/newsfirstlive-kannada/media/post_attachments/wp-content/uploads/2025/05/LUNGI.jpg)
ಐಪಿಎಲ್​​ನ ಲೀಗ ಹಂತದ ಬಹುತೇಕ ಪಂದ್ಯಗಳು ಕೊನೆಯಾಗಿದ್ದು, ಎರಡು ಪಂದ್ಯಗಳು ಮಾತ್ರ ಉಳಿದುಕೊಂಡಿವೆ. ಇಂದು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪ್ಲೇ-ಆಫ್​ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಎರಡೂ ತಂಡಗಳು ಈಗಾಗಲೇ ಪ್ಲೇ-ಆಫ್ ಪ್ರವೇಶ ಮಾಡಿವೆ.
ಇನ್ನು, ನಾಳೆ ಲೀಗ್ ಹಂತದ ಕೊನೆಯ ಪಂದ್ಯವನ್ನು ಆರ್​ಸಿಬಿ ಮತ್ತು ಎಲ್​ಎಸ್​​ಜಿ ನಡುವೆ ನಡೆಯಲಿದೆ. ನಾಳೆಯ ಪಂದ್ಯವು ಆರ್​ಸಿಬಿ ಪಾಲಿಗೆ ತುಂಬಾನೇ ಮಹತ್ವದ್ದಾಗಿದೆ. ಈಗಾಗಲೇ ಪಾಯಿಂಟ್ಸ್​ ಟೇಬಲ್​​ನಲ್ಲಿ ಮೂರನೇ ಸ್ಥಾನದಲ್ಲಿರುವ ಆರ್​ಸಿಬಿ, ಹಿನ್ನಡೆ ಅನುಭವಿಸಿದೆ.
ಇದನ್ನೂ ಓದಿ: ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ SRH.. ಕೊನೆ ಪಂದ್ಯದಲ್ಲಿ ಕೆಕೆಆರ್​ಗೆ ಭಾರೀ ಮುಖಭಂಗ!
/newsfirstlive-kannada/media/post_attachments/wp-content/uploads/2025/05/RCB_TEAM-4.jpg)
ನಾಳೆ ನಡೆಯಲಿರುವ ಪಂದ್ಯವನ್ನು ಗೆದ್ದರೆ ಮಾತ್ರ ಪಾಯಿಂಟ್ಸ್​ ಟೇಬಲ್​​ನಲ್ಲಿ ಮೊದಲ ಎರಡು ಸ್ಲಾಟ್​ಗಳಲ್ಲಿ ಒಂದು ಸ್ಥಾನವನ್ನು ಅಲಂಕರಿಸುವ ಅವಕಾಶ ಇದೆ. ಹೀಗಾಗಿ ನಾಳೆ ನಡೆಯಲಿರುವ ಪಂದ್ಯವು ಆರ್​ಸಿಬಿಗೆ ಮಾಡು, ಇಲ್ಲವೇ ಮಡಿ ಆಗಿದೆ.
ಇದರ ಮಧ್ಯೆ ಆರ್​ಸಿಬಿಗೆ ಆಟಗಾರರ ಅಲಭ್ಯತೆ ಎದುರಾಗಿದೆ. ಈಗಾಗಲೇ ಜೊಕೊಬ್ ಬೆಥೆಲ್, ಲುಂಗಿ ಎನ್​ಗಿಡಿ ಅವರು ಆರ್​ಸಿಬಿ ಕ್ಯಾಂಪ್ ತೊರೆದಿದ್ದಾರೆ. ಬೆಥೆಲ್ ಸ್ಥಾನದಲ್ಲಿ ಫಿಲ್ ಸಾಲ್ಟ್​ ಇದ್ದಾರೆ. ಲುಂಗಿ ಎನ್​ಗಿಡಿ ಪ್ಲೇಸ್​​ಗೆ ಆರ್​ಸಿಬಿ ಯಾರನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಸಂಭಾವ್ಯ ಆರ್​ಸಿಬಿ ಟೀಂ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್, ಜೊತೇಶ್ ಶರ್ಮಾ, ಟಿಮ್ ಡೆವಿಡ್, ರೊಮಾರಿಯೋ ಶೆಫಾರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್​ವುಡ್
ಇದನ್ನೂ ಓದಿ: ಶಮಿ, ಸರ್ಫರಾಜ್ ಖಾನ್​ಗೂ ಆಘಾತ.. ಐದು ಬಿಗ್​ಸ್ಟಾರ್​ಗೆ ಬಿಸಿಸಿಐ ಶಾಕ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us