newsfirstkannada.com

ಕರ್ನಾಟಕದಲ್ಲಿ ರಂಗೇರಿದ ಲೋಕಸಭಾ ಅಖಾಡ; ದಳಪತಿ ಕೋಟೆಗೆ ರಾಹುಲ್ ಗಾಂಧಿ​ ಎಂಟ್ರಿ

Share :

Published April 17, 2024 at 6:17am

    ಮಂಡ್ಯದಿಂದಲೇ ಲೋಕಸಭಾ ಚುನಾವಣೆಗೆ ರಣಕಹಳೆ ಜೋರು

    ಜೆಡಿಎಸ್​ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರ ಲಗ್ಗೆ

    ಸಕ್ಕರೆ ನಾಡು, ಚಿನ್ನದ ನಾಡಲ್ಲಿ ಕಹಳೆ ಮೊಳಗಿಸಲಿರುವ ‘ರಾಗಾ’

ಮಂಡ್ಯ: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ಕಾವೇರಿದೆ. ಘಟಾನುಘಟಿ ನಾಯಕರನ್ನು ಕರೆಸಿ ಅಭ್ಯರ್ಥಿಗಳು ಅಬ್ಬರ ಪ್ರಚಾರ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಪ್ರಧಾನಿ ಮೋದಿ ಸಿಎಂ ತವರು ಜಿಲ್ಲೆಯಲ್ಲಿ ರಣಕಹಳೆ ಮೊಳಗಿಸಿದ್ರು. ಇದೀಗ ಕಾಂಗ್ರೆಸ್​ ಕೂಡ ರಾಹುಲ್​ ಗಾಂಧಿಯನ್ನು ರಾಜ್ಯ ಕರೆಸುತ್ತಿದ್ದಾರೆ. ಇಂದು ರಾಹುಲ್​ ಕರ್ನಾಟಕಕ್ಕೆ ಆಗಮಿಸಲಿದ್ದು, ಜೆಡಿಎಸ್​ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

ಗ್ಯಾರೆಂಟಿ ಅಸ್ತ್ರದಿಂದ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್​, ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಪಣತೊಟ್ಟು ಭರ್ಜರಿ ಕಸರತ್ತು ಮಾಡ್ತಿದೆ. ಈಗಾಗಲೇ ಸಿಎಂ, ಡಿಸಿಎಂ ಕರ್ನಾಟಕದ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಜೋಡೆತ್ತಿನಂತೆ ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಇದೀಗ ಇವರಿಗೆ ಮತ್ತಷ್ಟು ಜೋಶ್​ ತುಂಬಲು ಇಂದು ಕರ್ನಾಟಕಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಾಲಿಡಲಿದ್ದಾರೆ.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ದ್ವಾರಕೀಶ್​.. ನೇತ್ರದಾನ ಮಾಡಿ 8 ಜನರಿಗೆ ಬೆಳಕಾದ ‘ಪ್ರಚಂಡ ಕುಳ್ಳ’

ಜೆಡಿಎಸ್​ ಪ್ರಾಬಲ್ಯದ ಕ್ಷೇತ್ರಗಳಲ್ಲಿ ‘ಕೈ’ ನಾಯಕನ ಮತಬೇಟೆ

ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್​ ಗಾಂಧಿ ಕರ್ನಾಟಕದ ಲೋಕ ಅಖಾಡಕ್ಕೆ ಎಂಟ್ರಿ ಕೊಡ್ತಿದ್ದಾರೆ. ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ ಎಂಬ ಮಾತಿದೆ. ಹೀಗಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಕಾಂಗ್ರೆಸ್​ ಮಂಡ್ಯದಿಂದಲೇ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದೆ. ಇಂದು ಮಧ್ಯಾಹ್ನ 1.30ಕ್ಕೆ ರಾಹುಲ್​ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಮಂಡ್ಯಕ್ಕೆ ತೆರಳಲಿರುವ ರಾಹುಲ್​, ಅಲ್ಲಿ ಮಧ್ಯಾಹ್ನ 2ರಿಂದ 3ರವರೆಗೆ ಸಮಾವೇಶದಲ್ಲಿ ಭಾಗಿ ಮಂಡ್ಯ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಮತಯಾಚನೆ ಮಾಡಲಿದ್ದಾರೆ. ಇದಾದ ಬಳಿಕ ಸಂಜೆ 4 ಗಂಟೆಗೆ ಕೋಲಾರದ ಕಾರ್ಯಕ್ರಮದಲ್ಲಿ ರಾಹುಲ್​ ಗಾಂಧಿ ಭಾಗಿಯಾಗಿ ಮತಬೇಟೆಯಾಡಲಿದ್ದಾರೆ.

ರಾಹುಲ್ ಮಂಡ್ಯ ಭೇಟಿಗೆ ತಕರಾರಿಲ್ಲ ಎಂದ ದಳಪತಿ

ಜೆಡಿಎಸ್​ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಕಣ್ಣಿಟ್ಟಿದ್ದು, ರಾಹುಲ್​ ಗಾಂಧಿ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈಗಾಗಲೇ ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು ಹವಾ ಜೋರಾಗಿದ್ದು, ಪ್ರಚಾರದ ವೇಳೆ ಭೇಟಿ ನೀಡಿದ ಗ್ರಾಮಗಳಲ್ಲಿ ಅದ್ಧೂರಿ ಸ್ವಾಗತ ಸಿಗ್ತಿದೆ. ಇನ್ನು ರಾಹುಲ್​ ಮಂಡ್ಯ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಇದಕ್ಕೆ ನಮ್ಮದೇನೂ ತಕರಾರು ಇಲ್ಲ. ರಾಜಕೀಯವಾಗಿ ಪ್ರಚಾರ ಮಾಡಲು ಯಾರು ಬೇಕಾದ್ರು ಬರಬಹುದು. ಇದರಿಂದ ನಮಗೇನು ಲಾಸ್​ ಇಲ್ಲ ಎಂದು ದಳಪತಿ ಕಾಂಗ್ರೆಸ್​ಗೆ ಮಾತಿನಲ್ಲೇ ಗುದ್ದು ನೀಡಿದ್ದಾರೆ. ಭಾನುವಾರವಷ್ಟೇ ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿಗೆ ಪ್ರಧಾನಿ ಮೋದಿ ಬಂದು, ಮೈತ್ರಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು. ಇದಕ್ಕೆ ಕೌಂಟರ್​ ಎಂಬಂತೆ ಕಾಂಗ್ರೆಸ್​, ದಳಪತಿಗಳ ಭದ್ರಕೋಟೆಗೆ ಮಂಡ್ಯದಲ್ಲಿ ರಾಹುಲ್​ ಗಾಂಧಿ ಮೂಲಕ ಕಾಂಗ್ರೆಸ್​ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕದಲ್ಲಿ ರಂಗೇರಿದ ಲೋಕಸಭಾ ಅಖಾಡ; ದಳಪತಿ ಕೋಟೆಗೆ ರಾಹುಲ್ ಗಾಂಧಿ​ ಎಂಟ್ರಿ

https://newsfirstlive.com/wp-content/uploads/2024/04/rahul-gandi6.jpg

Load More