newsfirstkannada.com

ಹೊಸ ಅಧ್ಯಾಯದ ಹುಮ್ಮಸ್ಸಿನಲ್ಲಿ ಆರ್​ಸಿಬಿ; ವಿರಾಟ್​ ವರ್ಸಸ್ ಗ್ರಿನ್​.. ಇಬ್ಬರಲ್ಲಿ ಯಾರು..?

Share :

Published March 21, 2024 at 9:44am

  ಇನ್ನಿಂಗ್ಸ್ ಆರಂಭದ ಬಗ್ಗೆ RCBಯಲ್ಲಿ ಭಾರೀ ಗೊಂದಲ..!

  ಕ್ಯಾಪ್ಟನ್ ಫಾಫ್ ಜೊತೆ ಇನ್ನಿಂಗ್ಸ್ ಆರಂಭಿಸ್ತಾರಾ ಕೊಹ್ಲಿ?

  ಆರ್​ಸಿಬಿ ಮತ್ತು ಸಿಎಸ್​​ಕೆ ಮಧ್ಯೆ ಮೊದಲ ಐಪಿಎಲ್ ಪಂದ್ಯ

ಇಡಿಯನ್ ಪ್ರೀಮಿಯರ್​ ಲೀಗ್​ನ ಕಿಕ್​ ಸ್ಟಾರ್ಟ್​ಗೆ ಜಸ್ಟ್ ಒಂದೇ ಒಂದು ದಿನ ಬಾಕಿಯಿದೆ. ಹೊಸ ಅಧ್ಯಾಯದ ಆರಂಭಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗಿದೆ. ಹೊಸ ಅಧ್ಯಾಯ ಬರೆಯೋ ಲೆಕ್ಕಚಾರದಲ್ಲಿರುವ ಆರ್​ಸಿಬಿಗೆ ಮಾತ್ರ ಹೊಸ ತಲೆನೋವು ಕೂಡ ಶುರುವಾಗಿದೆ.

ಐಪಿಎಲ್​​​ನ ಹಂಗಾಮಕ್ಕೆ ಕ್ಷಣಗಣನೆ ಶುರುವಾಗಿದೆ. ಅಭಿಮಾನಿಗಳ ಕಣ್ಣೆಲ್ಲಾ ನಾಳೆ ಆರಂಭಗೊಳ್ಳಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಮೇಲೆಯೇ ನೆಟ್ಟಿದೆ. ಹೊಸ ಅಧ್ಯಾಯದ ಹುರುಪಿನಲ್ಲಿ ಚೆನ್ನೈ ಎದುರು ಕಣಕ್ಕಿಳಿಯುತ್ತಿರುವ ಆರ್​ಸಿಬಿಗೆ ಬ್ಯಾಟಿಂಗ್ ತಲೆಬಿಸಿ ಹೆಚ್ಚಿಸಿದೆ.. ಪ್ರಮುಖವಾಗಿ ಓಪನಿಂಗ್ ಸ್ಲಾಟ್​..

ಸೀಸನ್​-17ರಲ್ಲಿ ಯಾರ್ ಆಗ್ತಾರೆ ಆರಂಭಿಕರು..?
ಹೊಸ ಅಧ್ಯಾಯ ಬರೆಯಲು, ಹೊಸ ಹುಮ್ಮಸ್ಸಿನಲ್ಲಿ ಕಣಕ್ಕಿಳಿಯುತ್ತಿರುವ ಆರ್​ಸಿಬಿಗೆ ಐಪಿಎಲ್ ಆರಂಭಕ್ಕೂ ಮುನ್ನವೇ ಹೊಸ ಸಮಸ್ಯೆ ಶುರುವಾಗಿದೆ. ಪ್ರಮುಖವಾಗಿ ಆರ್​ಸಿಬಿ ಆರಂಭಿಕರಾಗಿ ಯಾರು ಇನ್ನಿಂಗ್ಸ್​ ಆರಂಭಿಸ್ತಾರೆ ಅನ್ನೋದು ಯಕ್ಷಪ್ರಶ್ನೆಯಾಗಿ ಕಾಡ್ತಿದ್ದು, ವಿರಾಟ್​ ಕೊಹ್ಲಿ ವರ್ಸಸ್​ ಕಮರೂನ್ ಗ್ರೀನ್ ಎಂಬಂತಾಗಿದೆ. ಹೀಗಾಗಿ ಯಾರು ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ ಅನ್ನೋ ಗೊಂದಲ ಸೃಷ್ಟಿಯಾಗಿದೆ.

ಫಾಫ್​ ಜೊತೆ ಇನ್ನಿಂಗ್ಸ್ ಆರಂಭಿಸ್ತಾರಾ ವಿರಾಟ್​..?
ಒಂದು ತಂಡದ ಯಶ್ಸಸಿಗೆ ಓಪನಿಂಗ್ ಪಾರ್ಟನರ್​​​ಶಿಪ್ ಅನ್ನೋದು ಕ್ರೂಶಿಯಲ್. ಇದಕ್ಕೆ ತಕ್ಕಂತೆ ಕಳೆದ ಸೀಸನ್​ನಲ್ಲಿ ಕ್ಯಾಪ್ಟನ್ ಫಾಫ್ ಹಾಗೂ ವಿರಾಟ್ ಅದ್ಭುತ ಪ್ರದರ್ಶನ ಹೊರಹಾಕಿದ್ರು. ಆದ್ರೀಗ ಸ್ಫೋಟಕ ಬ್ಯಾಟ್ಸ್​ಮನ್ ಕಮರೂನ್ ಗ್ರೀನ್ ಆಗಮನದಿಂದ ಸ್ಟ್ರಾಟರ್ಜಿ ಬದಲಿಸುವ ತಂತ್ರಕ್ಕೆ ಆರ್​ಸಿಬಿ ಕೈಹಾಕೋ ಸಾಧ್ಯತೆ ಇದೆ. ಆರಂಭಿಕನಾಗಿ ಸಕ್ಸಸ್ ಕಂಡಿರುವ ವಿರಾಟ್​​​ಗೆ ಹಿಂಬಡ್ತಿ ನೀಡೋದು ಡೌಟ್.

ಐಪಿಎಲ್​ನಲ್ಲಿ ಆರಂಭಿಕನಾಗಿ ವಿರಾಟ್
ಆರಂಭಿಕನಾಗಿ 98 ಪಂದ್ಯಗಲ್ಲಿ ಬ್ಯಾಟ್ ಬೀಸಿರುವ ವಿರಾಟ್, 3611 ರನ್ ಕೊಳ್ಳೆ ಹೊಡೆದಿದ್ದಾರೆ. 26 ಅರ್ಧಶತಕ, 7 ಶತಕ ಸಿಡಿಸಿರುವ ವಿರಾಟ್, 135.44ರ ಸ್ಟ್ರೈಕ್​ ರೇಟ್​ ಹೊಂದಿದ್ದಾರೆ. ಹೀಗಾಗಿ ಫಾಫ್ ಜೊತೆ ಕಿಂಗ್ ಕೊಹ್ಲಿ ಆರಂಭಿಕನಾಗಿ ಆಡೋದು ಕನ್ಫರ್ಮ್. ಟಿ20 ವಿಶ್ವಕಪ್ ದೃಷ್ಟಿಯಿಂದ 3ನೇ ಕ್ರಮಾಂಕಕ್ಕೆ ಫಿಕ್ಸ್​ ಆಗ್ತಾರಾ ಅನ್ನೋ ಪ್ರಶ್ನೆಯೂ ಇದ್ದೇ ಇದೆ.

ಕಮರೂನ್​ ಗ್ರೀನ್​ಗೆ 3ನೇ ಕ್ರಮಾಂಕ ಗ್ಯಾರಂಟಿ
ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿರೋ ಕಮರೂನ್ ಗ್ರೀನ್, ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡೋ ಕೆಪಾಸಿಟಿ ಇದೆ. ಓಪನರ್​, ಮಿಡಲ್ ಆರ್ಡರ್​, ಫಿನಿಷರ್.. ಹೀಗೆ ಹಲವು ರೋಲ್ ಪ್ಲೇ ಮಾಡಬಲ್ಲ ಗ್ರೀನ್, ಕಳೆದ ಸೀಸನ್​ನಲ್ಲಿ 3ನೆ ಕ್ರಮಾಂಕದಲ್ಲೇ ಅತಿ ಹೆಚ್ಚು ರನ್ ಕೊಳ್ಳೆ ಹೊಡೆದಿದ್ದಾರೆ. ಮುಂಬೈ ಪಾಲಿನ ಮ್ಯಾಚ್ ವಿನ್ನರ್ ಕೂಡ ಆಗಿದ್ರೂ. ಹೀಗಾಗಿ 3ನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡೋದೇ ಬೆಸ್ಟ್ ಅನ್ನೋದು ಫಾನ್ಸ್ ಆಶಯ. ಮ್ಯಾನೇಜ್​ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದೇ ಸದ್ಯದ ಕುತೂಹಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಹೊಸ ಅಧ್ಯಾಯದ ಹುಮ್ಮಸ್ಸಿನಲ್ಲಿ ಆರ್​ಸಿಬಿ; ವಿರಾಟ್​ ವರ್ಸಸ್ ಗ್ರಿನ್​.. ಇಬ್ಬರಲ್ಲಿ ಯಾರು..?

https://newsfirstlive.com/wp-content/uploads/2024/03/RCB-14-1.jpg

Load More