/newsfirstlive-kannada/media/post_attachments/wp-content/uploads/2024/12/VARTHURU-PRAKASH.jpg)
ವರ್ತೂರ್ ಪ್ರಕಾಶ್ ಸ್ನೇಹಿತೆಯ ಸೋಗಿನಲ್ಲಿ ಚಿನ್ನದ ಉದ್ಯಮಿಗೆ ವಂಚನೆ ಮಾಡಿದ ಶ್ವೇತಾಗೌಡ ಪ್ರಕಣದ ವಿಚಾರವಾಗಿ ಇಂದು ಪೊಲೀಸರ ಮುಂದೆ ಮಾಜಿ ಸಚಿವ ವರ್ತೂರು ಪ್ರಕಾಶ್ ಹಾಜರಾಗಿಲಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಪೊಲೀಸರ ಎದುರು ಹಾಜರಾಗಲಿದ್ದಾರೆ.
ಈಗಾಗಲೇ ಆರೋಪಿ ಶ್ವೇತಾಗೌಡಳನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಫ್ರೇಜರ್ ಟೌನ್ ಎಸಿಪಿ ಗೀತಾ ನೇತೃತ್ವದ ತಂಡದಿಂದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ವೇಳೆ ವರ್ತೂರು ಪ್ರಕಾಶ್​ ಜೊತೆ ಆರೋಪಿ ಶ್ವೇತ ಸತತ ಸಂಪರ್ಕದಲ್ಲಿ ಇದ್ದಿದ್ದು ಕಂಡು ಬಂದಿದೆ. ಅಲ್ಲದೇ ವರ್ತೂರು ಪ್ರಕಾಶ್ ಜೊತೆ ಆರೋಪಿ ಇರುವ ಸಿಸಿಟಿವಿ ಫೂಟೇಜ್​ ಕೂಡ ಪೊಲೀಸರು ಕಲೆ ಹಾಕಿದ್ದಾರೆ.
ನಾನು ಶ್ವೇತಾಗೌಡ, ಸಮಾಜ ಸೇವಕಿ, ನಾನು ವರ್ತೂರ್​​ ಪ್ರಕಾಶ್​ ಆಪ್ತೆ. ಸಮಾಜ ಸೇವಕಿ ಅಂತ ಹೇಳ್ಕೊಳ್ತಿದ್ದ ಬಾಗಲಗುಂಟೆ ನಿವಾಸಿ ಶ್ವೇತಾಗೆ ಆಸೆ ಇದ್ದಿದ್ದೆಲ್ಲಾ ಚಿನ್ನದ ಮೇಲಷ್ಟೇ. ವರ್ತೂರು​​ ಪ್ರಕಾಶ್​ ಆಪ್ತೆ ಅಂತ ಹೇಳಿಕ್ಕೊಂಡು ಕೆಲ ದಿನಗಳ ಹಿಂದೆಯಷ್ಟೇ ಅವೆನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್ ಮಳಿಗೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಸುಮಾರು 2.42 ಕೋಟಿ ರೂ ಮೌಲ್ಯದ ಆಭರಣವನ್ನು ಖರೀದಿಸಿದ್ದರು. ಹಣ ಕೇಳಿದ್ದಕ್ಕೆ ಚಿನ್ನದ ವ್ಯಾಪಾರಿಗೆ ಧಮ್ಕಿ ಹಾಕಿದ್ದರಂತೆ. ಬಳಿಕ ನಗರದ ಡಾಲರ್ಸ್ ಕಾಲೋನಿಯಲ್ಲಿರೋ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಮನೆ ಅಡ್ರೆಸ್​​ ಕೊಟ್ಟಿದ್ದರು.
ಇದನ್ನೂ ಓದಿ:CT ರವಿ ಮೇಲೆ ಹಲ್ಲೆಗೆ ಯತ್ನಿಸಿದವ್ರ ಮೇಲೆ ಇನ್ನೂ ಆಗಿಲ್ಲ ಕ್ರಮ; ಭಾರೀ ಅನುಮಾನ ಮೂಡಿಸಿದ ಪೊಲೀಸರ ನಡೆ
ಚಿನ್ನದ ಬಿಲ್ ಹಣ ಸಿಗದಿದ್ದಾಗ ಅಂಗಡಿ ಮಾಲೀಕ ಸಂಜಯ್ ಭಾಷ್ನ, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಎಸಿಪಿ ಗೀತಾ ಆರೋಪಿ ಹಿಂದೆ ಬೀಳ್ತಿದ್ದಂತೆ, ಟೆಂಟ್ ಎತ್ತಿದ ಶ್ವೇತಾಗೌಡ ಮೈಸೂರಿಗೆ ಎಸ್ಕೇಪ್ ಆಗಿದ್ದಾರೆ. ಆದ್ರೂ ಬೆನ್ನು ಬಿದ್ದ ಪೊಲೀಸರು, ಬಂಗಾರದ ಅಂಗಡಿಯವರಿಗೆ ಟೋಪಿ ಹಾಕಿದ್ದ ಶ್ವೇತಾ ಕೈಗೆ, ಸ್ಟೀಲ್ ಕೋಳ ತೊಡಿಸಿದ್ದಾರೆ. ಚಿನ್ನ, ಕಾರು ಸೇರಿದಂತೆ ಆಕೆಗೆ ಸಂಬಂಧಿಸಿದ ವಸ್ತುಗಳು ಜಪ್ತಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us