ಇವತ್ತಿನಿಂದ ಟೋಲ್ ದರ ಹೆಚ್ಚಳ.. ಬೆಂಗಳೂರು ಪ್ರಯಾಣಿಕರು ಓದಲೇಬೇಕಾದ ಸ್ಟೋರಿ..!

author-image
Ganesh
ಇವತ್ತಿನಿಂದ ಟೋಲ್ ದರ ಹೆಚ್ಚಳ.. ಬೆಂಗಳೂರು ಪ್ರಯಾಣಿಕರು ಓದಲೇಬೇಕಾದ ಸ್ಟೋರಿ..!
Advertisment
  • ಹೊಸೂರು ರಸ್ತೆಯ ಎರಡು ಟೋಲ್​​ನಲ್ಲೂ ದರ ಹೆಚ್ಚಳ
  • ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ದರ ಹೆಚ್ಚಳ
  • ಕಾರ್, ಜೀಪ್, ಭಾರೀ ವಾಹನಗಳಿಗೆ ಕನಿಷ್ಠ 5 ರೂ ಹೆಚ್ಚಳ

ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್​ ಕೊಟ್ಟಿದೆ. ಬೆಂಗಳೂರಲ್ಲಿ ಇಂದಿನಿಂದ ಎಲಿವೇಟೆಡ್ ಕಾರಿಡಾರ್ ಟೋಲ್ ದರ ಹೆಚ್ಚಳವಾಗ್ತಿದೆ. ಹೊಸೂರು ರಸ್ತೆಯ ಎರಡು ಟೋಲ್​, ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ದರ ಏರಿಕೆಯಾಗಲಿದೆ. ದಿನದ ಟೋಲ್ ದರ ಜೊತೆ ಜೊತೆಗೆ ತಿಂಗಳ ಪಾಸ್ ಹಾಗೂ ವಾರ್ಷಿಕ ಪಾಸ್ ದರವೂ ಹೆಚ್ಚಳವಾಗುತ್ತಿದೆ. ಕಾರ್, ಜೀಪ್, ಲಘು ವಾಹನ, ಭಾರಿ ವಾಹನಗಳಲ್ಲಿ ಕನಿಷ್ಠ 5 ರೂಪಾಯಿ ಹೆಚ್ಚಳವಾಗಲಿದೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಭರ್ಜರಿ ಗುಡ್​ನ್ಯೂಸ್​.. ಕಿಚ್ಚ ಸುದೀಪ್ ಅವರಿಂದಲೇ ಬಿಗ್​ಬಾಸ್​ ಸೀಸನ್​ 12 ಹೋಸ್ಟ್..!

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ದರ ಎಷ್ಟಾಗಲಿದೆ?

  • ಕಾರು, ಜೀಪ್, ನಾಲ್ಕು ಚಕ್ರದ ಲಘು ವಾಹನಗಳಿಗೆ ಒಂದು ಪ್ರಯಾಣಕ್ಕೆ 65 ರೂಪಾಯಿ (ಹಳೆ ಬೆಲೆ 60)
  •  ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 90 ರೂಪಾಯಿ (ಹಳೆ ಬೆಲೆ 85)
  •  ದ್ವಿಚಕ್ರ ವಾಹನಗಳಿಗೆ ಒಂದು ಮಾರ್ಗದ ಪ್ರಯಾಣಕ್ಕೆ 25 ರೂಪಾಯಿ ಪಾವತಿಸಬೇಕಾಗಿದೆ (ಬದಲಾವಣೆ ಇಲ್ಲ)
  •  ಲಾರಿ (ಟ್ರಕ್) ಹಾಗೂ ಬಸ್‌ಗಳಿಗೆ ಒಂದು ಬದಿ ಪ್ರಯಾಣಕ್ಕೆ 175 (ಹಳೆ ಬೆಲೆ 170) ರೂಪಾಯಿ
  •  ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂಪಾಯಿ ಕಟ್ಟಬೇಕಿದೆ (ಹಳೆ ಬೆಲೆ 345)

ಅತ್ತಿಬೆಲೆ ಟೋಲ್ ದರ ಹೆಚ್ಚಳ

  • ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂಪಾಯಿ (ಹಳೆ ಬೆಲೆ 35)
  • ಲಘು ವಾಹನಗಳು,‌ ಮಿನಿ ಬಸ್ 65 ರೂಪಾಯಿ (ಹಳೆ ಬೆಲೆ 60)
  • ಟ್ರಕ್, ಬಸ್ 125 ರೂಪಾಯಿ (ಹಳೆ ಬೆಲೆ 120)
  • ದೊಡ್ಡ ಮಲ್ಟಿ ಎಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‌ಗೆ 265 ರೂಪಾಯಿ ಇದೆ (ಹಳೆ ಬೆಲೆ 260)

ಇದನ್ನೂ ಓದಿ: ತನಗೆ ಉಳಿಯಲು ಸರಿಯಾದ ಮನೆಯೇ ಇಲ್ಲ.. ಆದರೂ ಅಂಗನವಾಡಿಗಾಗಿ ಜಾಗ ದಾನ ಮಾಡಿದ ಅಜ್ಜಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment