ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್​ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?

author-image
Veena Gangani
Updated On
ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್​ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?
Advertisment
  • ಓಲಾ, ಉಬರ್ ಚಾಲಕರಿಂದ ಬಂದ್​ಗೆ ಸಂಪೂರ್ಣ ಬೆಂಬಲ
  • ಬಂದ್​ಗೆ ನೈತಿಕ ಬೆಂಬಲ ಸೂಚಿಸಿರೋ ಹೋಟೆಲ್​ ಸಂಘಟನೆ
  • ರಾಜ್ಯದ ಪರ ಇರ್ತೀವಿ ಅಂತ ಫಿಲ್ಮ್ ಚೇಂಬರ್​ ಕೂಡ ಸಾಥ್

ಬೆಂಗಳೂರು: ನಾಳೆ ಅಖಂಡ ಕರ್ನಾಟಕವೇ ಬಂದ್ ಆಗುತ್ತಾ ಇಲ್ವಾ ಎಂಬ ಗೊಂದಲ ಜನರಿಗೆ ಶುರುವಾಗ್ಬಿಟ್ಟಿದೆ. ಕನ್ನಡಿಗರ ಮೇಲಿನ ದಬ್ಬಾಳಿಕೆ ಖಂಡಿಸಿ ಹಿರಿಯ ಕನ್ನಡ ಹೋರಾಟಗಾರರು ಕೊಟ್ಟಿರೋ ಬಂದ್‌ ಕರೆಗೆ ಯಾಱರು ಬೆಂಬಲ ನೀಡ್ತಾರೆ. ಯಾಱರು ಬೆಂಬಲ ಕೊಡಲ್ಲ ಅನ್ನೋ ಕುರಿತು ಒಂದು ಸ್ಟೋರಿ ಇಲ್ಲಿದೆ ಓದಿ.

ಇದನ್ನೂ ಓದಿ: ಶನಿವಾರ ಕರ್ನಾಟಕ ಬಂದ್ ಆಗುತ್ತಾ? ಇಲ್ವಾ? ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಿಸಿ ತಟ್ಟುತ್ತಾ?

publive-image

ಎಂಇಎಸ್​, ಶಿವಸೇನೆ ಪುಂಡಾಟ ಖಂಡಿಸಿ ನಾಳೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬಂದ್​ ದಿನ ಱಲಿ ಮಾಡೋ ಸಲುವಾಗಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಪೊಲೀಸ್ ಕಮಿಷನರ್​ ಅವರನ್ನು ಭೇಟಿ ಮಾಡಿದ್ದಾರೆ. ಱಲಿ ಮಾಡಲು ಪೊಲೀಸರು ಅವಕಾಶ ಕೊಡುತ್ತಿಲ್ಲ. ಸುಪ್ರೀಂ ಕೋರ್ಟ್ ಗೈಡ್​ಲೈನ್ಸ್ ಇದೆ. ಕಮಿಷನರ್ ಸೂಚನೆಯಾಗಿದೆ ಅಂತ ನಮ್ಮ ವಾಹನಗಳನ್ನ ತಡೆದು ಕರೆ ತಂದಿದ್ದಾರೆಂದು ದೂರು ಕೊಟ್ಟಿದ್ದು, ಱಲಿಗೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಕಮಿಷನರ್ ಎಷ್ಟೇ ಮನವರಿಕೆ ಮಾಡಿದ್ರು, ಬಂದ್ ಇದ್ದೇ ಇರುತ್ತೆ. ನಾವ್ ಮಾಡೇ ಮಾಡ್ತೀವಿ ಅಂತ ವಾಟಾಳ್ ಹೇಳಿದ್ದಾರೆ.

ಬಂದ್​ಗೆ ನೈತಿಕ ಬೆಂಬಲ ಸೂಚಿಸಿರೋ ಹೋಟೆಲ್​ಗಳು, ಬಂದ್ ನಡೆಯುವ ದಿನದಂದು ರಕ್ಷಣೆ ನೀಡಬೇಕೆಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಮನವಿ ಮಾಡಿದೆ. ದೈನಂದಿನ ಸಾರ್ವಜನಿಕ ಚಟುವಟಿಕೆಯಲ್ಲಿ ಆಹಾರ ಪೂರೈಕೆ ಅತ್ಯವಶ್ಯಕ. ಹಾಗಾಗಿ ರಕ್ಷಣೆ ಕೋರಿ ಗೃಹ ಸಚಿವರನ್ನ ಹೋಟೆಲ್ ಸಂಘದ ಅಧ್ಯಕ್ಷ ಜಿ.ಕೆ ಶೆಟ್ಟೆ ಒತ್ತಾಯಿಸಿದ್ದಾರೆ.

publive-image

ರಾಜ್ಯದ ಪರ ಇರ್ತೀವಿ ಅಂತ ಫಿಲ್ಮ್ ಚೇಂಬರ್​ ಕೂಡ ಸಾಥ್

ನೆಲ.. ಜಲ.. ವಿಚಾರಕ್ಕೆ ನಾವು ರಾಜ್ಯದ ಪರ ಇರ್ತೀವಿ ಅಂತ ಫಿಲ್ಮ್ ಚೇಂಬರ್​ ಕೂಡ ಬೆಂಬಲ ಕೊಟ್ಟಿದೆ. ಶೂಟಿಂಗ್ ನಿಲ್ಲಿಸೋದರ ಬಗ್ಗೆ ಚಿಂತನೆ ನಡೆಸಿಲ್ಲ. ಬದಲಾಗಿ ಥಿಯೇಟರ್​ಗಳಲ್ಲಿ ಮಧ್ಯಾಹ್ನದ ತನಕ ಪ್ರದರ್ಶನ ಇರೋದಿಲ್ಲ. ನಾವು ಕೂಡ ಬಂದ್​ಗೆ ಸಹಕಾರ ನೀಡ್ತೀವಿ ಅಂದಿದ್ದಾರೆ.

publive-image

ಓಲಾ, ಉಬರ್ ಚಾಲಕರಿಂದ ಬಂದ್​ಗೆ ಸಂಪೂರ್ಣ ಬೆಂಬಲ

ಶನಿವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಮ್ಮ ವಾಹನಗಳು ರಸ್ತೆಗಿಳಿಯಲ್ಲ ಅಂತಾ ಓಲಾ ಉಬರ್ ಸಂಘಟನೆ ಬಂದ್​ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಓಲಾ ಉಬರ್ ಡ್ರೈವರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷ ಮಾಹಿತಿ ನೀಡಿದ್ದಾರೆ.

ಮದ್ಯಪ್ರಿಯರಿಗೆ ಬಂದ್ ದಿನವೂ ಗುಡ್​ನ್ಯೂಸ್

ಮದ್ಯಪ್ರಿಯರಿಗೆ ಬಂದ್ ದಿನವೂ ಗುಡ್​ನ್ಯೂಸ್ ಸಿಗಲಿದೆ. ಬಂದ್ ದಿನ ರಾಜ್ಯಾದ್ಯಂತ 12 ಸಾವಿರ ಬಾರ್. ಬೆಂಗಳೂರಲ್ಲಿರೋ 2,750 ಬಾರ್​ಗಳು ಎಂದಿನಂತೆ ಓಪನ್ ಇರಲಿದೆ. ನಗರದ ಕೆಲ ಮಾಲ್ ಅಸೋಸಿಯೇಷನ್​ನಿಂದ ನೈತಿಕ ಬೆಂಬಲ ಸಿಕ್ಕಿದೆ. ಒಟ್ಟಾರೆ, ಕೆಲವು ಸಂಘಟನೆಗಳು ಬೆಂಬಲವನ್ನ ನೀಡಿವೆ. ಇನ್ನಷ್ಟು ಸಂಘಟನೆಗಳು ಬಂದ್ ನಿಂದ ದೂರ ಸರಿದಿವೆ. ಬಂದ್​ ಇನ್ನೂ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment