/newsfirstlive-kannada/media/post_attachments/wp-content/uploads/2025/01/Nandini-KMF-Strike.jpg)
ಬೆಂಗಳೂರು: ನಾಳೆ ರಾಜ್ಯಾದ್ಯಂತ ಕೆಎಂಎಫ್ ನೌಕರರು ಮುಷ್ಕರಕ್ಕೆ ಮುಂದಾಗಿದ್ದು, ಹಾಲು, ಮೊಸರು ಸರಬರಾಜು ಅನುಮಾನ ಎನ್ನಲಾಗಿತ್ತು. ಆದರೆ ತುರ್ತು ಸುದ್ದಿಗೋಷ್ಠಿ ನಡೆಸಿದ ಕೆಎಂಎಫ್ ನೌಕರರ ಸಂಘ ನಾಳಿನ ಮುಷ್ಕರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆಎಂಎಫ್ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು, ನೌಕರರ ನಡುವೆ ಶೀತಲ ಸಮರ ಶುರುವಾಗಿದೆ. ನಿರ್ಲಕ್ಷ್ಯ ತೋರಿದ ಕೆಎಂಎಫ್ ವಿರುದ್ಧ ಅಧಿಕಾರಿಗಳು, ನೌಕರರು ಕೆರಳಿದ್ದು, ಮುಷ್ಕರ ಮಾಡಿ ಕೆಎಂಎಫ್ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸೋಕೆ ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಲಾಂಗ್ ತೋರಿಸಿ ಆವಾಜ್ ಕೇಸ್; ಪೊಲೀಸರಿಂದ ಫೈಯರ್! ಯಾರು ಈ ಪುಡಿ ರೌಡಿ?
ಕೆಎಂಎಫ್ ನೌಕರರು 7ನೇ ವೇತನ ಆಯೋಗದ ವರದಿಯಂತೆ ವೇತನಕ್ಕೆ ಆಗ್ರಹಿದ್ದು, ನಾಳೆ ರಾಜ್ಯಾದ್ಯಂತ ಮುಷ್ಕರ ನಡೆಸಲು ಕರೆ ನೀಡಿದ್ದರು. ಆದರೆ ಕೆಎಂಎಫ್ ಚೇರ್ಮನ್ ಭೀಮಾ ನಾಯಕ್ ಅವರು ನೌಕರರ ಬೇಡಿಕೆ ಈಡೇರಿಕೆಗೆ 3 ದಿನಗಳ ಸಮಯಾವಕಾಶ ಕೇಳಿದ್ದಾರೆ. ಚೇರ್ಮನ್ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ KMF ನೌಕರರ ಸಂಘ ಮುಷ್ಕರ ಮುಂದೂಡಿದೆ. ನಾಳೆ ಹಾಲು ಮೊಸರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಸ್ಪಷ್ಟಪಡಿಸಿದೆ.
KMF ನೌಕರರ ಸಂಘ ಮುಷ್ಕರ ಮುಂದೂಡಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ 7 ದಿನಗಳ ಟೈಮ್ ಕೊಡಲಾಗಿದೆ. ಕೆಎಂಎಫ್ ಆಡಳಿತ ಮಂಡಳಿಗೆ ನೌಕರರ ಸಂಘ ಫೆಬ್ರವರಿ 7ರವರೆಗೆ ಡೆಡ್ ಲೈನ್ ಕೊಟ್ಟಿದೆ.
ಕೆಎಂಎಫ್ ನೌಕರರ ಸಂಘದ ಗೌರವ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಅವರು ಮಾತನಾಡಿ, 16 ಸಾವಿರ ಕೋಟಿ ರೂಪಾಯಿ ವಹಿವಾಟು ಇರುವ KMF ಸಂಸ್ಥೆಯಲ್ಲಿ 16 ಜಿಲ್ಲಾ ಒಕ್ಕೂಟ ಬರುತ್ತೆ. 6 ಸಾವಿರ ಜನ ನೇರ ನೌಕರಿಯಲ್ಲಿ ಇದ್ದಾರೆ.
ರಾಜ್ಯ ಸರ್ಕಾರ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿದೆ. ಆದರೆ ಜಿಲ್ಲಾ ಮಟ್ಟದ ಒಕ್ಕೂಟಗಳಲ್ಲಿ ಒಂದೇ ರೀತಿಯ ಭತ್ಯೆ ಇಲ್ಲ. ಈ ಹಿನ್ನೆಲೆಯಲ್ಲಿ ನೌಕರರು & ಅಧಿಕಾರಿಗಳು ಗೊಂದಲದಲ್ಲಿದ್ದಾರೆ.
ಕೆಎಂಎಫ್ ಜನರಿಗಾಗಿ ಕೆಲಸ ಮಾಡುತ್ತಿದೆ. ಪ್ರತಿದಿನ ನಾವೆಲ್ಲ 3 ಪಾಳಿಯಲ್ಲಿ ಕೆಲಸ ಮಾಡಬೇಕು. 90 ಲಕ್ಷ ಲೀಟರ್ ಹಾಲು ಪ್ರೊಕ್ಯೂರ್ ಮಾಡ್ತಾ ಇದ್ದೇವೆ. 60 ಲಕ್ಷ ಹಾಲು ಬೇಡಿಕೆ ಇದೆ. 30 ಲಕ್ಷ ಹಾಲು ಬೇರೆ ಬೇರೆ ರೀತಿ ಕನ್ವರ್ಟ್ ಮಾಡಲಾಗಿದೆ. ಕೆಎಂಎಫ್ ಅಧಿಕಾರಿ ಸಂಘದ ವತಿಯಿಂದ ಸಾಕಷ್ಟು ಬೇಡಿಕೆ ಇಟ್ಟಿದೆ.
16 ಜಿಲ್ಲಾ ಒಕ್ಕೂಟ ಸಭೆ ಮಾಡಿ ಒಂದು ನಿರ್ಧಾರ ಮಾಡಿದ್ದೇವೆ. ಕೆಎಂಎಫ್ ಅವರಿಗೆ ಮಾತ್ರ ವೇತನ ಪರಿಷ್ಕರಣೆ ಸಲ್ಲದು. ವೇತನ & ಭತ್ಯೆ ಪರಿಷ್ಕರಣೆ ಮಾಡಬೇಕು. ಕೆಎಂಎಫ್ ಹಾಲಿ ಚೇರ್ಮನ್ ಭೀಮಾ ನಾಯಕ್ ಅವರು ಸದ್ಯಕ್ಕೆ ಒಂದು ವಾಗ್ದಾನ ಕೊಟ್ಟಿದ್ದು 3 ದಿನಗಳ ಸಮಯ ತೆಗೆದು ಕೊಂಡಿದ್ದಾರೆ. ಈ 3 ದಿನ ಮುಗಿದ ಮೇಲೆ ಮತ್ತೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ