ಇಂದು ತರುಣ್​-ಸೋನಲ್ ಮದ್ವೆ.. ನಿರ್ದೇಶಕನ ಕೈ ಹಿಡಿಯುತ್ತಿರೋ ಈ ನಟಿ​ ಯಾರು? ಮೂಲತಃ ಎಲ್ಲಿಯವ್ರು?

author-image
AS Harshith
Updated On
ಇಂದು ತರುಣ್​-ಸೋನಲ್ ಮದ್ವೆ.. ನಿರ್ದೇಶಕನ ಕೈ ಹಿಡಿಯುತ್ತಿರೋ ಈ ನಟಿ​ ಯಾರು? ಮೂಲತಃ ಎಲ್ಲಿಯವ್ರು?
Advertisment
  • ತರುಣ್​ ಬಾಳಲ್ಲಿ ಬೆಳಕಿನ ಕವಿತೆ ಓದಲು ಮುಂದಾದ ಸೋನಲ್​
  • ಸೋನಲ್​ ಮೊಂತೆರೊ ಎಲ್ಲಿಯವರು ಗೊತ್ತಾ? ಅವರ ಹಿನ್ನಲೆ ಏನು?
  • ನಟಿಯನ್ನು ವರಿಸುತ್ತಿರುವ ನಿರ್ದೇಶಕ ತರುಣ್​.. ಇಂದು ಪಿಪಿಡುಂಡುಂ

ಸ್ಯಾಂಡಲ್​ವುಡ್​ ಖ್ಯಾತ ನಟ ದಿ. ಸುಧೀರ್​ ಅವರ 2ನೇ ಮಗ ತರುಣ್​ ಸುಧೀರ್ ಇಂದು ವಿವಾಹ ಸಂಭ್ರಮದಲ್ಲಿದ್ದಾರೆ. ನಟಿ ಸೋನಲ್​ ಮೊಂತೆರೊ ಅವರನ್ನು ವರಿಸುತ್ತಿದ್ದಾರೆ. ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೆಸ್​ನಲ್ಲಿ ಈ ಜೋಡಿ ವಿವಾಹಬಂದಿಯಾಗುತ್ತಿದ್ದಾರೆ.

ಅಂದಹಾಗೆಯೇ ಸ್ಟಾರ್​ ನಿರ್ದೇಶಕ ತರುಣ್​ ಸುಧೀರ್​ ಅವರನ್ನು ವಿವಾಹವಾಗುತ್ತಿರುವ ನಟಿ ಸೋನಲ್​ ಯಾರು? ಅವರು ಮೂಲತಃ ಎಲ್ಲಿಯವರು? ಈವರೆಗೆ ಅವರು ಮಾಡಿದ ಸಿನಿಮಾಗಳು ಯಾವ್ಯಾವುವು? ಈ ಬಗ್ಗೆ ಮಾಹಿತಿ ಇಲ್ಲಿದೆ.

publive-image

ಇದನ್ನೂ ಓದಿ: ಅಪಾಯದಲ್ಲಿ ತುಂಗಭದ್ರಾ ಡ್ಯಾಂ.. ಅಧಿಕಾರಿಗಳಿಂದ ಹೈ-ವೋಲ್ಟೇಜ್ ಮೀಟಿಂಗ್.. ಮುಂದಿನ ನಡೆಯೇನು? 

ಸೋನಲ್​ ಮೊಂತೆರೊ ಮೂಲತಃ ಮಂಗಳೂರಿನವರು. ತುಳು ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. 2015ರಲ್ಲಿ ತುಳು ಭಾಷೆಯ 'ಎಕ್ಕ ಸಕ' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು.

ಸೋನಲ್​ ಅವರು, ‘ಜೈ ತುಳುನಾಡು’, ‘ಪಿಲಿಬೈಲ್‌ ಯಮುನಕ್ಕ’ ತುಳು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಬಳಿಕ 2018ರಲ್ಲಿ ‘ಅಭಿಸಾರಿಕೆ’‌ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಪ್ರವೇಶ ಪಡೆದರು. ಅದೇ ವರ್ಷ ಒಳ್ಳೇ ಹುಡುಗ ಪ್ರಥಮ್ ಜೊತೆ 'ಎಂಎಲ್‌ಎ' ಚಿತ್ರದಲ್ಲಿ ನಟಿಸಿದರು.

publive-image

ಇದನ್ನೂ ಓದಿ: ಮತ್ತೊಂದು ಅಪಾಯದ ಮುನ್ಸೂಚನೆ! ಕಿತ್ತು ಹೋದ ತುಂಗಭದ್ರಾ ಡ್ಯಾಂನ ಕ್ರಸ್ಟ್​ಗೇಟ್,​ ಮುಳುಗುವ ಭೀತಿಯಲ್ಲಿ ಕಂಪ್ಲಿ ಸೇತುವೆ

ಇದಾದ ಬಳಿಕ ‘ಮದುವೆ ದಿಬ್ಬಣ’ ಚಿತ್ರದಲ್ಲಿ ನಾಯಕಿಯಾಗಿ ಸೋನೆಲ್ ಕಾಣಿಸಿಕೊಂಡರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ಪಂಚತಂತ್ರ' ಚಿತ್ರಕ್ಕೆ ಸೋನೆಲ್ ನಾಯಕಿಯಾಗಿ ಮಿಂಚಿದರು. 2021ರಲ್ಲಿ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದಲ್ಲಿ ಕಾಣಸಿಕೊಂಡರು.

‘ರಾಬರ್ಟ್’ ಚಿತ್ರದಲ್ಲಿ ವಿನೋದ್ ಪ್ರಭಾಕರ್​​ಗೆ ಸೋನಲ್​ ಜೋಡಿಯಾಗಿ ಕಾಣಿಸಿಕೊಂಡರು. ಅಂದಹಾಗೆಯೇ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು. ‘ರಾಬರ್ಟ್’​ ಚಿತ್ರದಿಂದಲೇ ತರುಣ್ ಮತ್ತು ಸೋನಲ್ ನಡುವೆ ಆತ್ಮೀಯತೆ ಹೆಚ್ಚಾಗಿ ಕೊನೆಗೆ ಪ್ರೀತಿ ಹುಟ್ಟಿಕೊಂಡಿತು.

publive-image

ಇದನ್ನೂ ಓದಿ: Darshan: ಮನೆಯೂಟನಾ? ಜೈಲೂಟವೇ ಗತಿನಾ? ಇಂದು ದರ್ಶನ್​ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ

ರಾಬರ್ಟ್ ಸಿನಿಮಾ ತರುಣ್ ಸುಧೀರ್ ಹಾಗೂ ಸೋನಲ್​ಗೆ ಬ್ರೇಕ್‌ ಕೊಟ್ಟ ಚಿತ್ರ. ಈ ಸಿನಿಮಾದಲ್ಲಿ ನಟಿಸಿದ ಬಳಿಕ ದರ್ಶನ್ ಬಳಗದಲ್ಲಿ ಸೋನಲ್ ಹೆಚ್ಚಾಗಿ ಕಾಣಿಸಿಕೊಂಡರು. ‘ರಾಬರ್ಟ್’ ನಂತರ ‘ಗರಡಿ’ ಚಿತ್ರದಲ್ಲಿ‌ ಸೋನಲ್ ನಾಯಕಿಯಾದರು.

publive-image

ದರ್ಶನ್ ಆಪ್ತ ಯಶಸ್ ಸೂರ್ಯ ‘ಗರಡಿ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ದರ್ಶನ್ ಆಪ್ತರಾಗಿರುವ ಬಿಸಿ ಪಾಟೀಲ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಸದ್ಯ ಸೋನಲ್ ನಟನೆಯ ಎರಡು ಚಿತ್ರಗಳು ರಿಲೀಸ್ ಆಗಬೇಕಿದೆ. ಉಪೇಂದ್ರ ನಟನೆಯ ‘ಬುದ್ದಿವಂತ 2’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಮಾರ್ಗರೆಟ್ ಲವ್ ಆಫ್ ರಾಮಾಚಾರಿ’ ಚಿತ್ರದಲ್ಲೂ ಸೋನಲ್ ಅಭಿನಯಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment