ಇವತ್ತು ಸೂರ್ಯ ಗ್ರಹಣ.. ಯುಗಾದಿ ಹಿನ್ನೆಲೆಯಲ್ಲಿ ಧಾರ್ಮಿಕವಾಗಿ ಭಾರೀ ಮಹತ್ವ..!

author-image
Ganesh
Updated On
ಏನಿದು ಬೆಂಕಿ ಉಂಗುರ ಸೂರ್ಯಗ್ರಹಣ ? ವರ್ಷದ ಕಟ್ಟ ಕಡೆಯ ಗ್ರಹಣದಿಂದ ಅಪಾಯ ಕಾದಿದೆಯಾ?
Advertisment
  • ಇಂದು ವರ್ಷದ ಮೊದಲನೇ ಸೂರ್ಯ ಗ್ರಹಣ
  • ಗ್ರಹಣ ಗೋಚರ ಆಗುವ ಸಮಯ ಯಾವುದು?
  • ಭಾರತದಲ್ಲಿ ಈ ಸೂರ್ಯ ಗ್ರಹಣ ಗೋಚರ ಆಗುತ್ತಾ?

ಯುಗಾದಿ ಹಬ್ಬಕ್ಕೂ ಮುನ್ನವೇ ಈ ವರ್ಷದ ಮೊದಲನೇ ಸೂರ್ಯಗ್ರಹಣ ಇಂದು ಸಂಭವಿಸಲಿದೆ. ಈ ಸೂರ್ಯ ಗ್ರಹಣವು ಭಾಗಶಃ ಸೂರ್ಯ ಗ್ರಹಣವಾಗಿದ್ದು ಭಾರತೀಯ ಕಾಲಮಾನ ಇಂದು ಮಧ್ಯಾಹ್ಮ 2:21 ರಿಂದ ಸಂಜೆ 6:14ರವರೆಗೆ ಸಂಭವಿಸಲಿದೆ.

ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈಶಾನ್ಯ ಅಮೆರಿಕ, ಕೆನಡಾದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಒಂದು ಗ್ರಹ ಅಥವಾ ಉಪಗ್ರಹದ ನೆರಳು ಭಾಗಶಃ ಅಥವಾ ಸಂಪೂರ್ಣ ಇನ್ನೊಂದರ ಮೇಲೆ ಬಿದ್ದಾಗ ಗ್ರಹಣವೆಂಬ ವಿದ್ಯಮಾನ ನಡೆಯುತ್ತದೆ. ಸೂರ್ಯ, ಚಂದ್ರ ಮತ್ತು ಭೂಮಿ ಒಂದು ಸರಳ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ.

ಇದನ್ನೂ ಓದಿ: ಹೊಸ ಸ್ಟಾರ್ ಉದಯ..13 ಬಾಲ್​​ನಲ್ಲಿ 34 ರನ್ ಚಚ್ಚಿದ ಅನಿಕೇತ್ ವರ್ಮಾ ಯಾರು?

ಎಲ್ಲೆಲ್ಲಿ ಗೋಚರ..?

ಭಾರತದಲ್ಲಿ ಸೂರ್ಯಗ್ರಹಣ ಗೋಚರ ಆಗಲ್ಲ. ಆದರೆ ಏಷ್ಯಾ, ಆಫ್ರಿಕಾ, ಯುರೋಪ್, ಅಟ್ಲಾಂಟಿಕ್ ಸಾಗರ, ಅಮೆರಿಕ, ಸೈಬೇರಿಯಾ, ರಷ್ಯಾ, ಗ್ರೀನ್​ಲ್ಯಾಂಡ್, ವೆಸ್ಟರ್ಟ್ ಯುರೋಪ್​ನಲ್ಲಿ ಗ್ರಹಣ ಗೋಚರ ಆಗಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣಗಳನ್ನು ಬಹಳ ವಿಶೇಷ ಘಟನೆಗಳೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಪೂಜೆ ಅಥವಾ ಆಹಾರ ಸೇವನೆಯಂತಹ ಯಾವುದೇ ಶುಭ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಯುಗಾದಿಗೂ ಮೊದಲು ಸೂರ್ಯ ಗ್ರಹಣವಿರುವುದರಿಂದ ಧಾರ್ಮಿಕವಾಗಿ ಮಹತ್ವ ಪಡೆದುಕೊಂಡಿದೆ. 30-50 ವರ್ಷಗಳ ಬಳಿಕ ಆರು ರಾಶಿಗಳು ಒಟ್ಟಿಗೆ ಒಂದೇ ಗ್ರಹದಲ್ಲಿ ಸಮ್ಮಿಲನವಾಗಲಿದ್ದು ಇದು ಷಡ್ ಗ್ರಹಯೋಗ ಎನಿಸಿದೆ. ಈ ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹಬ್ಬದ ದಿನದಂದು (ಮಾರ್ಚ್​ 14) ಬಂದಿತ್ತು.

ಇದನ್ನೂ ಓದಿ: ಅದೊಂದು ತಪ್ಪಿನಿಂದ ಗೆಲುವಿಗೆ ದಕ್ಕೆ ಬಂತು; ಸೋತ ಬೆನ್ನಲ್ಲೇ ಗಾಯಕ್ವಾಡ್ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment