ಆರ್​ಸಿಬಿಗೆ ಕೈಕೊಟ್ಟ ಮೂವರು ಸ್ಟಾರ್​ಗಳು.. ಇಂದು ಕನ್ನಡತಿ ಶ್ರೇಯಾಂಕ ಪಾಟೀಲ್ ಮೇಲೆ ಭಾರೀ ನಿರೀಕ್ಷೆ..!

author-image
Ganesh
Updated On
RCB, ಶ್ರೇಯಾಂಕ ಪಾಟೀಲ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್.. ಹೊಸ ಸಮಾಚಾರ..!
Advertisment
  • ಇಂದಿನಿಂದ ಮಹಿಳಾ ಪ್ರೀಮಿಯರ್​ ಲೀಗ್​ ಟೂರ್ನಿ
  • 3ನೇ ಸೀಸನ್​ನ ಮೊದಲ ಪಂದ್ಯಕ್ಕೆ ವೇದಿಕೆ ಸಜ್ಜು
  • ರಾಯಲ್​ ಚಾಲೆಂಜರ್ಸ್​ಗೆ ಗುಜರಾತ್​ ಜೈಂಟ್ಸ್​ ಚಾಲೆಂಜ್

ಐದು ಫ್ರಾಂಚೈಸಿ, 22 ಪಂದ್ಯ, 4 ಸ್ಥಳ! ಮಹಿಳಾ ಮಣಿಗಳ ಮಿನಿ ಮಹಾ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಇಂದಿನಿಂದ ಮಹಿಳಾ ಪ್ರೀಮಿಯರ್​ ಲೀಗ್​ ಮಹಾ ಟೂರ್ನಿ ಆರಂಭವಾಗಲಿದ್ದು, ಕ್ರಿಕೆಟ್​ ಪ್ರೇಮಿಗಳ ಕಿಕ್​ ಹೆಚ್ಚಿಸಲು ಆಟಗಾರ್ತಿಯರು ಸಜ್ಜಾಗಿದ್ದಾರೆ.

ನಮ್ಮ​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಟೈಟಲ್​ ಡಿಫೆಂಡ್​ ಮಾಡಿಕೊಳ್ಳಲು ರೆಡಿಯಾಗಿದೆ. ಇನ್ನೊಂದೆಡೆ ಮೊದಲ ಆವೃತ್ತಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ 2ನೇ ಬಾರಿ ಟ್ರೋಫಿ ಗೆಲ್ಲುವ ತವಕದಲ್ಲಿದ್ರೆ, ಡೆಲ್ಲಿ ಕ್ಯಾಪಿಟಲ್ಸ್​, ಗುಜರಾತ್​ ಜೈಂಟ್ಸ್​ ಹಾಗೂ ಯು.ಪಿ ವಾರಿಯರ್ಸ್​ ಮೊದಲ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಕನಸು ಕಾಣ್ತಿವೆ.

ಇದನ್ನೂ ಓದಿ: ಕುಂಭ ಮೇಳ ಸುಂದರಿ ಮೊನಾಲಿಸಾಗೆ ಮತ್ತೊಂದು ದೊಡ್ಡ ಕೆಲಸ.. 15 ಲಕ್ಷ ರೂಪಾಯಿ ಸಂಬಳ!

publive-image

RCBಗೆ ಗುಜರಾತ್​ ಚಾಲೆಂಜ್

WPLನ ಮೊದಲ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಗುಜುರಾತ್​ ಜೈಂಟ್ಸ್​ ತಂಡಗಳು ಮುಖಾಮುಖಿಯಾಗ್ತಿವೆ. ಈ ಬಾರಿಯ ಟೂರ್ನಿಗೆ ಹಾಲಿ ಚಾಂಪಿಯನ್ ಎಂಬ ಟೈಟಲ್​ನೊಂದಿಗೆ​ ತಂಡವಾಗಿ ಕಣಕ್ಕಿಳಿಯುತ್ತಿರುವ ಆರ್​ಸಿಬಿ ಶುಭಾರಂಭದ ತವಕದಲ್ಲಿದೆ. ಸ್ಮೃತಿ ಮಂದಾನ, ಎಲ್ಲಿಸ್​ ಪೆರ್ರಿಯಂತ ಸ್ಟಾರ್​ ಆಟಗಾರ್ತಿಯರ ಬಲ ತಂಡಕ್ಕಿದೆ. ಈ ಹಿಂದಿದ್ದ ಸ್ಟಾರ್​​ ಆಟಗಾರ್ತಿಯರ ಅನುಪಸ್ಥಿತಿ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸೋ ಸಾಧ್ಯತೆ ಇದೆ.

ಬ್ಯಾಟರ್​ ಸೋಫಿ ಡಿವೈನ್​ ಅಲಭ್ಯ

ನ್ಯೂಜಿಲೆಂಡ್​ನ ಸ್ಫೋಟಕ ಬ್ಯಾಟರ್​ ಸೋಫಿ ಡಿವೈನ್​ ಈ ಬಾರಿ WPLನಿಂದ ಹೊರಗುಳಿದಿದ್ದು, ವೈಯಕ್ತಿಕ ಕಾರಣಗಳಿಂದ ಕ್ರಿಕೆಟ್​ನಿಂದ ಬ್ರೇಕ್​ ಪಡೆದಿದ್ದಾರೆ. ಇದು ಸಹಜವಾಗಿಯೇ ತಂಡವನ್ನು ಕಾಡಲಿದ್ದು, ಸೋಫಿಯ ಫಿಯರ್​ಲೆಸ್​ ಬ್ಯಾಟಿಂಗ್​ನ್ನು ತಂಡ ಮಿಸ್​ ಮಾಡಿಕೊಳ್ಳಲಿದೆ. ಇಂಜುರಿ ಕಾರಣಕ್ಕೆ ಆಸ್ಟ್ರೇಲಿಯಾದ ಸ್ಪಿನ್ನರ್​ ಸೋಫಿ ಮೊಲಿನೆಕ್ಸ್​ ಹಾಗೂ ಇಂಗ್ಲೆಂಡ್​ ಆಲ್​ರೌಂಡರ್​ ಕೇಟ್​ ಕ್ರಾಸ್​​ ಕೂಡ ತಂಡದಿಂದ ಹೊರಬಿದ್ದಿದ್ದಾರೆ. ಅನುಭವಿ ಆಟಗಾರ್ತಿಯ ಅನುಪಸ್ಥಿತಿ ಹಿನ್ನಡೆಯ ಭೀತಿಯನ್ನ ತಂದಿಟ್ಟಿದೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ದೊಡ್ಡ ವಿವಾದ.. ಅಗರ್ಕರ್ ವಿರುದ್ಧ ಭುಗಿಲೆದ್ದ ಆಕ್ರೋಶ..

publive-image

​ಪೆರ್ರಿ ಕಮ್​ಬ್ಯಾಕ್​, ತಂಡಕ್ಕೆ ಪವರ್​ ಪ್ಯಾಕ್​

ಈ ಸಮಸ್ಯೆಗಳ ನಡುವೆಯೂ ತಂಡಕ್ಕೆ ಖುಷಿಯ ವಿಚಾರವೆಂದರೆ, ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ ಎಲ್ಲಿಸ್​ ಪೆರ್ರಿ ಇಂಜುರಿಯಿಂದ ಗುಣಮುಖರಾಗಿ ತಂಡ ಸೇರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯಲ್ಲಿ ಗಾಯದ ಸಮಸ್ಯೆಗೆ ತುತ್ತಾದ ಪೆರ್ರಿ ಸಂಪೂರ್ಣವಾಗಿ ಗುಣಮುಖರಾಗಿ ತಂಡ ಸೇರಿಕೊಂಡಿದ್ದಾರೆ. ಪೆರ್ರಿ ಕಮ್​ಬ್ಯಾಕ್​ ಆರ್​​ಸಿಬಿ ಬಲ ಹೆಚ್ಚಿಸಿದೆ.

ಈ ಬಾರಿ ಹೊಸದಾಗಿ ಆರ್​ಸಿಬಿಗೆ ಸೇರ್ಪಡೆಯಾಗಿರುವ ಇಂಗ್ಲೆಂಡ್​ ಆಲ್​ರೌಂಡರ್​ ಡ್ಯಾನಿಯಲ್​ ವ್ಯಾಟ್​, ಇಂಗ್ಲೆಂಡ್​ ತಂಡವಷ್ಟೇ ಅಲ್ಲದೆ ಹತ್ತು ಹಲವು ಲೀಗ್​ ಹಾಗೂ ಕ್ಲಬ್​ ಮಾದರಿಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ. ಅದೇ ಅನುಭವವನ್ನು ಆರ್​ಸಿಬಿ ತಂಡಕ್ಕೂ ಧಾರೆ ಎರೆದರೆ, ಎದುರಾಳಿಗೆ ಸೋಲು ಕಟ್ಟಿಟ್ಟ ಬುತ್ತಿ. ಕೇಟ್​ ಕ್ರಾಸ್​ ಬದಲಿ ಆಟಗಾರ್ತಿಯಾಗಿ ತಂಡ ಸೇರಿರುವ ಆಸ್ಟ್ರೇಲಿಯಾದ ಆಲ್​ರೌಂಡರ್​ ಕಿಮ್ ಗಾರ್ತ್​ ಕೂಡಾ ತಂಡಕ್ಕೆ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಬಲ ತುಂಬಬಲ್ಲರು.

ಕ್ವೀನ್​ ಸ್ಮೃತಿ ಮಂದಾನ ರಾಜ್ಯಭಾರ?

ತಂಡದ ಪ್ರಮುಖ ಆಕರ್ಷಣೆ ಹಾಗೂ ಬಲವಾಗಿರುವ ಆರ್​ಸಿಬಿಯ ಕ್ಯಾಪ್ಟನ್​ ಸ್ಮೃತಿ ಮಂದಾನ ಬ್ಯಾಟಿಂಗ್ ಜೊತೆ ​ಕ್ಯಾಪ್ಟನ್ಸಿಯಲ್ಲೂ ತಂಡವನ್ನು ಸಮರ್ಥವಾಗಿ ಮುನ್ನಡೆಸಬೇಕಾದ ಜವಾಬ್ಧಾರಿ ಹೊತ್ತಿದ್ದಾರೆ. ಸದ್ಯ ರೆಡ್​ ಹಾಟ್​ ಫಾರ್ಮ್​ನಲ್ಲಿರುವ ಸ್ಮೃತಿ ಬ್ಯಾಟ್​ ಮೂಲಕ ಅಬ್ಬರಿಸಿದ್ರೆ ರನ್​ ಹೊಳೆ ಹರಿಯೋದು ಫಿಕ್ಸ್​.

ಇದನ್ನೂ ಓದಿ: IPLನ ಮೊದಲ ಪಂದ್ಯ RCB ವಿರುದ್ಧ ಅಖಾಡಕ್ಕೆ ಇಳಿಯೋ ಟೀಮ್ ಯಾವುದು.. ಉದ್ಘಾಟನೆ ಪಂದ್ಯ ನಡೆಯುವುದೆಲ್ಲಿ?

publive-image

ಬೌಲಿಂಗ್​ನಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್​ ಸ್ಪಿನ್​​​ ಜಾದು ಮಾಡುವ ನಿರೀಕ್ಷೆಯಿದೆ. ಬೌಲಿಂಗ್​ ಜೊತೆ ಬ್ಯಾಟಿಂಗ್​ನಲ್ಲೂ ಶ್ರೇಯಾಂಕಾ ಅಬ್ಬರಿಸಿದ್ರೆ, ಇನ್ನೊಂದು ಸಕ್ಸಸ್​ಫುಲ್​ ಟೂರ್ನಮೆಂಟ್​ ಜೊತೆ ಈ ಸಲ ಕಪ್​ ನಮ್ದೇ ಅನ್ನೋ ಕನ್ನಡಿಗರಿಗಾಗಿ ಎರಡನೇ ಬಾರಿ ಕಪ್​ ಗೆದ್ದು ಕೊಟ್ಟಂತಾಗುತ್ತೆ.

ಆರ್​ಸಿಬಿ ವನಿತೆಯರ ಪ್ರಮುಖ ವಿಕ್​ನೆಸ್​ ಆಗಿರುವ ವಿದೇಶಿ ಆಟಗಾರರ ಮೇಲಿನ ಅವಲಂಬನೆಯನ್ನ ವಿಕೆಟ್​ ಕೀಪರ್​ ಬ್ಯಾಟರ್​ ರಿಚಾ ಘೋಷ್​, ಬೌಲಿಂಗ್​ನಲ್ಲಿ ರೇಣುಕಾ ಸಿಂಗ್​ ಕಡಿಮೆಗೊಳಿಸಬೇಕಿದೆ. ಒಟ್ಟಾರೆ, ಕಳೆದ ಬಾರಿಯ ಕೆಲವು ಚಾಂಪಿಯನ್ ಆಟಗಾರ್ತಿಯರನ್ನ ಮಿಸ್​ ಮಾಡಿಕೊಂಡಿದ್ರೂ, ಅನುಭವಿ ಆಟಗಾರ್ತಿಯರ ಜೊತೆ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಬ್ಯಾಲೆನ್ಸಿಂಗ್​ ಆಗಿರುವ ಆರ್​ಸಿಬಿ ಈ ಬಾರಿಯೂ ಕಪ್​ ಗೆಲ್ಲುವ ಫೆವರೀಟ್​ ತಂಡವಾಗಿದೆ.

ಇದನ್ನೂ ಓದಿ:QR ಕೋಡ್​​ನಲ್ಲಿ ಒಂದು ದಿನಕ್ಕೆ ಹುಡುಗ ಸಿಗುತ್ತಾನೆ; ವ್ಯಾಲೆಂಟೈನ್ಸ್ ಡೇ ಬೆಂಗಳೂರಲ್ಲಿ ಹೊಸ ಸಂಚಲನ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment