ಮಕ್ಕಳು ಚಪ್ಪರಿಸಿ ತಿನ್ನೋ ಟೊಮ್ಯಾಟೋ ಸಾಸ್ ಡೇಂಜರ್.. ಆರೋಗ್ಯ ಇಲಾಖೆಯ ವರದಿ; ವೈದ್ಯರು ಹೇಳೋದೇನು?

author-image
admin
Updated On
ಮಕ್ಕಳು ಚಪ್ಪರಿಸಿ ತಿನ್ನೋ ಟೊಮ್ಯಾಟೋ ಸಾಸ್ ಡೇಂಜರ್.. ಆರೋಗ್ಯ ಇಲಾಖೆಯ ವರದಿ; ವೈದ್ಯರು ಹೇಳೋದೇನು?
Advertisment
  • ಸಾಸ್, ಕೆಚಪ್‌ ಬಳಸಿದಾಗ ಮಕ್ಕಳು ಹೆಚ್ಚಿನ ಕ್ವಾಟಿಂಟಿ ತಿನ್ನುತ್ತಾರೆ
  • ರುಚಿ ಹೆಚ್ಚಿಸಲು ಸೋಡಿಯಂ ಬೆನ್ಸೋವೆಟ್ ಅನ್ನು ಹೆಚ್ಚಾಗಿ ಬಳಕೆ
  • ಜಾಸ್ತಿ ಸೋಡಿಯಂ ಬೆನ್ಸೋವೆಟ್‌ಗಳು ಮಕ್ಕಳ ದೇಹ ಸೇರುತ್ತವೆ

ಪುಟಾಣಿ ಮಕ್ಕಳಿಂದ ದೊಡ್ಡವರ ವರೆಗೆ ಬಾಯಿ ಚಪ್ಪರಿಸಿ ಸವಿಯುವ ಟೊಮ್ಯಾಟೋ ಸಾಸ್ ಕೂಡ ಡೇಂಜರ್ ಎನ್ನಲಾಗಿದೆ. ಟೊಮ್ಯಾಟೋ ಸಾಸ್‌ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಇದರಲ್ಲಿ ಕಲಬೆರಕೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ವರದಿಯಲ್ಲಿ ಬಯಲಾಗಿದೆ.

ಕರ್ನಾಟಕ ಆಹಾರ ಇಲಾಖೆ ರಾಜ್ಯದಲ್ಲಿ ಫೆಬ್ರವರಿಯಲ್ಲೇ ಟೊಮ್ಯಾಟೋ ಸಾಸ್‌ಗಳನ್ನು ಪಡೆದು ಲ್ಯಾಬ್ಸ್‌ಗೆ ಕಳುಹಿಸಲಾಗಿತ್ತು. ಈ ವರದಿ ಈಗ ಕೈ ಸೇರಿದ್ದು ಟೊಮ್ಯಾಟೋ ಸಾಸ್‌ ಆರೋಗ್ಯಕ್ಕೆ ಸುರಕ್ಷಿತವಲ್ಲ ಎಂದು ವರದಿ ಬಂದಿದೆ.

publive-image

ಸಾಸ್‌ನಲ್ಲಿ ಕಲಬೆರಕೆ ಏನು?
ಟೊಮ್ಯಾಟೋ ಸಾಸ್‌ಗೆ ಹಾಕೋ ಕೆಚಪ್‌ಗಳಲ್ಲಿ ರುಚಿ ಹೆಚ್ಚಿಸಲು ಸೋಡಿಯಂ ಬೆನ್ಸೋವೆಟ್ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಸೋಡಿಯಂ ಬೆನ್ಸೋವೆಟ್‌ನಿಂದ ಕೆಚಪ್ ಫೇವರ್ ಹಾಗೂ ಟೇಸ್ಟ್ ಚೆನ್ನಾಗಿ ಆಗುತ್ತೆ. ಇದರ ಜೊತೆಗೆ ಹೆಚ್ಚು ದಿನ ಶೇಖರಣೆ ಮಾಡೋದಕ್ಕಾಗಿ ಕೃತಕ ಪ್ರೆರ್ಸವೆಟ್‌ಗಳನ್ನು ಬಳಕೆ ಮಾಡುತ್ತಾರೆ.

ಇದನ್ನೂ ಓದಿ: ನಿಂಬೆ ರಸ ಕುಡಿಯೋದರಿಂದ ಒಂದಲ್ಲ ಎರಡಲ್ಲ ಹಲವಾರು ಲಾಭ; ಈ ಎಲ್ಲಾ ಕಾಯಿಲೆ ಮಾಯ! 

ಆರೋಗ್ಯದ ಮೇಲೆ ಪರಿಣಾಮ!
ಡೇಂಜರ್ ಟೊಮ್ಯಾಟೋ ಸಾಸ್‌ಗಳ ಬಗ್ಗೆ ಡಾಕ್ಟರ್ ಕೀರ್ತಿ ಹಿರಿಸವೆ ಅವರು ನ್ಯೂಸ್‌ ಫಸ್ಟ್‌ಗೆ ಮಾಹಿತಿ ನೀಡಿದ್ದಾರೆ. ಕಲಬೆರಕೆಯ ಟೊಮ್ಯಾಟೋ ಸಾಸ್‌ಗಳನ್ನು ತಿನ್ನುವುದರಿಂದ ಮಕ್ಕಳಿಗೆ ಬ್ಲಡ್ ಪ್ರೆಶರ್ ಹೆಚ್ಚಾಗುತ್ತೆ. ಮಕ್ಕಳ ಕಿಡ್ನಿ ಮೇಲೆ ನೇರವಾಗಿ ಸೋಡಿಯಂ ಬೆನ್ಸೋವೆಟ್ ಪರಿಣಾಮ ಬೀರುತ್ತೆ. ಕಿಡ್ನಿ ಫೇಲ್ಯೂರ್ ಆಗೋ ಚಾನ್ಸ್ ಹೆಚ್ಚಾಗಿ ಇರುತ್ತೆ.

publive-image

ಸಾಸ್, ಕೆಚಪ್‌ಗಳನ್ನು ಬಳಸಿದಾಗ ಮಕ್ಕಳು ಹೆಚ್ಚಿನ ಕ್ವಾಟಿಂಟಿ ತಿನ್ನುತ್ತಾರೆ. ಹಾಗಾಗಿ ತಾಯಂದಿರು ಟೊಮ್ಯಾಟೋ ಸಾಸ್‌ಗಳನ್ನು ಬಳಕೆ ಮಾಡುತ್ತಾರೆ. ಆದ್ರೆ ಜಾಸ್ತಿ ಟೇಸ್ಟಿಂಗ್ ಪೌಡರ್ ಹಾಗೂ ಸೋಡಿಯಂ ಬೆನ್ಸೋವೆಟ್‌ಗಳು ಮಕ್ಕಳ ದೇಹ ಸೇರುತ್ತವೆ. ಬೇಸಿಗೆ ಕಾಲ ಇರೋದ್ರೊಂದ ಬಿಸಿಲು ಹೆಚ್ಚಾಗಿದೆ. ಈ ಸಮಯದಲ್ಲಿ ವಾಂತಿ ಬೇದಿ ಕಾಲರದಂತಹ ಕಾಯಿಲೆಗಳು ಬರುತ್ತವೆ.

ಟೊಮ್ಯಾಟೋ ರೇಟ್ ಹೆಚ್ಚಾಗಿದ್ದಾಗ್ಲೂ ಬಹಳ ಕಡಿಮೆ ದುಡ್ಡಿಗೆ ಕೆಚಪ್ ಸಿಗುತ್ತೆ. ಅದರಲ್ಲೇ ಜನರು ವಾಸ್ತವ ಏನು ಅಂತ ತಿಳಿದುಕೊಳ್ಳಬೇಕು. ಎಷ್ಟು ಕಳಪೆ ಗುಣಮಟ್ಟದಲ್ಲಿ ಕೆಚಪ್, ಸಾಸ್‌ಗಳು ತಯಾರಾಗುತ್ತೆ ಅನ್ನೋದನ್ನು ಅರಿಯಬೇಕು. ಈ ಪ್ರಾಡೆಕ್ಟ್‌ಗಳನ್ನು ಬಳಕೆ ಮಾಡುವ ಮೊದಲು ಮ್ಯಾನಿಫ್ಯಾಕ್ಚರ್ ಡೇಟ್ ಚೆಕ್ ಮಾಡಿಕೊಳ್ಳಬೇಕು. ಎಕ್ಸ್‌ಪೇರ್ ಹಾಗೂ ಎಕ್ಸ್‌ಪೇರಿಗೆ ಹತ್ತಿರವಿರುವ ಆಹಾರವನ್ನು ಬಳಕೆ ಮಾಡಬಾರದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment