/newsfirstlive-kannada/media/post_attachments/wp-content/uploads/2024/03/Faf_Kohli_RCB.jpg)
ಇಂದು ಸನ್​ರೈಸರ್ಸ್​ ವಿರುದ್ದ ಆರ್​ಸಿಬಿ ಮಹತ್ವದ ಪಂದ್ಯವನ್ನಾಡಳಿದೆ. ಈಗಾಗಲೇ 5 ಪಂದ್ಯಗಳಲ್ಲಿ ಸೋತಿರುವ ಆರ್​ಸಿಬಿ ಇದೀಗ ಅಳಿವು ಉಳಿವಿನ ಲೆಕ್ಕಚಾರ ಆರಂಭಿಸಿದ್ದು ,ಆರ್​ಸಿಬಿ ಪಾಲಿಗೆ ಗೆಲ್ಲಲೆಬೇಕಾದ ಅನಿವಾರ್ಯತೆ ಇದೆ.
ಗೆದ್ದರೆ ಪ್ಲೇ ಆಫ್​ ಸೋತರೆ ಮನೆಗೆ ಎಂಬ ಪರಿಸ್ಥಿತಿಯಲ್ಲಿರುವ ಆರ್​ಸಿಬಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈದರಬಾದ್​​ ಸನ್​ರೈಸರ್ಸ್​ ವಿರುದ್ದ ಸೆಣೆಸಾಡಲಿದೆ. ಫಾಫ್​ ಡು ಪೆಸ್ಲಿ ಸಾರಥ್ಯದಲ್ಲಿ ಆರ್​ಸಿಬಿ ಆಡಿರುವ 6 ಪಂದ್ಯಗಳ ಪೈಕಿ 5 ಪಂದ್ಯದಲ್ಲಿ ಸೋಲನ್ನ ಅನುಭವಿಸಿದೆ.
ಇನ್ನು 5 ಪಂದ್ಯಗಳಲ್ಲಿ 3 ಪಂದ್ಯವನ್ನ ಗೆದ್ದ ಸನ್​ರೈಸರ್ಸ್​ ತನ್ನ ಬ್ಯಾಟರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು , ಸನ್​ ರೈಸರ್ಸ್​ ಬ್ಯಾಟರ್​ಗಳನ್ನು ಕಟ್ಟಿಹಾಕುವ ಸವಾಲು ಆರ್​ಸಿಬಿ ಬೌಲರ್​ಗಳ ಮುಂದಿದೆ.
ಕಾವಿಯ ಮಾರನ್​ ಒಡೆತನದ ಹೈದರಾಬಾದ್​ ತಂಡ ಈಗಾಗಲೇ ಐದು ಪಂದ್ಯ ಎದುರಿಸಿದ್ದು, 2 ಪಂದ್ಯ ಸೋತಿದೆ. ಆದರೂ ಸಹ ಪಾಯಿಂಟ್​ ಟೇಬಲ್​ನಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ ಆರ್​ಸಿಬಿ ಪಾಯಿಂಟ್​​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ.
ಫ್ಯಾನ್ಸ್ ಒತ್ತಡ
ಸೋಲಿನ ಸುಳಿಯಲ್ಲಿ ಸುತ್ತುತ್ತಾ ಬಂದಿರುವ ಆರ್​ಸಿಬಿಗೆ ಅಭಿಮಾನಿಗಳು ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಇಂದಿನ ಪಂದ್ಯ ಕೂಡ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೈದರಾಬಾದ್​ ತಂಡವನ್ನು ಮಣ್ಣು ಮುಕ್ಕಿಸಬೇಕು ಎಂದು ಫ್ಯಾನ್ಸ್​ ಒತ್ತಡ ಹೇರುತ್ತಿದ್ದಾರೆ. ಆದರೆ ಇದೆಲ್ಲ ಇಂದು ಸಾಧ್ಯವಾ ಎಂದು ಕಾದು ನೋಡಬೇಕಿದೆ. ಒಂದು ವೇಳೆ ಗೆದ್ದರೆ ಈ ಸಂತಸವನ್ನು ಅಭಿಮಾನಿಗಳು ವಿಭಿನ್ನವಾಗಿ ಸೆಲೆಬ್ರೇಟ್​​ ಮಾಡಲು ಸಿದ್ದರಿದ್ದಾರೆ. ಬಿರಿಯಾನಿ ಊಟ, ಪಟಾಕಿ ಸಿಡಿಸಿ ಸಂಭ್ರಮಿಸಲು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ