Advertisment

ವಿಶ್ವಕಪ್ ಗೆದ್ದ ತಂಡಕ್ಕೆ ಎಷ್ಟು ಕೋಟಿ ಬಹುಮಾನ ಸಿಗುತ್ತೆ.. ರನ್ನರ್​​ ಅಪ್​​ಗೂ ಇದೆ ಬಂಪರ್ ಲಾಟರಿ..!

author-image
Ganesh
Updated On
ವಿಶ್ವಕಪ್ ಗೆದ್ದ ತಂಡಕ್ಕೆ ಎಷ್ಟು ಕೋಟಿ ಬಹುಮಾನ ಸಿಗುತ್ತೆ.. ರನ್ನರ್​​ ಅಪ್​​ಗೂ ಇದೆ ಬಂಪರ್ ಲಾಟರಿ..!
Advertisment
  • ಟಿ20 ವಿಶ್ವಕಪ್​​ ಹಬ್ಬಕ್ಕೆ ಇವತ್ತು ತೆರೆ ಬೀಳಲಿದೆ
  • ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ-ಭಾರತ ಸೆಣಸಾಟ
  • ಗೆದ್ದವರಿಗೆ ಐಸಿಸಿ ನೀಡುವ ಬಹುಮಾನ ಎಷ್ಟು ಗೊತ್ತಾ?

ಟಿ20 ವಿಶ್ವಕಪ್​​ಗೆ ಇವತ್ತು ತೆರೆ ಬೀಳಲಿದೆ. ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡ ಸೆಣಸಾಟ ನಡೆಸಲಿವೆ. ಇಲ್ಲಿ ಗೆದ್ದವರಿಗೆ ಬಂಪರ್ ಬಹುಮಾನ ಸಿಗಲಿದೆ.

Advertisment

ಟಿ20 ವಿಶ್ವಕಪ್ ಘೋಷಣೆ ಮಾಡಿದಾಗ ಐಸಿಸಿ ಒಟ್ಟು 2.45 ಮಿಲಿಯನ್ ಅಮೆರಿಕನ್ ಡಾಲರ್ ಘೋಷಣೆ ಮಾಡಿತ್ತು. ಭಾರತೀಯ ಕರೆನ್ಸಿಯಲ್ಲಿ ಅದರ ಮೌಲ್ಯ ಸುಮಾರು ರೂ 20.42 ಕೋಟಿಗೆ ಸಮನಾಗಿದೆ. 2022ರಲ್ಲಿ ನಡೆದ ವಿಶ್ವಕಪ್‌ಗೆ ಹೋಲಿಸಿದರೆ ಬಹುಮಾನದ ಮೊತ್ತ ದುಪ್ಪಟ್ಟಾಗಿದೆ. ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡಕ್ಕೆ 13.3 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು.

ಇದನ್ನೂ ಓದಿ:ಇವತ್ತು ವಿಶ್ವಕಪ್​​ ಫೈನಲ್.. ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ವಿರಾಟ್ ಕೊಹ್ಲಿ ಔಟ್​​..?

publive-image

ವಿಜೇತ ತಂಡಕ್ಕೆ ಎಷ್ಟು ಕೋಟಿ ಸಿಗುತ್ತೆ..?
ವಿಶ್ವಕಪ್ ಫೈನಲ್​​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದೆ. ಇಲ್ಲಿ ಗೆದ್ದವರಿಗೆ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರಿ 20.4 ಕೋಟಿ ರೂಪಾಯಿಗಳ ಬಹುಮಾನ ಸಿಗಲಿದೆ. , ರನ್ನರ್ ಅಪ್​ಗೆ 10.6 ಕೋಟಿ ರೂಪಾಯಿ ಸಿಗಲಿದೆ. ಸೆಮಿ ಫೈನಲ್​​​ನಲ್ಲಿ ಸೋತ ತಂಡಗಳಿಗೆ ತಲಾ 6.5 ಕೋಟಿ ರೂಪಾಯಿ ಸಿಗಲಿದೆ.

Advertisment

ಇದನ್ನೂ ಓದಿ: ಕೊಹ್ಲಿ ವಿರುದ್ಧ ಜನ ಭಾರೀ ಆಕ್ರೋಶ.. ಆದರೂ ಸ್ನೇಹಿತನ ಬಿಟ್ಟು ಕೊಡದ ಕ್ಯಾಪ್ಟನ್ ರೋಹಿತ್ ಶರ್ಮಾ

publive-image

ಇತರೆ ತಂಡಗಳಿಗೂ ಝಣ ಝಣ ಕಾಂಚಾಣ
4 ಸೆಮಿಫೈನಲ್ ತಂಡಗಳಲ್ಲದೇ ಸೂಪರ್-8 ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗದ 4 ತಂಡಗಳಿಗೂ ಸಾಕಷ್ಟು ಹಣವನ್ನು ನಿಗದಿಪಡಿಸಲಾಗಿದೆ. ಸೂಪರ್-8ರಲ್ಲಿ ಆಡಿದ ಪ್ರತಿ ತಂಡಕ್ಕೆ ಅಂದಾಜು 3.19 ಕೋಟಿ ರೂ. ಬಹುಮಾನ ಸಿಗಲಿದೆ. ಗ್ರೂಪ್ ಹಂತದಲ್ಲೇ ಹೊರಬಿದ್ದ ತಂಡಗಳಿಗೂ ಐಸಿಸಿ ಬೇಸರ ಮಾಡುವುದಿಲ್ಲ. ಒಟ್ಟು 12 ತಂಡಗಳಿಗೂ ಪ್ರಯೋಜನ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment