/newsfirstlive-kannada/media/post_attachments/wp-content/uploads/2025/07/GOLD_PRICE.jpg)
ಬೆಂಗಳೂರು: ಚಿನ್ನ ಭಾರೀ ದುಬಾರಿ ಆಗಿದ್ದರಿಂದ ಖರೀದಿ ಮಾಡಲು ಜನರು ಕೊಂಚ ಯೋಚನೆ ಮಾಡುವಂತೆ ಆಗಿದೆ. ಸತತ ಬೆಲೆಗಳಲ್ಲಿ ಏರಿಕೆ ಆಗುತ್ತಿರುವುದರಿಂದ ಕೆಲ ಗ್ರಾಹಕರಂತೂ ನಮಗೆ ಚಿನ್ನ ಬೇಡವೇ ಬೇಡ ಅಂತ ದೂರ ಹೋಗುತ್ತಿದ್ದಾರೆ. ಸದ್ಯ ಅವಶ್ಯಕತೆಗೆ ಮಾತ್ರ ಬಂಗಾರ ಕೊಂಡುಕೊಳ್ಳಲು ಗ್ರಾಹಕರು ಮುಂದಾಗುತ್ತಿದ್ದಾರೆ ಎನ್ನಲಾಗಿದೆ.
ಈ ಎಲ್ಲದರ ಮಧ್ಯೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿರುವುದು ಖುಷಿ ತಂದಿದೆ. ದಿನದಿಂದ ದಿನಕ್ಕೆ ಚಿನ್ನದ ದರದಲ್ಲಿ ಏರಿಕೆ ಕಾಣುತ್ತಿತ್ತು. ಆದರೆ ಇಂದು ಬಂಗಾರ ಬೆಲೆಯಲ್ಲಿ ಇಳಿಕೆ ಆಗಿದೆ. 22 ಕ್ಯಾರೆಟ್ ಚಿನ್ನದಲ್ಲಿ 550 ಹಾಗೂ 24 ಕ್ಯಾರೆಟ್ ಬಂಗಾರದಲ್ಲಿ 600 ರೂಪಾಯಿಯಷ್ಟು ದರ ಕಡಿಮೆ ಆಗಿದೆ ಎನ್ನುವುದು ಸದ್ಯದ ಮಾಹಿತಿ.
ಸದ್ಯ ಇಂದಿನ ಬಂಗಾರದ ಬೆಲೆಗಳು
- ನಿನ್ನೆ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ 9,105 ರೂಪಾಯಿ ಇತ್ತು. ಇದು ಇಂದು 9,050 ಇದ್ದು 55 ರೂಪಾಯಿ ಇಳಿಕೆ ಆಗಿದೆ.
- ನಿನ್ನೆ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 91,050 ರೂಪಾಯಿ ಇತ್ತು. ಇಂದು 90,500 ಆಗಿದ್ದು ಬರೋಬ್ಬರಿ 550 ರೂಪಾಯಿ ಕಡಿಮೆ ಆಗಿದೆ.
- ನಿನ್ನೆ 24 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ 9,933 ರೂಪಾಯಿ ಇತ್ತು. ಇಂದು 9,873 ರೂಪಾಯಿ ಆಗಿದೆ. ಬೆಲೆಯಲ್ಲಿ 60 ಕಡಿಮೆ ಆಗಿದೆ.
- ನಿನ್ನೆ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 99,330 ರೂಪಾಯಿ ಇತ್ತು. ಇಂದು 98,730 ರೂಪಾಯಿ ಆಗಿದೆ. ಬೆಲೆಯಲ್ಲಿ 600 ಇಳಿಕೆ ಆಗಿದೆ.
ಇದನ್ನೂ ಓದಿ:ಕ್ಯಾಪ್ಟನ್ ಫೆಂಟಾಸ್ಟಿಕ್.. ಗಿಲ್ ಡಬಲ್ ಹಂಡ್ರೆಡ್ ಸಿಡಿಸಿ ಬರೆದ ದಾಖಲೆ ಒಂದಾ, ಎರಡಾ?
ಈ ನಗರಗಳಲ್ಲಿ ಬಂಗಾರದ ಬೆಲೆ..!
ಅಹಮದಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನ ₹90,550 ಇದೆ
ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹90,650 ಇದೆ.
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹90,500 ಇದೆ.
ಬಳ್ಳಾರಿಯಲ್ಲಿ 22 ಕ್ಯಾರೆಟ್ ಚಿನ್ನ ₹90,500 ಇದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹110 ಇದೆ. ಇದು ನಿನ್ನೆ ₹111 ಇತ್ತು. ಬೆಲೆಯಲ್ಲಿ 1 ರೂಪಾಯಿ ಕಡಿಮೆ ಆಗಿದೆ.
ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ 1,100 ಇದ್ದು ನಿನ್ನೆ ಇದರ ಬೆಲೆ ₹1,110 ಇತ್ತು. ಹೀಗಾಗಿ ಬೆಳ್ಳಿಯ ಬೆಲೆಯಲ್ಲಿ 10 ರೂಪಾಯಿ ಇಳಿಕೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ