಮಹಿಳೆ ಏನು ಮಾಡಿದರು ಗೊತ್ತಾ.. ಸಿಎಂ, ಡಿಸಿಎಂಗೆ ಧನ್ಯವಾದ ಹೇಳಿದ ಸಕ್ಕುಬಾಯಿ

ಇನ್ನು ಆರ್​ಸಿಬಿ ಕಥೆ ಇದಕ್ಕೆ ಉಲ್ಟಾ​.. ಮೊದಲ 8 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಜಯಿಸಿದ್ದ ಆರ್​​ಸಿಬಿ, ನಂತರ ಫಿನಿಕ್ಸ್​ನಂತೆ ಮೇಲೇದ್ದಿದೆ. ಆರ್​ಆರ್​ ಸೋಲಿನ ಸುಳಿಯಲ್ಲಿ ಸಿಕ್ಕಾಗ ಬೆಂಗಳೂರು ಗೆದ್ದು ಬೀಗಿದೆ. ಇಂಟ್ರೆಸ್ಟಿಂಗ್ ಅಂದ್ರೆ, ಮೇ ತಿಂಗಳಲ್ಲಿ ಸೋಲಿಲ್ಲದ ಸರದಾರನಾಗಿ ಆರ್​​ಸಿಬಿ ಮುನ್ನುಗ್ಗಿದೆ. ಇದೇ ತಿಂಗಳಲ್ಲಿ ಗುಜರಾತ್​, ಪಂಜಾಬ್​, ಡೆಲ್ಲಿ ಹಾಗೂ ಚೆನ್ನೈ ತಂಡಗಳನ್ನ ಆರ್​ಸಿಬಿ ಮಣ್ಣು ಮುಕ್ಕಿಸಿದೆ. ಆಡಿದ 4 ಪಂದ್ಯಗಳಲ್ಲೂ ಆರ್​ಸಿಬಿ ಗೆಲುವಿನಲ್ಲಿ ತೇಲಾಡಿದೆ. ಇದರಿಂದಾಗಿ ಇಂದು ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿಯೇ ಬಹುತೇಕ ವಿಜಯ ಪತಾಕೆ ಹಾರಿಸಲಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBಗೆ ಶುಭ ಶಕುನ.. ಶುಭ ಶಕುನ ಬಂದೈತೆ.. ಗೆಲ್ಲೋ ಲೆಕ್ಕಾಚಾರ ಹೇಳುತ್ತಿದೆ ಈ ತಿಂಗಳು

https://newsfirstlive.com/wp-content/uploads/2024/05/RCB_VIRAT_KOHLI_SANJU.jpg

Load More