/newsfirstlive-kannada/media/post_attachments/wp-content/uploads/2024/04/RCB-27.jpg)
ಐಪಿಎಲ್​​ನಲ್ಲಿ ಸತತ ಸೋಲುಗಳನ್ನು ಕಾಣುತ್ತಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್​ ಇಂದು ಮತ್ತೊಮ್ಮೆ ಸನ್​ ರೈಸರ್ಸ್ ಹೈದ್ರಾಬಾದ್ ತಂಡವನ್ನು ಎದುರಿಸುತ್ತಿದೆ. ಇಂದು ಸಂಜೆ 7.30ಕ್ಕೆ ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಹಠಾತ್ ಹೃದಯಾಘಾತ, ಕುಸಿದುಬಿದ್ದು ಬಿಜೆಪಿ ಸಂಸದ ನಿಧನ; ಸಿಎಂ ಸಂತಾಪ
/newsfirstlive-kannada/media/post_attachments/wp-content/uploads/2024/04/SIRAJ.jpg)
ಆರ್​ಸಿಬಿ ವಿರುದ್ಧ ಕಳೆದ ಬಾರಿಯ ಪಂದ್ಯದಲ್ಲಿ ಹೈದರಾಬಾದ್ ತಂಡವು 287 ರನ್​​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ ಆಗಿದೆ. ಇಲ್ಲಿಯವರೆಗೆ 8 ಪಂದ್ಯಗಳನ್ನು ಆಡಿರುವ ಆರ್​ಸಿಬಿ, 7 ರಲ್ಲಿ ಸೋತು ಭಾರೀ ಮುಖಭಂಗ ಅನುಭವಿಸಿದೆ. ಹೀಗಾಗಿ ಇವತ್ತಿನ ಪಂದ್ಯವನ್ನು ಗೆಲ್ಲಲೇಬೇಕಿದೆ.
ಗೆಲುವಿನ ಹುಡುಕಾಟದಲ್ಲಿರುವ ಆರ್​ಸಿಬಿ ಇವತ್ತು ಪ್ಲೇಯಿಂಗ್-11ರಲ್ಲಿ ಬದಲಾವಣೆ ಮಾಡಿದರೂ ಅಚ್ಚರಿ ಇಲ್ಲ. ವಿರಾಟ್ ಕೊಹ್ಲಿ, ವಿಲ್ ಜಾಕ್ಸ್​, ರಜತ್ ಪಾಟಿದಾರ್, ಕೆಮರೂನ್ ಗ್ರೀನ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೋಮ್ರಾರ್, ಕರಣ್ ಶರ್ಮಾ, ಫೆರ್ಗುಸನ್, ಯಶ್ ದಯಾಳ್, ಮೊಹ್ಮದ್ ಸಿರಾಜ್ ಆಡಿದ್ದರು. ಸಿರಾಜ್ ಅವರು ಕಳೆದ ಬಾರಿ ತುಂಬಾನೇ ದುಬಾರಿ ಆಗಿದ್ದರು. ಹೀಗಾಗಿ ಅವರನ್ನು ಬೆಂಚ್​​ನಲ್ಲಿ ಕೂರಿಸಿದ್ದರೂ ಅಚ್ಚರಿ ಇಲ್ಲ. ಹೈದ್ರಾಬಾದ್​ ವಿರುದ್ಧ ಆರ್​ಸಿಬಿ ಒಟ್ಟು 24 ಪಂದ್ಯಗಳನ್ನು ಆಡಿದೆ. ಅದರಲ್ಲಿ 13 ಪಂದ್ಯಗಳಲ್ಲಿ ಸೋತು 10 ರಲ್ಲಿ ಗೆದ್ದುಕೊಂಡಿದೆ.
ಇದನ್ನೂ ಓದಿ:ವಿಶ್ವದ ಮೊದಲ ‘Miss AI’ ಸೌಂದರ್ಯ ಸ್ಪರ್ಧೆ, ಗೆದ್ದ ಸುಂದರಿಗೆ ಬಂಪರ್ ಲಾಟರಿ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us