newsfirstkannada.com

Sonu Gowda: ಹುಟ್ಟುಹಬ್ಬದ ಸಂಭ್ರಮದಲ್ಲಿ ಸೋನು ಗೌಡ.. ಅಕ್ಕನ ಫೋಟೋ ಹಂಚಿಕೊಂಡ ತಂಗಿ

Share :

Published March 23, 2024 at 4:20pm

Update March 23, 2024 at 4:22pm

    ಇಂದು ಬರ್ತ್​​ ಡೇ ಸಂತಸದಲ್ಲಿರುವ ಸ್ಯಾಂಡಲ್​ವುಡ್​ ನಟಿ

    ಪರಮೇಶ ಪಾನ್​ವಾಲ ಮೂಲಕ ಸ್ಯಾಂಡಲ್​​ವುಡ್​ಗೆ ಕಾಲಿಟ್ಟ ನಟಿ

    ಕನ್ನಡ ಮಾತ್ರವಲ್ಲದೆ, ತಮಿಳು, ಮಲಯಾಳಂನಲ್ಲೂ ನಟಿಸಿದ್ದಾರೆ

ಸ್ಯಾಂಡಲ್​ವುಡ್​ ನಟಿ ಸೋನು ಗೌಡ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 34ನೇ ವರ್ಷದ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಇವರು ಮೇಕಪ್​ ಕಲಾವಿದ ರಾಮಕೃಷ್ಣ ಅವರ ಮಗಳು.

ಇಂತಿ ನಿನ್ನ ಪ್ರೀತಿಯ ಸಿನಿಮಾದ ಮೂಲಕ ಇಂಡಸ್ಟ್ರೀಗೆ ಕಾಲಿಟ್ಟ ನಟಿ ಪರಮೇಶ ಪಾನ್ವಾಲ, ಗುಲಾಮಾ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಸಹೋದರಿ ನೇಹಾ ಗೌಡ ಕೂಡ ಸೀರಿಯಲ್​ ನಟಿಯಾಗಿದ್ದು, ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚಾ ಸುದೀಪ್​? ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ರನ್ನ

2008ರಿಂದ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಕಳೆದ ವರ್ಷ ಮರೀಚಿ, ಅಫೋರಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಇದಲ್ಲದೆ, ಜೊತೆ ಜೊತೆಯಲಿ ಸೀರಿಯಲ್​ನಲ್ಲೂ ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಂದು ಸೋನು ಗೌಡ 34ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ಇನ್ನು ಸೋನು ಗೌಡ ಕನ್ನಡ ಮಾತ್ರವಲ್ಲ, ತಮಿಳು, ಮಲಯಾಳಂ, ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರಿಗೆ ಕಿರಗೂರಿನ ಗಯ್ಯಾಳಿಗಳು ಸಿನಿಮಾಗೆ ಫಿಲ್ಮ್​ಫೇರ್​ ಪ್ರಶಸ್ತಿ ಕೂಡ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sonu Gowda: ಹುಟ್ಟುಹಬ್ಬದ ಸಂಭ್ರಮದಲ್ಲಿ ಸೋನು ಗೌಡ.. ಅಕ್ಕನ ಫೋಟೋ ಹಂಚಿಕೊಂಡ ತಂಗಿ

https://newsfirstlive.com/wp-content/uploads/2024/03/Sonu-Gowda-7.jpg

Load More