/newsfirstlive-kannada/media/post_attachments/wp-content/uploads/2024/08/BENGALURU-1.jpg)
ನಾಳೆ ಬೆಂಗಳೂರಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ಭಾರೀ ವ್ಯತ್ಯಯ ಆಗಲಿದೆ. ಮಾರತ್ತಹಳ್ಳಿ, ಜೀವಿಕಾ ಆಸ್ಪತ್ರೆ ಸಮೀಪ ಕಾಮಗಾರಿ ಹಿನ್ನೆಲೆಯಲ್ಲಿ ನೀರು ಸರಬರಾಜು ಇರುವುದಿಲ್ಲ ಎಂದು ಜಲಮಂಡಳಿ ತಿಳಿಸಿದೆ.
ಫೆಬ್ರವರಿ 20ರ ಬೆಳಗ್ಗೆ 09 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಸುಮಾರು 12 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.
ಇದನ್ನೂ ಓದಿ: ಉಡುಪಿ; ಕೋಳಿ ಪಂದ್ಯಕ್ಕೆ ಪೊಲೀಸರಿಂದ ಬ್ರೇಕ್.. ಅನುಮತಿ ಕೊಡದಿದ್ರೆ ಹೋರಾಟದ ಎಚ್ಚರಿಕೆ
ಯಾವೆಲ್ಲ ಏರಿಯಾದಲ್ಲಿ ನೀರು ಸಿಗಲ್ಲ..?
ಮಾರತ್ತಹಳ್ಳಿ, ದೊಡ್ಡನ್ನೆಕುಂದಿ, ಮುನ್ನೆಕೊಳಲು, ಓ.ಎಂ.ಬಿ.ಆರ್. ಲೇಔಟ್, ಹೆಚ್.ಆರ್.ಬಿ.ಆರ್ ಲೇಔಟ್, ಸಿಗೇಹಳ್ಳಿ, ಬಟ್ಟರಹಳ್ಳಿ, ಮೇಡೆಹಳ್ಳಿ, ಟಿ.ಸಿ.ಪಾಳ್ಯ, ವಿಜಿನಪುರ, ಬೆಳಂದೂರು, ಯಮಲೂರು, ಮುರುಗೇಶ್ ಪಾಳ್ಯ, ಕೋಣೆನ ಅಗ್ರಹಾರ, ಸಿ.ವಿ.ರಾಮನ್ ನಗರ, ಇಂದ್ರನಗರ, ತಿಪ್ಪಸಂದ್ರ, ಜೀವನ್ ಭೀಮಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯಲು ನೀರು ಸಿಗಲ್ಲ. ಹಾಗಾಗಿ ಇವತ್ತೇ ಅಗತ್ಯ ನೀರು ಶೇಖರಿಸಿಟ್ಟುಕೊಳ್ಳಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಹಳೇ ಬಾಯ್ಫ್ರೆಂಡ್ ಜೊತೆ ಪತ್ನಿ ಪರಾರಿ, ಮನನೊಂದು ಪತಿ ಸಾವಿಗೆ ಶರಣು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ