/newsfirstlive-kannada/media/post_attachments/wp-content/uploads/2024/12/SANKEERTHANA-YATRE.jpg)
ಇಂದು ಮಂಡ್ಯ ನಗರದ ಶ್ರೀರಂಗಪಟ್ಟಣ ಸಂಪೂರ್ಣವಾಗಿ ಕೇಸರಿಮಯವಾಗಲಿದೆ. ಇಂದು ಶ್ರೀರಂಗಪಟ್ಟಣದಲ್ಲಿ ಹನುಮಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಲಿದ್ದು, ಶ್ರೀರಂಗನ ಸನ್ನಿಧಿ ಸಂಪೂರ್ಣ ಕೇಸರಿಮಯವಾಗಿದೆ. ಕೇಸರಿ ಬಂಟಿಂಗ್ಸ್ ಮತ್ತು ಫ್ಲೆಕ್ಸ್​ಗಳು ರಾರಾಜಿಸುತ್ತಿವೆ. ಯಾತ್ರೆ ಸಾಗುವ ಪಟ್ಟಣದ ಮುಖ್ಯ ಬೀದಿಗೆ ಕೇಸರಿ ಬಂಟಿಂಗ್ಸ್​ ಹಾಕಿ ಅಲಂಕಾರ ಮಾಡಲಾಗಿದೆ.
ಇದನ್ನೂ ಓದಿ:ಕಣ್ಣುಗಳು ಮಂದವಾಗಿವೆ ಅಂತ ಆತಂಕಬೇಡ.. ಬಂದಿದೆ ನಾರಾಯಣ ನೇತ್ರಾಲಯದ ‘ಔರಾ ವಿಷನ್’
ಈ ಸಂಕೀರ್ತನಾ ಯಾತ್ರೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಂಜಾಮ್​ನ ಹನುಮ ದೇಗುಲದಿಂದ ರಂಗನಾಥ ದೇಗುಲದವರೆಗೂ 5 ಕಿಲೋ ಮೀಟ್​ ಮಾರ್ಗದಲ್ಲಿ ಸಂಕೀರ್ತನಾ ಯಾತ್ರೆ ನಡೆಯಲಿದೆ.
/newsfirstlive-kannada/media/post_attachments/wp-content/uploads/2024/12/SANKEERTHANA-YATRE-1.jpg)
ಇನ್ನು ಪಟ್ಟಣ ಮೂಡಲಬಾಗಿಲು ಆಂಜನೇಯ ದೇಗುಲ ಪುನರ್​ನಿರ್ಮಾಣ ಮಾಡುವುದು ಈ ಯಾತ್ರೆಯ ಸಂಕಲ್ಪವಾಗಿದ್ದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಡೆ ಬಂದೋಬಸ್ತ್​ ಮಾಡಿಕೊಂಡಿದೆ. ಎಲ್ಲೆಡೆಯೂ ಹೈ ಅಲರ್ಟ್​​ ಇದ್ದು. ಯಾತ್ರೆ ಸಾಗುವ ದಾರಿಯುದ್ದಕ್ಕೂ ಸುಮಾರು 100 ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿದೆ. ಕೆಎಸ್​​ಆರ್​ಪಿ, ಡಿಎಆರ್ ಸೇರಿ ಒಟ್ಟು ಒಂದೂವರೆ ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us