ಕದನ ವಿರಾಮ ಬಳಿಕ ಮೋದಿ ಮೊದಲ ಸಭೆ.. ದೇಶದಲ್ಲಿ ಇಂದು ನಡೆದ 4 ಪ್ರಮುಖ ಬೆಳವಣಿಗೆಗಳು..!

author-image
Ganesh
Updated On
ಕದನ ವಿರಾಮ ಬಳಿಕ ಮೋದಿ ಮೊದಲ ಸಭೆ.. ದೇಶದಲ್ಲಿ ಇಂದು ನಡೆದ 4 ಪ್ರಮುಖ ಬೆಳವಣಿಗೆಗಳು..!
Advertisment
  • ಪ್ರಧಾನಿ ಮೋದಿ ನೇತೃತ್ವದಲ್ಲಿ ಭದ್ರತಾ ಸಂಪುಟ ಸಮಿತಿ ಸಭೆ
  • ವಿದೇಶಾಂಗ ಸಚಿವ ಎಸ್.ಜೈಶಂಕರ್​​​ಗೆ ಭದ್ರತೆ ಹೆಚ್ಚಳ
  • ಪಾಕ್​ ಹೈಕಮಿಷನ್​ ಅಧಿಕಾರಿಗೆ ಭಾರತ ಶಾಕ್

ಭಾರತ-ಪಾಕಿಸ್ತಾನದ ನಡುವೆ ಆವರಿಸಿದ್ದ ಯುದ್ಧದ ಕಾರ್ಮೋಡ ದೂರ ಸರಿದಿದೆ. ಆದ್ರೂ.. ಬೂದಿ ಮುಚ್ಚಿದ ಕೆಂಡವಾಗಿದೆ. ಕದನ ವಿರಾಮ ಬಳಿಕ ಮೊದಲ ಬಾರಿಗೆ ಭದ್ರತಾ ಸಂಪುಟ ಸಮಿತಿ ಸಭೆ ನಡೆದಿದೆ. ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇಶದ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ಮಾಡಲಾಗಿದೆ.

ಕದನ ವಿರಾಮ ಬಳಿಕ ಮೊದಲ ಸಭೆ

ಭಾರತಾಂಬೆಯ ಕಣ್ಣೆದುರೆ.. 26 ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ ರಾಕ್ಷಸರ ಸಂಹಾರ ಮುಂದುವರಿದಿದೆ. ಆಪರೇಷನ್​ ಸಿಂಧೂರದ ಕಾರ್ಯಾಚರಣೆಯಲ್ಲಿ ಉಗ್ರರು ಮತ್ತು ಅವರಿಗೆ ಬೆಂಬಲವಾಗಿದ್ದ ಶತ್ರು ಪಡೆಯ ರಕ್ತ ಪಾಪಿಗಳ ನೆಲದಲ್ಲೇ ಚೆಲ್ಲಾಡಿದೆ. ಭಾರತದ ರಣಾರ್ಭಟಕ್ಕೆ.. ಬೆದರಿ ಅಮೆರಿಕಾ ಮೂಲಕ ಜೀವ ಭಿಕ್ಷೆ ಬೇಡಿದ ಪಾಕಿಸ್ತಾನ ಸದ್ಯ ಅಕ್ಷರಷಃ ನರಕದಂತೆ ಕಾಣ್ತಿದೆ. ಸದ್ಯ ಉಭಯದ ದೇಶಗಳ ಮಧ್ಯೆ ಕದನ ವಿರಾಮ ಆಗಿದ್ದು, ಇದರ ಬೆನ್ನಲ್ಲೇ ಮೋದಿ ನೇತೃತ್ವದಲ್ಲಿ ಭದ್ರತಾ ಸಂಪುಟ ಸಮಿತಿ ಸಭೆ ನಡೆದಿದೆ.

ಇದನ್ನೂ ಓದಿ: ಟರ್ಕಿ ಆ್ಯಪಲ್, ಮಾರ್ಬಲ್ ಬ್ಯಾನ್.. ಭಾರತದ ಬಾಯ್ಕಾಟ್‌ನಿಂದ ಪಾಕ್ ಪ್ರೇಮಿಗೆ ಎಷ್ಟು ಸಾವಿರ ಕೋಟಿ ನಷ್ಟ?

publive-image

ಪಹಲ್ಗಾಮ್​ ನರಮೇಧದ ಬಳಿಕ ನಡೆದ 3ನೇ ಸಭೆ.. ಹಾಗೂ ಕದನ ವಿರಾಮದ ಬಳಿಕ ನಡೆದ ಮೊದಲ ಭದ್ರತಾ ಸಂಪುಟ ಸಮಿತಿ ಸಭೆ.. ಪ್ರಧಾನಿ ಮೋದಿ ನೇತೃತ್ವದ ಈ ಹೈವೋಲ್ಟೇಜ್​ ಮೀಟಿಂಗ್​ನಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ವಿದೇಶಾಂಗ ಸಚಿವ ಜೈ ಶಂಕರ್​, ಕೇಂದ್ರ ಗೃಹಸಚಿವ ಅಮಿತ್​ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಾಲ್​ ಭಾಗಿಯಾಗಿದ್ರು. ಈ ಸಭೆಯಲ್ಲಿ ಕದನ ವಿರಾಮದ ಗಡಿಯಲ್ಲಿ ಪರಿಸ್ಥಿತಿ.. ಭವಿಷ್ಯದ ಸಂಭಾವ್ಯ ಬೆದರಿಕೆಗಳು, ಭಾರತದ ಮುಂದಿನ ರಾಜತಾಂತ್ರಿ ಅಥವಾ ಮಿಲಿಟರಿ ನಡೆಗಳ ಕುರಿತು ಅಗತ್ಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೂರು ಪಡೆಗಳಿಗೂ ಅಲರ್ಟ್​ ಆಗಿರುವಂತೆ ಸೂಚಿಸಲಾಗಿದೆ.

ವಿದೇಶಾಂಗ ಸಚಿವ ಎಸ್.ಜೈಶಂಕರ್​​​ಗೆ ಭದ್ರತೆ ಹೆಚ್ಚಳ

ಇನ್ನು ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಮುಂದುವರೆದಿದ್ದು, ಇದರ ನಡುವೆ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ವಿದೇಶಾಂಗ ಸಚಿವ ಎಸ್ ಜೈಶಂಕರ್​ರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪಾಕ್, ಭಾರತ ಕದನ ವಿರಾಮದ ನಡುವೆ ಜೈಶಂಕರ್​​ಗೆ ಬೆದರಿಕೆ ಕರೆಗಳು ಬರ್ತುವೆ. ಈ ಹಿನ್ನೆಲೆ ವಿದೇಶಾಂಗ ಸಚಿವ ಎಸ್​.ಜೈಶಂಕರ್​ ನೀಡಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈಗಾಗಲೇ Z ಕೆಟಗರಿ ಭದ್ರತೆಯನ್ನ ಜೈಶಂಕರ್ ಹೊಂದಿದ್ದಾರೆ. ಇದೀಗ ಸಿಆರ್​ಪಿಎಫ್​ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನ ಹೆಚ್ಚಳ ಮಾಡಿದೆ. ಇನ್ನು ಕೇಂದ್ರದಿಂದ ಜೈಶಂಕರ್​ಗೆ ಬುಲೆಟ್ ಪ್ರೂಫ್ ಕಾರು ನೀಡಲಾಗಿದೆ. ಹಾಗೂ 33 ಕಮಾಂಡೋಗಳಿಂದ ಎಸ್. ಜೈಶಂಕರ್​ಗೆ 24/7 ಸೆಕ್ಯೂರಿಟಿವದಗಿಸಲಾಗಿದೆ. ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಪಾಕ್​ ಹೈಕಮಿಷನ್​ ಅಧಿಕಾರಿಗೆ ಭಾರತ ಶಾಕ್

ಭಾರತ-ಪಾಕ್​ ನಡುವೆ ಕದನ ವಿರಾಮ ಘೋಷಣೆ ಆಗಿದ್ರೂ.. ಭಾರತ ಸ್ವಲ್ಪವೂ ಮೈಮರೆಯುವಂತಿಲ್ಲ.. ಗುಳ್ಳೆ ನರಿ ಪಾಕಿಸ್ತಾನ.. ಯಾವಾಗ ಬೇಕಾದ್ರೂ ತನ್ನ ಕುತಂತ್ರಿ ಬುದ್ಧಿಯನ್ನು ತೋರಬಹುದು.. ಹೀಗಾಗಿ ಭಾರತ ಸರ್ಕಾರ ಅಲರ್ಟ್​ ಆಗಿದೆ. ಈಗಿರುವಾಗಲೇ, ಗೂಡಚಾರದ ಆರೋಪದಡಿ, ಪಾಕ್​ನ ಹೈಕಮಿಷನ್​ ಅಧಿಕಾರಿಗೆ ಭಾರತ ಶಾಕ್​ ಕೊಟ್ಟಿದೆ. ಈ ವ್ಯಕ್ತಿ ಪಾಕ್​ನ ಐಎಸ್​ಐನ ಸಿಬ್ಬಂದಿ ಅನ್ನೋದು ಪತ್ತೆ ಹಚ್ಚಲಾಗಿದ್ದು, 24 ಗಂಟೆಯಲ್ಲಿ ಭಾರತವನ್ನು ತೊರೆಯುವಂತೆ ಪಾಕ್​ ಹೈಕಮಿಷನ್​ ಅಧಿಕಾರಿಗೆ ಖಡಕ್​ ಸೂಚನೆ ನೀಡಿದೆ.

ಇದನ್ನು ಓದಿ: ಬಿಗ್‌ ಬಾಸ್ ಮಾಜಿ ಸ್ಪರ್ಧಿ ನಮ್ರತಾಗೆ ‘ಡೇಟಿಂಗ್‌’ ಕಿರುಕುಳ.. ಅಪರಿಚಿತನ ಟಾರ್ಚರ್‌ಗೆ ನಟಿ ಏನಂದ್ರು?

ಭಾರತೀಯ ಸೇpublive-imageನಾ ಪಡೆಗಳ ಶೌರ್ಯಕ್ಕೆ ರಾಷ್ಟ್ರಪತಿ ಶ್ಲಾಘನೆ

ಆಪರೇಷನ್​ ಸಿಂಧೂರ ಕಾರ್ಯಾಚರಣೆ ಮೂಲಕ.. ಕೇವಲ ನಾಲ್ಕೇ ನಾಲ್ಕು ದಿನದಲ್ಲಿ ಶತ್ರು ರಾಷ್ಟ್ರ ಹುಟ್ಟಡಗಿಸಿ, ಜಗತ್ತಿನ ಮುಂದೆ ಭಾರತದ ಶಕ್ತಿಯನ್ನು ಭಾರತೀಯ ಸೇನಾ ಪಡೆಗಳು ತೋರಿಸಿದ್ವು. ಇವತ್ತು ಮೂರು ಸೇನಾ ಪಡೆಗಳ ಮುಖ್ಯಸ್ಥರು ರಾಷ್ಟ್ರಪತಿಗಳನ್ನು ಭೇಟಿಯಾಗಿ ಆಪರೇಷನ್​ ಸಿಂಧೂರದ ಮಾಹಿತಿ ನೀಡಿದ್ರು.. ಯಾಕಂದ್ರೆ, ಭಾರತದ ರಾಷ್ಟ್ರಪತಿಗಳೇ ಭೂಸೇನೆ.. ವಾಯು ಸೇನೆ.. ನೌಕಾದಳದ ಸುಪ್ರೀಂ ಕಮ್ಯಾಂಡರ್​ ಆಗಿರ್ತಾರೆ.. ಹೀಗಾಗಿ ರಾಷ್ಟ್ಕಪತಿ ಭವನದಲ್ಲಿ ಮೂರು ಸೇನಾ ಮುಖ್ಯಸ್ಥರು ಮತ್ತು ಸಿಡಿಎಸ್​ ಅನಿಲ್​ ಚೌಹಾಣ್​, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ರು. ಈ ವೇಳೆ ರಾಷ್ಟ್ರಪತಿಗಳು ಭಾರತೀಯ ಸೇನಾ ಪಡೆಗಳ ಶೌರ್ಯ, ಸಾಹಸವನ್ನು ಪ್ರಶಂಸಿಸಿದ್ದಾರೆ.

ಒಟ್ಟಾರೆ.. ದೇಶದ ನೆಲ.. ಜಲ ಮತ್ತು ದೇಶವಾಸಿಗಳ ವಿಚಾರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದೊಂದು ನಡೆಯೂ ನಿಜಕ್ಕೂ ರೋಚಕವಾಗಿದೆ. ಈ ಮೂಲಕ ಭಾರತಾಂಭೆಯ ಮೇಲೆ ಕಣ್ಣು ಹಾಕುವವರನ್ನು ಮಣ್ಣು ಮಾಡ್ತೇವೆ ಎಂದು ಖಡಕ್​ ಸಂದೇಶ ಕೊಟ್ಟಿದ್ದಾರೆ.

ಇದನ್ನೂ ಓದಿ: Breaking: ಪಾಕ್​ಗೆ ಗಾಯದ ಮೇಲೆ ಮತ್ತೊಂದು ದೊಡ್ಡ ಬರೆ.. ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment