Advertisment

ಬಿಗ್​ಬಾಸ್​ನಿಂದ ಆಚೆ ಬಂದ ಬೆನ್ನಲ್ಲೇ ದಿಢೀರ್ ಸುದ್ದಿಗೋಷ್ಠಿ ಕರೆದ ಜಗದೀಶ್​

author-image
Veena Gangani
Updated On
ಎಲ್ಲೆಲ್ಲೂ ಲಾಯರ್ ಜಗದೀಶ್ ಬಗ್ಗೆ ಮಾತುಕಥೆ; ಕಿಚ್ಚನ ಪಂಚಾಯ್ತಿಯಲ್ಲಿ ಕಾದಿದ್ಯಾ ಮಾರಿಹಬ್ಬ
Advertisment
  • 4 ವಾರಕ್ಕೆ ಕಾಲಿಡುವ ಮೊದಲೇ ಬಿಗ್​ಬಾಸ್​ನಿಂದ ಲಾಯರ್ ಆಚೆಗೆ
  • ದೊಡ್ಮನೆಯಿಂದ ಆಚೆ ಬಂದು ಫೋಟೋ ಶೇರ್ ಮಾಡಿದ್ದ ಜಗದೀಶ್
  • ಬಿಗ್​ಬಾಸ್​ ಮನೆಯಲ್ಲಿದ್ದಾಗ ಸಖತ್​ ಹವಾ ಕ್ರಿಯೇಟ್ ಮಾಡಿದ್ರು ವಕೀಲ್

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಆಗಿ ಒಪನಿಂಗ್​ ಪಡೆದುಕೊಂಡು 20 ದಿನ ಕಳೆದಿದೆ. ಬಿಗ್​ಬಾಸ್​ ವೇದಿಕೆಗೆ ಅಚ್ಚರಿಯ ರೀತಿಯಲ್ಲಿ ಜಗದೀಶ್ ಎಂಟ್ರಿ ಕೊಟ್ಟಿದ್ದರು. ಶೋ ಶುರುವಾದ ಮೊದಲ ದಿನದಿಂದಲೂ ಇಂದಿನವರೆಗೂ ಲಾಯರ್ ಜಗದೀಶ್​ ಅವರು ಒಂದು ಹವಾ ಕ್ರಿಯೇಟ್ ಮಾಡಿ ಬಿಟ್ಟಿದ್ದಾರೆ.

Advertisment

ಹೌದು ಬಿಗ್​ಬಾಸ್​ ಮನೆಗೆ 4ನೇ ಸ್ಪರ್ಧಿಯಾಗಿ ಲಾಯರ್​ ಜಗದೀಶ್​ ಅವರು ಎಂಟ್ರಿ ಕೊಟ್ಟಿದ್ದರು. ಇದರಿಂದಲೇ ಕ್ರಶ್​ ಆಫ್​ ಕರ್ನಾಟಕ ಪಟ್ಟ ಕೂಡ ಗಿಟ್ಟಿಸಿಕೊಂಡಿದ್ದರು. ಆದರೆ ನಿನ್ನೆ ಬಿಗ್​ಬಾಸ್​ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಅಂತ ಆರೋಪ ಕೇಳಿ ಬಂದಿತ್ತು.

ಹೀಗಾಗಿ ಶೋ ಶುರುವಾಗಿ ಮೂರನೇ ವಾರಕ್ಕೆ ಬಿಗ್​ಬಾಸ್ ಮನೆಯಿಂದ ಲಾಯರ್​ ಜಗದೀಶ್​ ಆಚೆ ಬಂದಿದ್ದಾರೆ. ಅದು ಕೂಡ ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಂಡು ಶಾಕಿಂಗ್​ ರೀತಿಯಲ್ಲಿ ಆಚೆ ಬಂದಿದ್ದಾರೆ. ಬಿಗ್​ ಮನೆಯಿಂದ ಹೊರ ಬಂದ ಕೂಡಲೇ ಮಾಧ್ಯಮ ಸುದ್ದಿಗೋಷ್ಠಿ ಕರೆದಿದ್ದಾರೆ.

ಪ್ರೀತಿಯ ಮಾಧ್ಯಮ ಮಿತ್ರರೆ, ನಾನು ಬಿಗ್​ಬಾಸ್​ ಸ್ಪರ್ಧಿ ಕೆ. ಎನ್​​ ಜಗದೀಶ್​ ಕುಮಾರ್​. ಬಿಗ್​ಬಾಸ್​ ನಿಂದ ಹೊರ ಬಂದಿರುವೆ. ದಿನಾಂಕ 20ರಂದು ಬೆಳಿಗ್ಗೆ 09.00 ಗಂಟೆಗೆ ಗುಂಡ ಆಂಜನೇಯ ದೇವಸ್ಥಾನ, ಸಹಕಾರ ನಗರದಲ್ಲಿ ಮಾಧ್ಯಮಗಳ ಜೊತೆ ಮೊದಲ ಮಾತುಗಳು ಹಂಚಿಕೊಳ್ಳಲು ಕಾದಿರುವೇ. ದಯವಿಟ್ಟು ನಿಮ್ಮ ಉಪಸ್ಥಿತಿ ತುಂಬಾ ಖುಷಿ ಕೊಡುತ್ತದೆ ಅಂತ ಹೇಳಿದ್ದಾರೆ. ಸದ್ಯ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಲಾಯರ್​​ ಏನೆಲ್ಲಾ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment