ಕುತೂಹಲ ಘಟ್ಟ ತಲುಪಿದ ಅಧಿಕಾರದ ಆಟ.. ರಾಹುಲ್ ಮುಂದೆ ಸಿದ್ದು, ಡಿಕೆಶಿ ಪ್ರತ್ಯೇಕ ವಾದ, ಏನು ಗೊತ್ತಾ..?

author-image
Ganesh
Updated On
ಕುತೂಹಲ ಘಟ್ಟ ತಲುಪಿದ ಅಧಿಕಾರದ ಆಟ.. ರಾಹುಲ್ ಮುಂದೆ ಸಿದ್ದು, ಡಿಕೆಶಿ ಪ್ರತ್ಯೇಕ ವಾದ, ಏನು ಗೊತ್ತಾ..?
Advertisment
  • ದೆಹಲಿಯಲ್ಲಿ ಪ್ರತಿಧ್ವನಿಸಲಿದೆ ರಾಜ್ಯ ರಾಜಕಾರಣದ ಕ್ರಾಂತಿಯ ಕಿಡಿ
  • ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​ ಪ್ರತ್ಯೇಕ ಸಭೆ
  • ಇಂದು ತಮ್ಮ ತಮ್ಮ ಅಭಿಪ್ರಾಯ ಹೇಳಲಿರೋ ಉಭಯ ನಾಯಕರು

ಕರ್ನಾಟಕದ ಕುರ್ಚಿ ಕದನ ದೆಹಲಿಗೆ ಶಿಫ್ಟ್ ಆಗಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ಸೇರಿರೋ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ತಮ್ಮ ತಮ್ಮ ದಾಳ ಉರುಳಿಸೋಕೆ ಸಜ್ಜಾಗಿದ್ದಾರೆ. ಉಬಯ ನಾಯಕರು ಇಂದು ರಾಹುಲ್ ಗಾಂಧಿಯನ್ನ ಭೇಟಿಯಾಗಿ ಚರ್ಚಿಸಲಿದ್ದಾರೆ. ವಿಶೇಷ ಅಂದರೆ ಇಬ್ಬರೂ ಪ್ರತ್ಯೇಕ ಭೇಟಿಗಾಗಿ ಹೈಕಮಾಂಡ್​ ಸಮಯ ಕೇಳಿರೋದು ಕುತೂಹಲ ಡಬಲ್​​ ಮಾಡಿದೆ.

ಕುರ್ಚಿ ಕುರುಕ್ಷೇತ್ರಕ್ಕೆ ಕ್ಲೈಮ್ಯಾಕ್ಸ್​​!

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ​ ಸಮುದ್ರ ಮಂಥನ ನಡೆಸಲಿದ್ದಾರೆ. ಈ ವೇಳೆ ನಾಯಕತ್ವ ಬದಲಾವಣೆ, ಪವರ್ ಶೇರಿಂಗ್ ಕುರಿತು ಚರ್ಚೆ ನಡೆಸೋ ಸಾಧ್ಯತೆ ಇದೆ. ಅದರಲ್ಲೂ ಪ್ರಮುಖವಾಗಿ ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ಜೋರಾಗಿ ನಡೀತಿದೆ. ಸದ್ಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ರೂ ಒಳಗೊಳಗೆ ಗೊಂದಲದ ಗೂಡುಕಟ್ಟಿದೆ. ಕೆಲ ನಾಯಕರು ಬಹಿರಂಗವಾಗಿ ತಮ್ಮ ಅನಿಸಿಕೆಗಳಿಗೆ ಪದಪುಂಜ ಕಟ್ಟಿ ಸ್ವರ ಸೇರಿಸ್ತಿದ್ದಾರೆ. ಈ ಬಗ್ಗೆ ಡಿಕೆಶಿ ಹಾಗೂ ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನ ಹೈಕಮಾಂಡ್ ಮುಂದಿಡಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಸೆಪ್ಟೆಂಬರ್ ಕ್ರಾಂತಿ ಹಲ್​ಚಲ್.. ಕುತೂಹಲ ಮೂಡಿಸಿದ ಸಿದ್ದು, ಡಿಕೆಶಿ ನಡೆ..!

ಸಿಎಂ ವಾದ ಏನಿರುತ್ತೆ?

ಸಿಎಂ ಆಗಿ ಅಭಿವೃದ್ಧಿ ಪರ ಕೆಲಸದ ಜೊತೆಗೆ ಪಕ್ಷದ ವರ್ಚಸ್ಸು ಹೆಚ್ಚಿಸುವ ಕಾರ್ಯಗಳನ್ನ ಮಾಡ್ತಿದ್ದೇನೆ. ಸರ್ಕಾರಕ್ಕೆ ಎಲ್ಲಾ ಸಮುದಾಯದ ಬೆಂಬಲ ಇದೆ. ಕೆಲ ಸಚಿವರ ಬಹಿರಂಗ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ 5 ವರ್ಷ ಸಿಎಂ ಅಂತ ಅನ್ನೋದು ಅವರ ಅಭಿಪ್ರಾಯ. ಶಾಸಕರ ಅಭಿಪ್ರಾಯ ಆಧರಿಸಿ 5 ವರ್ಷ ಸಿಎಂ ಎಂದಿದ್ದೇನೆ. ಕೆಲ ಶಾಸಕರಿಂದ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲ ಆಗ್ತಿದೆ.

ಇದನ್ನೂ ಓದಿ: ಇಂದು ಹೈಕಮಾಂಡ್ ಜೊತೆ CM ಸಿದ್ದು 4 ವಿಚಾರ ಚರ್ಚೆ -ರಾಯರೆಡ್ಡಿಗೆ ವಾರ್ನಿಂಗ್ ಕೊಟ್ಟ ಸುರ್ಜೇವಾಲ

ಡಿಸಿಎಂ ಡಿಕೆಶಿ ಕೂಡ ತಮ್ಮದೇ ಲೆಕ್ಕಾಚಾರದಲ್ಲಿದ್ದಾರೆ.. ಅಟ್​​​ ಎನಿ ಕಾಸ್ಟ್​​ ಅಧಿಕಾರ ಬೇಕೆ ಬೇಕು ಅನ್ನೋ ವಾದಕ್ಕೆ ಅಂಟ್ಕೊಂಡಿದ್ದಾರೆ..

ಡಿಕೆಶಿ ವಾದ ಏನಿರುತ್ತೆ?

ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ನನ್ನ ಶ್ರಮವಿದೆ. ನನ್ನ ಪರಿಶ್ರಮದ ಬಗ್ಗೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಗೊತ್ತು. ನಾನೇ 5 ವರ್ಷ ಸಿಎಂ ಎಂದು ಸಿದ್ದರಾಮಯ್ಯ ಘೋಷಿಸಿದ್ದೇಕೆ? ಈ ಬಗ್ಗೆ ಹೈಕಮಾಂಡ್​ನ ಸೂಚನೆ ಇತ್ತಾ? ಕೆಲ ಸಚಿವರು ಸಿದ್ದರಾಮಯ್ಯ 5 ವರ್ಷ ಸಿಎಂ ಅಂತ ಹೇಳ್ತಿದ್ದಾರೆ. ಅದರಂತೆ ಕೆಲ ಶಾಸಕರೂ ನನ್ನ ಪರ ಮಾತಾಡಿದ್ರೆ ತಪ್ಪೇನು? ಚುನಾವಣೆ ವೇಳೆ ನನ್ನ ಪರ ಸಮುದಾಯ ನಿಂತಿದ್ದೇ ಸಿಎಂ ಆಗಲೆಂದು. ನಾಯಕತ್ವ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. 2028ಕ್ಕೆ ಪಕ್ಷ ಅಧಿಕಾರಕ್ಕೆ ತರುವ ಹೊಣೆ ನನ್ನದು, ನನ್ನ ಸೇವೆ ಪರಿಗಣಿಸಿ. ಸಿಎಂ ಸ್ಥಾನದ ಬಗ್ಗೆ ತೀರ್ಮಾನಕ್ಕೆ ಇದು ಸೂಕ್ತ ಸಮಯ.

ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಅಮಿತ್ ಶಾ -ಮುಂದೆ ಏನು ಮಾಡ್ತಾರಂತೆ ಗೊತ್ತಾ..?

ಅಧಿಕಾರದ ಆಟ ಕುತೂಹಲ ಘಟ್ಟ ತಲುಪಿರೋದು ಸುಳ್ಳಲ್ಲ.. ತಂಡದ ನಾಯಕತ್ವಕ್ಕಾಗಿ ಕ್ಯಾಪ್ಟನ್, ವೈಸ್ ಕ್ಯಾಪ್ಟನ್, ದೆಹಲಿಯ ಕೋಚ್​ ಮುಂದೆ ಬೈಠಕ್ ಹಾಕಿದ್ದಾರೆ. ಟೀಮ್​ನಲ್ಲಿ ಸ್ಥಾನ ಪಡೆಯೋಕೆ ಹೊಸ ಮುಖಗಳ ಪ್ರಯತ್ನ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment