ಅಜಿತ್ ಕಾರು ಪಲ್ಟಿ.. ಪ್ರಾಣಾಪಾಯದಿಂದ ಪಾರಾದ ಕಾಲಿವುಡ್​ ನಟ

author-image
AS Harshith
Updated On
ಅಜಿತ್ ಕಾರು ಪಲ್ಟಿ.. ಪ್ರಾಣಾಪಾಯದಿಂದ ಪಾರಾದ ಕಾಲಿವುಡ್​ ನಟ
Advertisment
  • ಕಾಲಿವುಡ್​ ನಟ ಅರ್ಜಿತ್​ ಚಲಾಯಿಸುತ್ತಿದ್ದಾ ಕಾರು ಪಲ್ಟಿ
  • ರಸ್ತೆಯಲ್ಲಿ ಚಲಾಯಿಸುತ್ತಿದ್ದ ವೇಳೆ ಪಲ್ಟಿ ಹೊಡೆದ ಕಾರು
  • ಅಜಿತ್​ ಜೊತೆಗೆ ಕಾರಿನಲ್ಲಿದ್ದ ಮತ್ತೊಬ್ಬ ನಟ ಯಾರು ಗೊತ್ತಾ?

ಕಾಲಿವುಡ್​ ನಟ ಅಜಿತ್​ ಕಾರು ಪಲ್ಟಿ ಹೊಡೆದಿದೆ. ಸಿನಿಮಾ ಶೂಟಿಂಗ್​ ವೇಳೆ ಡ್ರಿಪ್ಟ್​​ ಮಾಡುವ ವೇಳೆ ಪಲ್ಟಿಯಾಗಿದೆ. ಈ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಜಿತ್​ ಕುಮಾರ್​ ‘ವಿಡೈಮುಯರ್ಚಿ’ ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದೆ. ಅಂದಹಾಗೆಯೇ ಇದು ಕಳೆದ ವರ್ಷ ಶೂಟಿಂಗ್​ ಸಮಯದಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಸದ್ಯ ಮಧ್ಯಪ್ರದೇಶದಲ್ಲಿ ಪ್ರವಾಸದಲ್ಲಿರುವ ನಟ, ಕಳೆದ ವರ್ಷ ಕಾರು ಸ್ಟಂಟ್​ ಮಾಡುವಾಗ ಅವರು ಚಲಾಯಿಸುತ್ತಿದ್ದ ಕಾರು ಪಲ್ಟಿ ಹೊಡೆದಿತ್ತು.

ಅಜಿತ್​ ಯುರೋಪಿನ್ ದೇಶದಲ್ಲಿ ಸ್ಟಂಟ್​ ಮಾಡುವಾಗ ಕಾರು ಮಗುಚಿ ಬಿದ್ದಿದೆ. ಡ್ಯೂಪ್ ಇಲ್ಲದೇ ನಟ ಕಾರು ಚಲಾಯಿಸುವ ಮತ್ತು ಸಾಹಸ ಮಾಡುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.


">April 4, 2024

ಇದನ್ನೂ ಓದಿ:VIDEO: ತಮಿಳು ಖ್ಯಾತ ನಟ ಸೂರ್ಯ, ಜ್ಯೋತಿಕಾ ರಗಡ್ ವರ್ಕೌಟ್; ಫ್ಯಾನ್ಸ್ ಫುಲ್​ ಶಾಕ್​

ಅಜಿತ್​ ಜೊತೆಗೆ ನಟ ಆರವ್​ ಕೂಡ ಕಾರಿನಲ್ಲಿ ಇದ್ದರು. ಈ ಭಯಾನಕ ದೃಶ್ಯವನ್ನು ಪ್ರಚಾರಕ ಸುರೇಶ್​ ಚಂದ್ರ ಹಂಚಿಕೊಂಡಿದ್ದಾರೆ. ‘‘ವಿಡೈಮುಯರ್ಚಿ ಚಿತ್ರೀಕರಣ ನವೆಂಬರ್​ 2023’’ ಎಂದು ಬರೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಅಜಿತ್​ ಕಾರು ಸ್ಟಂಟ್​ ದೃಶ್ಯ ಸೆರೆಯಾಗಿದೆ. ಇನ್ನು ಈ ಅವಘಡದಲ್ಲಿ ಯಾರಿಗೂ ಏನು ಆಗಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment