/newsfirstlive-kannada/media/post_attachments/wp-content/uploads/2025/01/NIRMALA-SEETARAMAN.jpg)
ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮೋದಿ 3.O ಸರ್ಕಾರದ ಎರಡನೇ ಪೂರ್ಣಾವಧಿಯ ಬಜೆಟ್ ಅಧಿವೇಶನ ಇದಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದಾರೆ.
ನಾಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಷ್ಟ್ರಪತಿ ಭಾಷಣದ ಬಳಿಕ ಸದನದಲ್ಲಿ ಆರ್ಥಿಕ ಸಮೀಕ್ಷಾ ವರದಿ ಮಂಡನೆ ಆಗಲಿದೆ. ಇಂದಿನಿಂದ ಏಪ್ರಿಲ್ 4ರವರೆಗೆ ಎರಡು ಹಂತದಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ. ಮೊದಲ ಹಂತದ ಅಧಿವೇಶನ ಇಂದಿನಿಂದೆ ಫೆಬ್ರವರಿ 13 ವರೆಗೆ ಹಾಗೂ ಎರಡನೇ ಹಂತದ ಅಧಿವೇಶನವು ಮಾರ್ಚ್ 10 ರಿಂ ಏಪ್ರಿಲ್ 4 ವರೆಗೆ ನಡೆಯಲಿದೆ.
ಇದನ್ನೂ ಓದಿ:ಶ್ರೀಮಂತ ಅನಂತ ಪದ್ಮನಾಭ ದೇಗುಲಕ್ಕೆ ಪ್ರಧಾನ ಅರ್ಚಕರಾಗಿ ಕನ್ನಡಿಗ ನೇಮಕ.. ಯಾರು ಅವರು?
3 ಹೊಸ ಕಾನೂನು..!
- ವಕ್ಫ್ ತಿದ್ದುಪಡಿ ಮಸೂದೆ
- ವಿಮಾನ ವಸ್ತುಗಳ ಮೇಲಿನ ಹಿತಾಸಕ್ತಿಗಳ ರಕ್ಷಣಾ ಮಸೂದೆ
- ತ್ರಿಭುವನ್ ಸಹಕಾರಿ ವಿಶ್ವಿವಿದ್ಯಾಲಯ ಮಸೂದೆ
- ವಲಸೆ ಮತ್ತು ವಿದೇಶಿ ಮಸೂದೆ
ಇದರ ಜೊತೆ ಹಿಂದಿನ ಅಧಿವೇಶನದಲ್ಲಿ ಬಾಕಿ ಉಳಿದಿದ್ದ 10 ವಿವಿಧ ಮಸೂದೆಗಳನ್ನು ಅಂಗೀಕರಿಸುವ ಉದ್ದೇಶ ಸರ್ಕಾರದ್ದಾಗಿದೆ.
ವಿಪಕ್ಷಗಳ ಅಸ್ತ್ರಗಳು ಏನೇನು?
- ಕುಂಭಮೇಳದಲ್ಲಿ ಕಾಲ್ತುಳಿತ
- ಹೆಚ್ಚುತ್ತಿರುವ ನಿರುದ್ಯೋಗ
- ನಿಲ್ಲದ ರೈತರ ಸಮಸ್ಯೆಗಳು
- ಒಂದು ದೇಶ, ಒಂದು ಎಲೆಕ್ಷನ್
- ವಕ್ಫ್ ತಿದ್ದುಪಡಿ ಕಾಯ್ದೆ ವಿವಾದ
ಇದನ್ನೂ ಓದಿ: 4 ಅಂತಸ್ತಿನ ಕಟ್ಟಡ ಕುಸಿದು ಜೀವ ಬಿಟ್ಟ ಏಳು ಜನ.. ನಾಲ್ವರನ್ನು ಬದುಕಿಸಿದ 3 ಟೊಮೇಟೊ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ