/newsfirstlive-kannada/media/post_attachments/wp-content/uploads/2025/07/Hoshi_Takayuki.jpg)
ಭಾರತದಲ್ಲಿಯೇ ಹುಟ್ಟಿ ಬೆಳೆದವ್ರಿಗೆ ಆಧ್ಯಾತ್ಮದತ್ತ ದೃಷ್ಟಿ ಹರಿಯೋದು, ಸಾಧುಗಳಾಗೋದು, ಹಿಮಾಲಯ ಹತ್ತಿ ಶಿವನ ತಪಸ್ಸಿನಲ್ಲಿ ತೊಡಗೋದು ಹೊಸ ವಿಷ್ಯವೇನಲ್ಲ. ಹಾಗೇ ಹಿಮಾಲಯದಲ್ಲಿರೋ ಬಹುಪಾಲು ಋಷಿಗಳ ಮೂಲ ಭಾರತದ ಅದ್ಯಾವುದೋ ಗ್ರಾಮವೋ? ಹಳ್ಳಿಯೋ? ಆಗಿರುತ್ತೆ. ಆದ್ರೆ, ಜಪಾನ್‌ನಲ್ಲಿ 15ಕ್ಕೂ ಹೆಚ್ಚು ಕಂಪನಿ ನಡೆಸ್ತಿದ್ದ ವ್ಯಕ್ತಿ, ನೂರಾರು ಕೋಟಿ ವ್ಯವಹಾರ ಮಾಡ್ತಿದ್ದ ಖ್ಯಾತ ಉದ್ಯಮಿ ಅದೆಲ್ಲವನ್ನು ತ್ಯಾಗ ಮಾಡಿ ಭಾರತಕ್ಕೆ ಬಂದಿದ್ದಾರೆ. ಗಡಿ, ಧರ್ಮ ಎಲ್ಲವನ್ನು ಮೀರಿ ಸಾಧುವಾಗಿ ಶಿವಭಕ್ತಿಯಲ್ಲಿ ಮಗ್ನರಾಗಿದ್ದಾರೆ ಅಂದ್ರೆ ಯಾರಿಗೆ ತಾನೇ ಅಚ್ಚರಿಯಾಗೋದಿಲ್ಲ? ಅಂತಾವೊಂದ್ ರೋಚಕ ಸ್ಟೋರಿ ಇದು.
ಶ್ರಾವಣ ಮಾಸ ಶುರುವಾಗಿರುವಂತಹ ಹಿನ್ನೆಲೆಯಲ್ಲಿ ಉತ್ತರ ಭಾರತದಲ್ಲಿ ಕನ್ವರ್ ಯಾತ್ರೆಯೂ ಶುರುವಾಗಿದೆ. ಈ ಯಾತ್ರೆಯ ವಿಶೇಷ ಏನು ಅಂದ್ರೆ, ಹರಿದ್ವಾರ, ಋಶಿಕೇಶ, ಗೌಮುಖ್, ಗಂಗೋತ್ರಿ ಈ ಪವಿತ್ರ ಸ್ಥಳದಿಂದ ಗಂಗಾ ನದಿ ನೀರನ್ನ ತೆಗೆದ್ಕೊಂಡ್ ಹೋಗಿ ಭಕ್ತರು ತಮ್ಮ ತಮ್ಮ ಊರಿನಲ್ಲಿರೋ ಶಿವನಿಗೆ ಅಭಿಷೇಕ ಮಾಡೋದು. ಹಾಗೇ ಲಕ್ಷ ಲಕ್ಷ ಸಂಖ್ಯೆಯ ಭಕ್ತರು ಗಂಗಾ ನದಿ ನೀರನ್ನ ತೆಗೆದ್ಕೊಂಡ್ ಹೋಗಿ ಕಾಶಿ ವಿಶ್ವನಾಥನಿಗೂ ಅಭಿಷೇಕ ಮಾಡ್ತಾರೆ. ಆ ಪವಿತ್ರ ನೀರನ್ನ ತೆಗೆದ್ಕೊಂಡ್ ಹೋಗುವಾಗ ಶಿವ ಭಕ್ತರು ಕೇಸರಿ ವಸ್ತ್ರ ತೊಟ್ಟು, ಹರ ಹರ ಮಹಾದೇವ್ ಅನ್ನೋ ಘೋಷಣೆ ಹಾಕುತ್ತಾ ಸಾಗುತ್ತಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಅದೆಷ್ಟೋ ದೊಡ್ಡ ಕೋಟ್ಯಾಧೀಶನಾಗಿದ್ರೂ ಚಪ್ಪಲಿ ಧರಿಸೋದಿಲ್ಲ. ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ರಾಜಸ್ಥಾನದಲ್ಲಿ ಕನ್ವರ್ ಯಾತ್ರೆ ಈಗ ಜೋರಾಗಿ ನಡೀತಿದೆ. ನೂರಾರು ಕಿಲೋ ಮೀಟರ್ ಬರಿಗಾಲಿನಲ್ಲಿಯೇ ನಡ್ಕೊಂಡ್ ಹೋಗ್ತಾರೆ ಭಕ್ತರು. ಇನ್ನು ಕೆಲವು ಭಕ್ತರು ವಾಹನದಲ್ಲಿಯೂ ಹೋಗ್ತಾರೆ. ಇದ್ರಲ್ಲಿ ಹರಿದ್ವಾರದಲ್ಲಿ ಒಬ್ಬ ಅಪ್ಪಟ ಶಿವ ಭಕ್ತ, ಇಡೀ ದೇಶದ ಗಮನ ಸೆಳೆಯುತ್ತಿದ್ದಾನೆ. ಇವರ ಕಥೆ ಜನ್ಮ ಜನ್ಮದ ಅನುಬಂಧದ ಕಥೆ ಹೇಳ್ತಿದೆ. ದೇಶದ ಗಡಿಯನ್ನು ದಾಟಿದ, ಧರ್ಮದ ಎಲೆಯನ್ನೂ ಮೀರಿದ, ನೂರಾರು ಕೋಟಿ ಆಸ್ತಿಯನ್ನೂ ಬಿಟ್ಟು ಬಂದಿರೋ ರೋಚಕ ಕಥೆ ಇವರ ಹಿಂದಿದೆ.
ಶಿವನಿಗೆ ಅಭಿಷೇಕ ಮಾಡಲು ಹೊರಟ ಜಪಾನಿ ಉದ್ಯಮಿ!
ಬಿಳಿ ವಸ್ತ್ರ ತೊಟ್ಟು, ರುದ್ರಾಕ್ಷಿ ಮಾಲೆ ಧರಿಸಿ, ಗಂಗಾಜಲವನ್ನ ಹಿಡ್ಕೊಂಡ್ ಬರಿಗಾಲಿನಲ್ಲಿ ನಡ್ಕೊಂಡ್ ಹೋಗ್ತಾ, ಮಂತ್ರಘೋಷ ಮಾಡ್ತಾ ಇರೋದು ಸಾಧು ಅಂದ್ರೆ ತತ್‌ಕ್ಷಣವೇ ಅರ್ಥವಾಗುತ್ತೆ. ಹಾಗೇ ಅವ್ರು ಗಂಗಾಜಲದಲ್ಲಿ ಶಿವನಿಗೆ ಅಭಿಷೇಕ ಮಾಡಲು ತೆಗೆದ್ಕೊಂಡ್ ಹೋಗ್ತಿದ್ದಾರೆ ಅನ್ನೋದು ಗೊತ್ತಾಗುತ್ತೆ. ಸನಾತನ ಧರ್ಮದ ಸಾಧುಗಳು, ಶಿವಭಕ್ತರು ಭಾರತದಲ್ಲಿ ಈ ರೀತಿಯಾಗಿ ಗಂಗಾಜಲ ತೆಗೆದ್ಕೊಂಡ್ ಹೋಗಿ ಶಿವನಿಗೆ ಅಭಿಷೇಕ ಮಾಡೋದು ಕಾಮನ್. ಅದ್ರಲ್ಲಿ ಏನ್ ವಿಶೇಷ ಅಂತಾ ನಿಮ್ಗೆ ಅನಿಸ್ಬಹುದು. ಆದ್ರೆ, ವಿಶೇಷತೆ ಇದೆ, ಖಂಡಿತವಾಗಿಯೂ ಇದೆ. ಯಾಕಂದ್ರೆ, ನಾವಿಲ್ಲಿ ಹೇಳುತ್ತಿರೋ ಸಾಧು ಸಾಮಾನ್ಯ ಸಾಧು ಅಲ್ಲ. ಯಾಕಂದ್ರೆ, ಕೋಟ್ಯಂತರ ಆಸ್ತಿ, ಲಕ್ಷುರಿ ಲೈಫ್ ಎಲ್ಲವನ್ನು ತ್ಯಾಗ ಮಾಡಿ ಬಂದಿರೋ ಸಾಧು ಇವ್ರು. ಇವ್ರು ಮೂಲತಃ ಭಾರತೀಯರಲ್ಲ. ಇವ್ರು ಜಪಾನ್ ಪ್ರಜೆಯಾಗಿದ್ದು ಅಲ್ಲಿಯ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾಗಿದ್ರು. ಆದ್ರೆ, ಇಂದು ಸಾಧುವಾಗಿದ್ದು ಅಪ್ಪಟ ಶಿವಭಕ್ತರಾಗಿ ಬದಲಾಗಿದ್ದಾರೆ. ಅದ್ಕೆ ಒಂದು ರೋಚಕ ಕಥೆಯೂ ಇದೆ. ಆ ಕಥೆ ಏನು ಅನ್ನೋದನ್ನ ವಿವರಿಸುತ್ತೀವಿ. ಅದ್ಕೂ ಮುನ್ನ ತ್ಯಾಗದ ಕಥೆ, ಶಿವ ಭಕ್ತಿ ಶಕ್ತಿಯ ಕಥೆಯನ್ನ ವಿವರಿಸುತ್ತೇವೆ.
ಈ ಜಪಾನಿ ಸಾಧುವಿನ ಮೊದಲ ಹೆಸ್ರು ಹೋಶಿ ಟಕಾಯುಕಿ. ಆದ್ರೆ ಇದೀಗ ಬಾಲ ಕುಂಭ ಗುರುಮುನಿ ಅಂತ ಹೆಸ್ರು ಬದ್ಲಾವಣೆ ಮಾಡ್ಕೊಂಡಿದ್ದಾರೆ. ಕಳೆದ ಕೆಲವು ವರ್ಷದಿಂದ ಶಿವನ ಭಕ್ತಿಯಲ್ಲಿ ತೊಡಗಿದ್ದು, ಇಡೀ ಜೀವನವನ್ನೆ ಪರಮ ಶಿವನಿಗೆ ಅರ್ಪಿಸಿಕೊಂಡಿದ್ದಾರೆ. ಸದ್ಯ ಹರಿದ್ವಾರದಲ್ಲಿರೋ ಈ ಸಾಧು ತನ್ನ ಶಿಷ್ಯರ ಜೊತೆ ಸೇರಿ ಶಿವನಿಗೆ ಅಭಿಷೇಕ ಮಾಡಲು ಗಂಗಾ ಜಲವನ್ನ ತೆಗೆದ್ಕೊಂಡ್ ಹೋಗ್ತಾ ಇರೋದು, ಶಿವನಿಗೆ ಅಭಿಷೇಕ ಮಾಡ್ತಾ ಇರೋ ವಿಡಿಯೋಗಳು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರು ಇವ್ರು ಅನ್ನೋ ಚರ್ಚೆ ಶುರುವಾಗಿದೆ. ಹಾಗೇ ಅವರ ಪೂರ್ವಜನ್ಮ, ಜಪಾನ್ ಉದ್ಯಮ, ನಾಡಿಶಾಸ್ತ್ರ, ಪೂರ್ವಜರ ಹುಡುಕಾಟ ನಿಜಕ್ಕೂ ಮೈರೋಮಾಂಚನಕಾರಿ.
ಕೋಟಿ ಕೋಟಿ ವ್ಯವಹಾರ ಬಿಟ್ಟು ಶಿವ ಭಕ್ತಿಯಲ್ಲಿ ತಲ್ಲೀನ!
ಸನಾತನ ಧರ್ಮದ ಆಧ್ಯಾತ್ಮಕಕ್ಕೆ ವಿದೇಶಿಗರು ಮಾರು ಹೋಗೋದು ಭಾರೀ ದೊಡ್ಡ ವಿಷ್ಯ ಏನಲ್ಲ. ಪ್ರತಿ ವರ್ಷ ಭಾರತಕ್ಕೆ ಪ್ರವಾಸಕ್ಕಾಗಿ ಬಂದಂತಹ ವಿದೇಶಿಗರು ಇಲ್ಲಿಯ ಸಂಸ್ಕೃತಿಗೆ, ಆಧ್ಯಾತ್ಮಕ್ಕೆ ಮಾರು ಹೋಗಿ ಇಲ್ಲಿಯೇ ಉಳಿದ್ಕೊಳ್ತಾರೆ. ಹಾಗೇ ದೇವರ ಭಕ್ತರಾಗಿ ತಪಸ್ಸು, ಧ್ಯಾನ ಮಾಡೋದಕ್ಕೆ ಶುರು ಮಾಡ್ತಾರೆ. ಸಾಮಾನ್ಯವಾಗಿ ಅಂತಾ ಸಾಧುಗಳ ದರ್ಶನ ಕುಂಭ ಮೇಳದಲ್ಲಿ ಮಹಾಕುಂಭ ಮೇಳದಲ್ಲಿ ಆಗುತ್ತೆ. ಆದ್ರೆ, ಈ ಹೋಶಿ ಟಕಾಯುಕಿ ಅವ್ರು ಏನಿದ್ದಾರೆ ಇವ್ರು ಸಾಮಾನ್ಯ ವ್ಯಕ್ತಿಯಾಗಿದ್ದವರಲ್ಲ. ಜಪಾನ್‌ನಲ್ಲಿ ನೂರಾರು ಕೋಟಿ ಒಡೆಯರಾಗಿದ್ರು. ಹೌದು, ಜಪಾನ್‌ನಲ್ಲಿ ಖ್ಯಾತ ಉದ್ಯಮಿಯಾಗಿ ಗುರ್ತಿಸಿಕೊಂಡಿದ್ದ ಇವ್ರು 15 ಸೌಂದರ್ಯ ವರ್ಧಕ ಕಂಪನಿಯನ್ನ ಕಟ್ಟಿಕೊಂಡಿದ್ರು. ಅದನ್ನ ಜಗತ್ತಿನಾದ್ಯಂತ ವಿಸ್ತರಿಸಿ ತಾನೊಬ್ಬ ಜಗತ್‌ಪ್ರಸಿದ್ಧ ಖ್ಯಾತ ಉದ್ಯಮಿಯಾಗ್ಬೇಕು ಅಂತಾ ಆಸೆ ಕನಸು ಹೊತ್ತು ಸಾಗ್ತಾ ಇದ್ರು. ಲಕ್ಷುರಿ ಕಾರು, ಐಶಾರಾಮಿ ಮನೆ, ಹೈಫೈ ಜೀವನ ಎಲ್ಲವೂ ಇತ್ತು. ಆದ್ರೆ, ಆವತ್ತು ಅವ್ರು ಅಂದ್ಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು. ತಮ್ಮ ಜೀವನದಲ್ಲಿ ಇಂತಾವೊಂದ್ ಟ್ವಿಸ್ಟ್ ಸಿಗುತ್ತೆ ಅನ್ನೋದನ್ನ ಇತ್ತೀಚಿನ ವರ್ಷದ ವರೆಗೂ ಕನಸು ಮನಸ್ಸಿನಲ್ಲೂ ಯೋಚಿಸಿರಿಲ್ಲಿಲ್ಲ ಈ ಬಾಬಾ.
ಅದೊಂದು ದಿನ ಈ ಬಾಬಾಗೆ ತಾನು ಇರ್ಬೇಕಾಗಿದ್ದ ಜಾಗ ಇದಲ್ಲ, ತಾನು ಮಾಡ್ಬೇಕಾಗಿದ್ದಿದ್ದು ಉದ್ಯಮವಲ್ಲ ಅನ್ನೋದ್ ಜ್ಞಾನೋದಯವಾಗುತ್ತೆ. ಆ ಕ್ಷಣವೇ ಪೂರ್ವಜನ್ಮ, ಶಿವಭಕ್ತಿ ಅತ್ತ ಆಕರ್ಷಿತರ್ತಾರೆ. ಹಾಗೇ ತಮ್ಮ ಒಡೆತನದಲ್ಲಿದ್ದ 15 ಸೌಂದರ್ಯ ವರ್ಧಕ ಕಂಪನಿಗಳನ್ನ ತಮ್ಮ ಪ್ರೀತಿಯ ಶಿಷ್ಯರಿಗೆ ವರ್ಗಾಯಿಸಿ ಬಿಟ್ಟಿದ್ದಾರೆ. ಯಾವ ಕಂಪನಿಯನ್ನ ಕಟ್ಟಿ ವಿಶ್ವ ಮಟ್ಟದಲ್ಲಿ ಬೆಳೆಸ್ಬೇಕು ಅಂತಾ ಕನಸು ಕಂಡಿದ್ರೋ? ಅದೇ ಕಂಪನಿಯನ್ನ ತಮ್ಮ ಪ್ರೀತಿಯ ಶಿಷ್ಯರಿಗೆ ಸ್ವಲ್ಪವೂ ಬೇಸರವಿಲ್ಲದೇ ವರ್ಗಾಯಿಸಿ ಬಿಟ್ಟಿದ್ದಾರೆ. ಇನ್ಮೇಲೆ ಈ ಕಂಪನಿಯನ್ನ ನೀವೇ ನಡೆಸ್ಕೊಂಡ್ ಹೋಗ್ಬೇಕು ಅಂತಾ ಆಶೀರ್ವಾದ ಮಾಡಿ ಆಧ್ಯಾತ್ಮಕ ಲೋಕಕ್ಕೆ ಎಂಟ್ರಿಯಾಗಿದ್ದಾರೆ. ಹಾಗೇ ಭಾರತದ ದೇವಭೂಮಿ ಉತ್ತರಾಖಂಡಕ್ಕೆ ಬರುವಾಗ ಜಪಾನ್‌ನಲ್ಲಿರೋ ತಮ್ಮ ಮನೆಯನ್ನ ಶಿವನ ದೇವಾಲಯವಾಗಿ ಮಾಡಿ ಬಂದಿದ್ದಾರೆ. ಕೋಟಿ ಕೋಟಿ ಮೌಲ್ಯದ ಆ ಬಂಗಲೇ ಈಗ ಜಪಾನಿನಲ್ಲಿ ಶಿವನ ದೇವಾಲಯವಾಗಿ ಮಾರ್ಪಟ್ಟಿದೆ.
ವಿಶೇಷ ಅಂದ್ರೆ, ಇವ್ರು ಭಾರತಕ್ಕೆ ಬರುವಾಗ ತಾವೊಬ್ಬರೇ ಬರೋದಿಲ್ಲ. ಜೊತೆಗೆ ತಮ್ಮ 20 ಶಿಷ್ಯರನ್ನು ಕರ್ಕೊಂಡ್ ಬಂದಿರ್ತಾರೆ. ಅವ್ರು ಕೂಡ ಶಿವ ಭಕ್ತರಾಗಿದ್ದು ಹರ ಹರ ಮಹಾದೇವ್ ಅನ್ನೋ ಘೋಷಣೆಗಳನ್ನ ಹಾಕ್ತಿದ್ದಾರೆ. ಹಾಗೇ ಇದೀಗ ಕನ್ವರ್ ಯಾತ್ರೆಯಲ್ಲಿ ಕಾಣಿಸ್ಕೊಂಡಿದ್ದು ಇದೇ ಬಾಬಾನ ಶಿಷ್ಯರು.
ಭಾರತದ ಶಿವ ದೇಗುಲ ನಿರ್ಮಾಣಕ್ಕೆ 35 ಎಕರೆ ಭೂಮಿ ಖರೀದಿ!
ಜಪಾನಿನ ಹೋಶಿ ಟಕಾಯುಕಿ ಅವ್ರು ಇದೀಗ ಬಾಲ ಕುಂಭ ಗುರುಮುನಿಯಾಗಿದ್ದು, ಸಾಕ್ಷಾತ್ ಶಿವನ ಭಕ್ತರಾಗಿ ಮಾರ್ಪಟ್ಟಿದ್ದಾರೆ. ಪ್ರತಿ ನಿತ್ಯ ಶಿವನ ಪೂಜೆ, ಧ್ಯಾನ, ಅಭಿಷೇಕ ಮಾಡ್ತಾರೆ. ಪ್ರತಿ ನಿತ್ಯ ಬೆಳಗ್ಗಿನ ಜಾವ ಎದ್ದು ತಣ್ಣೀರು ಸ್ನಾನ ಮಾಡಿ ಶಿವನ ತಪಸ್ಸು ಮಾಡ್ತಾರೆ. ಉತ್ತರಖಂಡದಲ್ಲಿ ವಾಸವಾಗಿರೋ ಇವ್ರು ಆಗಾಗ ಹಿಮಾಲಯಕ್ಕೆ ಹೋಗಿ ಬರ್ತಾ ಇರ್ತಾರೆ. ಇನ್ನು ಶಿವನಿಗೆ ಭಾರತಲ್ಲಿ ವಿಶೇಷ ದೇವಾಲಯ ನಿರ್ಮಿಸ್ಬೇಕು ಅಂತಾ ಪುದುಚೇರಿಯಲ್ಲಿ 35 ಎಕರೆ ಭೂಮಿ ಖರೀದಿ ಮಾಡಿದ್ದಾರೆ.
ಬರೋಬ್ಬರಿ 35 ಎಕರೆ ಭೂಮಿ ಖರೀದಿ
ಭಾರತದಲ್ಲಿ ಒಂದು ಭವ್ಯ ಶಿವನ ಮಂದಿರ ಕಟ್ಟಬೇಕು ಅನ್ನೋ ಕನಸು ಕಟ್ಟಿಕೊಂಡೇ ಈ ಬಾಬಾ ಜಪಾನ್ ಬಿಟ್ಟು ಬಂದಿದ್ರು. ಆರಂಭದಲ್ಲಿ ಶಿವನ ಮಂತ್ರಗಳನ್ನ ಕಲಿತ್ಕೊಳ್ತಾರೆ. ಧ್ಯಾನ ಮಾಡೋದನ್ನ ರೂಢಿಸ್ಕೊಳ್ತಾರೆ. ಹಾಗೇ ತಮ್ಮ ಜೊತೆ ಬಂದಂತಹ ಶಿಷ್ಯರಿಗೂ ಶಿವಜ್ಞಾನದ ಅರಿವು ಮೂಡಿಸ್ತಾರೆ. ಇದೀಗ ತಾವೊಂದು ಶಿವನ ಮಂದಿರ ನಿರ್ಮಾಣ ಮಾಡ್ಬೇಕು. ಅದು ಅದ್ಭುತವಾಗಿರ್ಬೇಕು ಅನ್ನೋ ಆಸೆಯಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 35 ಎಕರೆ ಭೂಮಿ ಖರೀದಿ ಮಾಡಿದ್ದಾರೆ. ಇನ್ನೇನ್ ಕೆಲವೇ ವರ್ಷದಲ್ಲಿ ಪದುಚೇರಿಯಲ್ಲಿ ದೊಡ್ಡದ ಶಿವನ ಮಂದಿರ ನಿರ್ಮಾಣವಾಗೋದು ಗ್ಯಾರಂಟಿ.
ಅಷ್ಟಕ್ಕೂ ಜಪಾನಿನಲ್ಲಿ ಖ್ಯಾತ ಉದ್ಯಮಿಯಾಗಿದ್ದುಕೊಂಡು, ಲಕ್ಷುರಿ ಜೀವನ ಮಾಡ್ತಿದ್ದ ಈತ ಯಾಕೆ ಶಿವನ ಅಪ್ಪಟ್ಟ ಭಕ್ತನಾದ ಅನ್ನೋ ಹಿನ್ನೆಲೆಯನ್ನ ಹುಡುಕುತ್ತಾ ಹೋದ್ರೆ ನಾಡಿಶಾಸ್ತ್ರವೊಂದರ ರೋಚಕ ಕಥೆ ತೆರೆದುಕೊಳ್ಳುತ್ತೆ.
ಹರಿಯೋ ನದಿ ದಿಕ್ಕು ಬದಲಾಯಿಸ್ಬೇಕು ಅಂತಾದ್ರೆ ಏನಾದ್ರೂ ದುರಂತವೋ? ಇಲ್ಲವೇ ಏನಾದ್ರೂ ಘಟನೆ ಅನ್ನೋದ್ ನಡೀಬೇಕು. ಇಲ್ಲದೇ ಇದ್ರೆ ಅದು ಸುಖಾಸುಮ್ಮನೇ ದಿಕ್ಕು ಬದಲಾಯಿಸೋದಿಲ್ಲ. ಅಷ್ಟಕ್ಕೂ ಜಪಾನ್ ಉದ್ಯಮಿಯನ್ನ ತಮಿಳುನಾಡಿನ ನಾಡಿಶಾಸ್ತ್ರ ಬದಲಾಯಿಸಿದ್ದು ಹೇಗೆ? ಪೂರ್ವಜನ್ಮದ ರಹಸ್ಯ ಆತನಿಗೆ ಲೈಫ್‌ಗೆ ಟ್ವಿಸ್ಟ್ ಕೊಡ್ತಾ? ಅದು ಕೂಡ ಇಂಟರೆಸ್ಟಿಂಗ್.
ಪ್ರವಾಸಕ್ಕೆ ಬಂದಿದ್ದ ಹೋಶಿ ತಮಿಳುನಾಡಿನಲ್ಲಿ ಇರುವಾಗ ಸ್ನೇಹಿತನ ಜೊತೆ ನಾಡಿಶಾಸ್ತ್ರ ಕೇಳೋದಕ್ಕೆ ಹೋಗ್ತಾರೆ. ತಮಿಳುನಾಡಿನಲ್ಲಿ ನಾಡಿಶಾಸ್ತ್ರ ಅನ್ನೋದ್ ಭಾರೀ ಫೇಮಸ್. ಯಾರು ನಾಡಿಶಾಸ್ತ್ರ ಕೇಳೋದಕ್ಕೆ ಬರ್ತಾರೋ ಮೊದಲು ಅವರ ಬೆರಳಚ್ಚು ಪಡೀತಾರೆ. ಅದರ ಆಧಾರ ಮೇಲೆ ತಾಳೆಗರಿಗಳನ್ನ ತೆಗೆದು ವ್ಯಕ್ತಿಯ ಜ್ಯೋತಿಷ್ಯವನ್ನ ಹೇಳಲಾಗುತ್ತೆ. ಅದ್ರಲ್ಲಿ ಪೂರ್ವಜನ್ಮದಲ್ಲಿ ಏನಾಗಿದ್ರಿ, ಈಗ ಏನಾಗಿದ್ದೀರಿ, ಮುಂದೇ ಏನಾಗುತ್ತೀರಿ ಅನ್ನೋದನ್ನ ಡೀಟೇಲ್ ಆಗಿ ಹೇಳಲಾಗುತ್ತೆ. ಹಾಗೇ ಜಪಾನಿ ಉದ್ಯಮಿಗೂ ಅಂತಾವೊಂದ್ ಭವಿಷ್ಯ ಸಿಕ್ಕಿತ್ತು. ಆ ಭವಿಷ್ಯವಾಣಿಯೇ ಜಪಾನಿ ಉದ್ಯಮಿಯನ್ನ ಅಪ್ಪಟ ಶಿವಭಕ್ತನಾಗಿ ಮಾರ್ಪಡಿಸಿದೆ.
ಹಿಮಾಲಯ, ಶಿವ ಭಕ್ತಿ ರಹಸ್ಯ ಹೇಳಿತ್ತು ನಾಡಿಶಾಸ್ತ್ರ!
ಸ್ನೇಹಿತನ ಜೊತೆ ನಾಡಿಶಾಸ್ತ್ರ ಕೇಳೋದಕ್ಕೆ ಹೋದಾಗ ಅವ್ರು ಮೊದಲ ಹೋಶಿಯ ಬೆರಳಚ್ಚನ್ನ ಪಡೀತಾರೆ. ಅನಂತರ ತಾಳೆಗರಿಗಳನ್ನ ತೆಗೆದು ಜ್ಯೋತಿಷ್ಯವನ್ನ ಹೇಳೋದಕ್ಕೆ ಶುರು ಮಾಡ್ತಾರೆ. ಅದನ್ನ ಕೇಳುತ್ತಾ ಹೋದ ಜಪಾನ್ ಉದ್ಯಮಿಗೆ ಸ್ವಲ್ಪವೂ ಥ್ರಿಲ್ ಆಗೋದಿಲ್ಲ. ಏನೋ ಒಂದು ಜ್ಯೋತಿಷ್ಯ ಹೇಳ್ತಿದ್ದಾರೆ ಅಂತಾ ಕೇಳ್ತಾ ಹೋಗ್ತಾನೆ. ಆ ಜ್ಯೋತಿಷ್ಯ ಏನಿತ್ತು ಅನ್ನೋದ್ ಇಲ್ಲಿದೆ ನೋಡಿ.
'ನೀನೊಬ್ಬ ಶಿವಭಕ್ತ'
ನೀನು ಈಗ ಜಪಾನಿನಲ್ಲಿ ಉದ್ಯಮಿಯಾಗಿದ್ದೀಯ. 15ಕ್ಕೂ ಹೆಚ್ಚಿನ ಕಂಪನಿಗಳನ್ನ ಮುನ್ನಡೆಸ್ತಾ ಇದ್ದೀಯ. ಆದ್ರೆ, ನಿನ್ನ ಪೂರ್ವಜನ್ಮ ದೇವಭೂಮಿ ಉತ್ತರಖಂಡದಲ್ಲಿ ಆಗಿತ್ತು. ಆಮೇಲೆ ನೀನೊಬ್ಬ ಸಾಧುವಾಗಿ ಹಿಮಾಲಯದ ವಾಸಿಯಾಗಿದ್ದೆ. ಹಿಮಾಲಯದಲ್ಲಿ ಶಿವನ ಜ್ಞಾನ ಮಾಡ್ತಾ ಕಾಲ ಕಳೆದಿದ್ದೀಯ. ನಿನ್ನ ಭಕ್ತಿಯನ್ನ ಶಿವ ಮೆಚ್ಚಿದ್ದ. ಭವಿಷ್ಯದಲ್ಲಿ ನೀನು ಮತ್ತೆ ಶಿವಭಕ್ತನಾಗಿ ಗುರ್ತಿಸಿಕೊಳ್ಳಲಿದ್ದೀಯ.
ಇದನ್ನೂ ಓದಿ:ಅಭಿಷೇಕ್, ರಿಂಕು ಸಿಂಗ್, ಸುದರ್ಶನ್ ಬ್ಯಾಟಿಂಗ್ಗೆ ಮುಂಚೆ ಏನ್ ಮಾಡ್ತಾರೆ.. ಹೀಗೆ ಮಾಡೋದು ಯಾಕೆ?
ನಾಡಿಶಾಸ್ತ್ರ ಭವಿಷ್ಯ
ಈ ಜನ್ಮದಲ್ಲಿ ಆಗಿರೋ ಆಗೋ ಹೋಗುಗಳು, ಪೂರ್ವಜನ್ಮದ ರಹಸ್ಯವನ್ನ ಕೇಳ್ತಾ ಇದ್ರೆ ಯಾರೇ ಆದ್ರೂ ಥ್ರಿಲ್ ಆಗಿ ಬಿಡ್ತಾರೆ. ಜಪಾನ್ ಉದ್ಯಮಿಗೆ ಆವಾಗ ಏನಾಗಿದ್ರೋ? ಅದನ್ನ ಚಾಚುತಪ್ಪಗೇ ನಾಡಿಶಾಸ್ತ್ರ ಹೇಳಿತ್ತು. ಅದನ್ನ ಕೇಳಿ ಆತನಿಗೆ ಪಕ್ಕಾ ಶಾಕ್ ಆಗಿತ್ತು. ಅದು ಹೇಗೆ ನನ್ನ ಬಗ್ಗೆ ಇಷ್ಟೊಂದ್ ಪಕ್ಕಾ ಹೇಳೋದಕ್ಕೆ ಸಾಧ್ಯ ಅಂತ ಯೋಚನೆ ಮಾಡಿದ್ದ. ಆದ್ರೆ, ಭವಿಷ್ಯದಲ್ಲಿ ತಾನು ಮತ್ತೆ ಶಿವ ಭಕ್ತನಾಗಿ ಕಾಣಿಸ್ಕೊಳ್ತೀನಿ ಅಂತಾ ಹೇಳಿದ್ದು ಆತನಿಗೆ ಅಷ್ಟೇನ್ ಕುತೂಹಲ ಹುಟ್ಟಿಸಿಲ್ಲ. ಯಾಕಂದ್ರೆ, ಆತನಿಗೆ ಅಧ್ಯಾತ್ಮದ ಬಗ್ಗೆ ಗಂಧಗಾಳಿಯೂ ಇಲ್ಲವಾಗಿತ್ತು. ಹಾಗೇ ನಾಡಿಶಾಸ್ತ್ರ ಕೇಳಿ ಆದ್ಮೇಲೆ ತಮಿಳುನಾಡಿನಿಂದ ಜಪಾನ್‌ಗೆ ಪ್ರಯಾಣ ಮಾಡ್ತಾನೆ.
ಕನಸಲ್ಲಿ ಶಿವನ ದರ್ಶನ, ಹಿಮಾಲಯ, ಉತ್ತರಖಂಡ!
ಭಾರತದಿಂದ ಜಪಾನ್‌ಗೆ ಹೋರಡುವಾಗ್ಲೂ ಆತನ ಮನಸ್ಸಿನಲ್ಲಿ ಇದ್ದಿದ್ದು ಉದ್ಯಮ ಉದ್ಯಮ ಅನ್ನೋದ್ ಬಿಟ್ರೆ ಬೇರೆ ಏನೋ ಇರ್ಲಿಲ್ಲ. ಆದ್ರೆ, ರಾತ್ರಿ ಅಲ್ಲಿ ನಿದ್ರೆಗೆ ಜಾರಿದಾಗ ನಾಡಿಶಾಸ್ತ್ರದಲ್ಲಿ ಏನು ಹೇಳಲಾಗ್ತಿರೋ ಅದುವೇ ಕನಸಿನಲ್ಲಿ ದರ್ಶನವಾಗಿತ್ತು. ಹೌದು, ಸಾಕ್ಷಾತ್ ಶಿವನ ದರ್ಶನ ಆದಂತೆ ಭಾಸವಾಗುತ್ತೆ, ತಾವು ಹಿಮಾಲಯದಲ್ಲಿ ಓಡಾಡ್ತಾ ಇರುವಂತೆ ಕಾಣಿಸುತ್ತೆ, ಶಿವಭಕ್ತಿಯಲ್ಲಿ ತೊಡಗಿಸ್ಕೊಂಡಂತೆ ಕಾಣಿಸುತ್ತೆ. ತತ್ ಕ್ಷಣವೇ ಎಚ್ಚರ ಆಗುತ್ತೆ. ಅವಾಗ್ಲೇ ಜ್ಞಾನೋದಯವಾಗುತ್ತೆ. ತಾನು ಇರ್ಬೇಕಾಗಿದ್ದಿದ್ದು ಜಪಾನ್‌ನಲ್ಲಿ ಅಲ್ಲವೇ ಅಲ್ಲ, ತನ್ನ ಕಾರ್ಯಕ್ಷೇತ್ರ ಕಂಪನಿ ಅಲ್ಲ.. ತನ್ನ ಜೀವ ಏನಿದ್ರೂ ಶಿವಭಕ್ತಿಗೆ ಮೀಸಲು ಅನ್ನೋದ್ ಅರಿವಾಗುತ್ತೆ.
ನಾಡಿಶಾಸ್ತ್ರ ಭವಿಷ್ಯ ಬಂತು.. ಕನಸಿನಲ್ಲಿ ಹಿಮಾಲಯದಲ್ಲಿ ಓಡಾಡುವುದು ಬಿತ್ತು ಅಂದ ಮಾತ್ರಕ್ಕೆ ತಾನು ಸಾಧು ಆಗಲು ಸಾಧ್ಯವಿಲ್ಲ ಅನ್ನೋದ್ ಉದ್ಯಮಿಗೆ ಗೊತ್ತಿತ್ತು. ಹೀಗಾಗಿ ನಿಧಾನಕ್ಕೆ ಹಿಂದೂ ಧರ್ಮದ ಬಗ್ಗೆ ತಿಳಿದ್ಕೊಳ್ಳುತ್ತಾ ಹೋಗ್ತಾರೆ. ಆಧ್ಯಾತ್ಮದತ್ತ ಒಳವು ಬೆಳೆಸ್ಕೊಳ್ತಾರೆ. ಶಿವನ ಬಗ್ಗೆ ಜಾಸ್ತಿ ಅಧ್ಯನ ಮಾಡೋದಕ್ಕೆ ಸ್ಟಾರ್ಟ್ ಮಾಡ್ತಾನೆ. ಹಾಗೇ ಜಪಾನ್‌ನಲ್ಲಿ ಇರುವಾಗ್ಲೇ ಶಿವಪೂಜೆ ಶುರು ಮಾಡಿರ್ತಾನೆ. ಅಂತಿಮವಾಗಿ ತಾವು ಭಾರತಕ್ಕೆ ಹೋಗ್ಬೇಕು, ಪೂರ್ವಜರನ್ನ ಭೇಟಿ ಮಾಡ್ಬೇಕು, ಹಿಮಾಲಯದಲ್ಲಿ ಶಿವಭಕ್ತಿಯಲ್ಲಿ ತೊಡಗಿಸ್ಕೊಳ್ಳಬೇಕು ಅಂತಾ ಡಿಸೈಡ್ ಮಾಡ್ತಾರೆ ಜಪಾನ್ ಉದ್ಯಮಿ. ಹೀಗಾಗಿ ತನ್ನ ಒಡೆತನದಲ್ಲಿದ್ದ ಕೋಟಿ ಕೋಟಿ ಮೌಲ್ಯದ ಕಂಪನಿಯನ್ನ ಪ್ರೀತಿಪಾತ್ರದ ಶಿಷ್ಯರಿಗೆ ಹಸ್ತಾಂತರ ಮಾಡ್ತಾನೆ. ಹಾಗೇ ತಾನು ವಾಸವಾಗಿರೋ ಮನೆಯಲ್ಲಿ ಶಿವನ ದೇವಾಲವಾಗಿ ಮಾಡ್ತಾನೆ. ಆಮೇಲೆ ತಮ್ಮ ಶಿಷ್ಯರ ಜೊತೆ ಸೇರಿ ಭಾರತಕ್ಕೆ ಪ್ರಯಾಣಿಸಿದ್ದಾರೆ.
ವಿಶೇಷ ವರದಿ:ಮಂಜುನಾಥ್ ಮಳಗುಳಿ,ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ