/newsfirstlive-kannada/media/post_attachments/wp-content/uploads/2024/04/Dwarakish-4.jpg)
ಕನ್ನಡ ಚಿತ್ರರಂಗಕ್ಕೆ ​​ಇಂದು ಕತ್ತಲು ಆವರಿಸಿದೆ. ಹಿರಿಯ ನಟ ದ್ವಾರಕೀಶ್ ಇಂದು ಸಾವನ್ನಪ್ಪಿದ್ದಾರೆ. ಅನೇಕ ನಟರು ಈ ಹಿರಿಯ ನಟನ ಸಾವಿಗೆ ಕಂಬನಿ ಮಿಡಿದಿದ್ದಾರೆ.
81ನೇ ವಯಸ್ಸಿನಲ್ಲಿ ನಟ ದ್ವಾರಕೀಶ್​ ಸಾವನ್ನಪ್ಪಿದ್ದಾರೆ. ಪತ್ನಿ ಅಂಬುಜ ಸಾವನ್ನಪ್ಪಿದ ದಿನ, ತಿಂಗಳಂದೇ ದ್ವಾರಕೀಶ್​ ಕೊನೆಯುಸಿರೆಳೆದಿದ್ದಾರೆ. ಮಗನ ಬಳಿ ಕೊಂಚ ಹೊತ್ತು ಮಗಲುತ್ತೇನೆಂದು ಹೇಳಿದವರು ಇಹಲೋಕ ತ್ಯಜಿಸಿದ್ದಾರೆ.
ದ್ವಾರಕೀಶ್​ ಪಾರ್ಥಿವ ಶರೀರ ಕಾಣಲು ಅನೇಕ ಮಂದಿ ಅವರ ಮನೆಯತ್ತ ತೆರಳುತ್ತಿದ್ದಾರೆ. ಹಿರಿಯ ನಟರು ಕೂಡ ದ್ವಾರಕೀಶ್​​ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ. ಹಿರಿಯ ನಟನನ್ನು ಕಾಣಲು ಸಾರ್ವಜನಿಕರಿಗೂ ಅವಕಾಶ ಮಾಡಲಾಗಿದ್ದು, ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ದರ್ಶನ ಪಡೆಯಬಹುದಾಗಿದೆ.
/newsfirstlive-kannada/media/post_attachments/wp-content/uploads/2024/04/Dwarakish_4.jpg)
ಸಾರ್ವಜನಿಕರ ದರ್ಶನಕ್ಕೆ ಅವಕಾಶ
ನಾಳೆ ಬೆಳಗ್ಗೆ 6 ಕ್ಕೆ ಮನೆಯಿಂದ ಹೊರಟು 7 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತೆ. 11 ಗಂಟೆಯವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಗಂಟೆಗೆ ಚಾಮರಾಜಪೇಟೆಯ ಟಿಆರ್ ಮೀಲ್ ನತ್ತ ಪಾರ್ಥಿವ ಶರೀರ ರವಾನಿಸಲಾಗುತ್ತದೆ. ನಂತರ ಅವರ ಅಂತ್ಯಕ್ರಿಯೆ ನೆರವೇರಲಿದೆ. 1 ಗಂಟೆಯ ನಂತರ ಅಂತ್ಯಕ್ರಿಯೆಗೆ ನಿರ್ಧಾರ ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us