Dwarakish Funeral: ಇಂದು ದ್ವಾರಕೀಶ್​​ ಅಂತ್ಯಕ್ರಿಯೆ, ಅಂತಿಮ ದರ್ಶನ ಎಲ್ಲಿ ನಡೆಯುತ್ತಿದೆ?

author-image
Ganesh
Updated On
Dwarakish Funeral: ಇಂದು ದ್ವಾರಕೀಶ್​​ ಅಂತ್ಯಕ್ರಿಯೆ, ಅಂತಿಮ ದರ್ಶನ ಎಲ್ಲಿ ನಡೆಯುತ್ತಿದೆ?
Advertisment
  • ಚಂದನವನದ ಕುಳ್ಳ, ಹಿರಿಯ ನಟ ದ್ವಾರಕೀಶ್ ವಿಧಿವಶ
  • ಬೆಳಗ್ಗೆ 11 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ
  • ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿರುವ ವಿಧಿವಿಧಾನ

ಚಂದನವನದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ ದ್ವಾರಕೀಶ್ ಯುಗಾಂತ್ಯವಾಗಿದೆ.

ಇದನ್ನೂ ಓದಿ:ದ್ವಾರಕೀಶ್ ಆರೋಗ್ಯದಲ್ಲಿ ಏನಾಗಿತ್ತು..? ಸಾಯುವ ಕೊನೇ ಕ್ಷಣಗಳು ಹೇಗಿದ್ದವು..?

ಸ್ಯಾಂಡಲ್​ವುಡ್​ನ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದ ಕನ್ನಡ ಸಿನಿಲೋಕದ ದಿಗ್ಗಜ ದ್ವಾರಕೀಶ್​ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಸಿಗಲಿದೆ. 11 ಗಂಟೆಯ ನಂತರ ಚಾಮರಾಜಪೇಟೆಯ ಟಿಆರ್ ಮಿಲ್​​ನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ಕಾರ್ಯ ನಡೆಯಲಿದೆ.

ಇದನ್ನೂ ಓದಿ:ಬ್ರೇಕ್ ಫೇಲ್, ಬೆಳಗಾವಿಯಲ್ಲಿ 20 ಪ್ರಯಾಣಿಕರಿದ್ದ ರಾಜಹಂಸ ಬಸ್​ ಪಲ್ಟಿ

ದ್ವಾರಕೀಶ್​ ಅವರಿಗೆ 81 ವರ್ಷವಾಗಿತ್ತು. ಅವರು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಅವರ ಪುತ್ರ ನೀಡಿದ ಮಾಹಿತಿಯಂತೆ ಮೊನ್ನೆ ರಾತ್ರಿ ಲೋಸ್​ ಮೋಷನ್ ಆಗಿತ್ತು. ಪರಿಣಾಮ ರಾತ್ರಿ ಇಡೀ ನಿದ್ರೆ ಮಾಡಿರಲಿಲ್ಲ. ಅದಕ್ಕೆ ನಿನ್ನೆ ಬೆಳಗ್ಗೆ ಎದ್ದವರು, ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ಮಲಗಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment