/newsfirstlive-kannada/media/post_attachments/wp-content/uploads/2024/06/renukaswamy6.jpg)
ಚಿತ್ರದುರ್ಗ: ಸ್ಯಾಂಡಲ್ವುಡ್ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಸಂಕಷ್ಟ ತಂದು ಜೈಲು ಪಾಲಾಗುವಂತೆ ಮಾಡಿದ್ದು ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಅಟ್ಟಹಾಸಕ್ಕೆ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ ಅನ್ನೋದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿತ್ತು. ಇದೀಗ ಮೃತ ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಾಳೆ ಅಂದ್ರೆ ಭಾನುವಾರ ಮೃತ ರೇಣುಕಾಸ್ವಾಮಿ ಮಗನ ನಾಮಕರಣ ಸಮಾರಂಭ ಇದೆ.
ಇದನ್ನೂ ಓದಿ:ಫಸ್ಟ್ ವೆಡ್ಡಿಂಗ್ ಆ್ಯನಿವರ್ಸರಿ; ರೇಣುಕಾಸ್ವಾಮಿ ಫೋಟೋ ಹಿಡಿದು ಬಿಕ್ಕಿಬಿಕ್ಕಿ ಅತ್ತ ಸಹನಾ!
ನಟ ದರ್ಶನ್ & ಗ್ಯಾಂಗ್ ಕೈಗೆ ಸಿಲುಕಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಶವವಾಗಿ ಪತ್ತೆಯಾಗಿದ್ದರು. ಆಗ ರೇಣುಕಾಸ್ವಾಮಿ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದರು. ರೇಣುಕಾಸ್ವಾಮಿ ಮೃತಪಟ್ಟ ಬಳಿಕ ಕಳೆದ ಅಕ್ಟೋಬರ್ 16 ಬೆಳಗಿನ ಜಾವ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಇದೀಗ ರೇಣುಕಾಸ್ವಾಮಿ ಹಾಗೂ ಸಹನಾ ದಂಪತಿ ಮಗುವಿಗೆ 5 ತಿಂಗಳು ತುಂಬಿದೆ. ಹೀಗಾಗಿ ಕುಟುಂಬಸ್ಥರು ನಾಳೆ ನಾಮಕರಣ ಶಾಸ್ತ್ರವನ್ನು ಇಟ್ಟುಕೊಂಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸದಲ್ಲೇ ಅವರ ಮಗವಿಗೆ ನಾಮಕರಣ ಶಾಸ್ತ್ರ ನಡೆಯಲಿದೆ. ಹೀಗಾಗಿ ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ರೇಣುಕಾಸ್ವಾಮಿ ಮಗನಿಗೆ ಕುಟುಂಬಸ್ಥರು ಯಾವ ಹೆಸರನ್ನು ಇಡಲಿದ್ದಾರೆ ಅನ್ನೋದು ಕುತೂಹಲ ಕೆರಳಿಸಿದೆ.
ಏನಿದು ರೇಣುಕಾಸ್ವಾಮಿ ಪ್ರಕರಣ?
ನಟ ದರ್ಶನ್ ಅವರ ಆಪ್ತೆ ನಟಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಹಾಗೂ ಫೋಟೋ ಕಳುಹಿಸಿದ್ದರಂತೆ. ಈ ಕಾರಣಕ್ಕೆ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಕೊಲೆ ಮಾಡಿದ್ದಾರೆ ಅನ್ನೋ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ದರ್ಶನ್ ಸೇರಿ ಒಟ್ಟು 17 ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು. ಆರೋಗ್ಯ ಸಮಸ್ಯೆಯಿಂದ ಜಾಮೀನಿನ ಮೇಲೆ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲಿನಿಂದ ಹೊರ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ