/newsfirstlive-kannada/media/post_attachments/wp-content/uploads/2025/01/Shivarajkumar-USA-Treetment-1.jpg)
ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿ ಶಿವಣ್ಣ ಆ ರೋಗವನ್ನು ಮಣಿಸಿ ಗೆದ್ದು ಚೇತರಿಸಿಕೊಂಡಿದ್ದಾರೆ. ಅದರ ಚಿಕಿತ್ಸೆಗಾಗಿಯೇ ಕೆಲವು ದಿನಗಳ ಹಿಂದೆ ಅಮೆರಿಕಾಗೆ ತೆರಳಿದ್ದ ಶಿವರಾಜ್​ಕುಮಾರ್, ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಈ ಹಿನ್ನೆಲೆ ನಾಳೆ ಬೆಂಗಳೂರಿಗೆ ಶಿವರಾಜ್​ಕುಮಾರ್ ವಾಪಸ್ ಆಗಲಿದ್ದಾರೆ
ಸೆಂಚುರಿ ಸ್ಟಾರ್ ಶಿವಣ್ಣ ಆಪರೇಷನ್ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಸದ್ಯ ಅಮೇರಿಕಾದಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಶಿವಣ್ಣ ಅಭಿಮಾನಿಗಳಿಗೆ ಖುಷಿಯ ವಿಚಾರ ಏನಂದ್ರೆ ನಾಳೆ ಬೆಳಗ್ಗೆ ಶಿವಣ್ಣ ಅಮೇರಿಕಾದಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಇದರ ಜೊತೆಗೆ ಮತ್ತೊಂದು ಖುಷಿಯ ವಿಚಾರವೆಂದರೇ, ಗಣರಾಜ್ಯೋತ್ಸವ ಅಂಗವಾಗಿ ಜೀ ಕನ್ನಡ ವಾಹಿನಿಯಲ್ಲಿ ಭೈರತಿ ರಣಗಲ್ ಸಿನಿಮಾ ವರ್ಲ್ಡ್ ಪ್ರೀಮಿಯರ್ ಆಗಲಿದೆ.
ಇದನ್ನೂ ಓದಿ:ಸೆಟ್ಟೇರಿದೆ ರಾಜಮೌಳಿ ನಿರ್ದೇಶನದ ಮತ್ತೊಂದು ದೃಶ್ಯ ಕಾವ್ಯ.. ಹೀರೋ, ಹೀರೋಯಿನ್ ಯಾರು ಗೊತ್ತಾ?
ಶಿವರಾಜ್​ ಕುಮಾರ್ ಸಂಪೂರ್ಣ ಗುಣಮುಖರಾಗಿ ವಾಪಸ್ ಬರುತ್ತಿರುವುದು ಅವರ ಅಭಿಮಾನಿಳಲ್ಲಿ ಸಡಗರವನ್ನುಂಟು ಮಾಡಿದೆ. ಇನ್ನು ದುನಿಯಾ ವಿಜಯ್​ ಕೂಡ ಶಿವಣ್ಣ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ವಾಪಸ್ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರನ್ನು ಸ್ವಾಗತಿಸಿ ದುನಿಯಾ ವಿಜಯ್ ಶಿವರಾಜ್​ಕುಮಾರ್​ಗೆ ಪತ್ರವನ್ನು ಬರೆದಿದ್ದಾರೆ.
/newsfirstlive-kannada/media/post_attachments/wp-content/uploads/2025/01/SHIVARAJKUMAR-COMING-BACK-300x169.jpg)
ಹಾಲಹಲ ಕುಡಿದ ಶಿವನಿಗೆ ಯಾವ ಭಯ, ಪಾರ್ವತಮ್ಮನ ಎದೆಹಾಲು ಕುಡಿದ ಶಿವಣ್ಣನಿಗೆ ಯಾವ ಭಯ? ಪ್ರಶ್ನೆ ಮಾಡಿದ್ದು ಕ್ಯಾನ್ಸರ್, ಶಿವಣ್ಣ ಕೊಟ್ಟದ್ದಾಯ್ತು ಆನ್ಸರ್, ವಿಶ್ವಾದ್ಯಂತ ಕೋಟ್ಯಾಂತರ ಕನ್ನಡಿಗರ ಪ್ರಾರ್ಥನೆ ಫಲಕಂಡು, ವೈದ್ಯರ ಚಿಕಿತ್ಸೆ ಯಶಕಂಡು, ನಮ್ಮ ಗಂಡುಗಲಿ ಶತಚಿತ್ರಗಳ ಅಧಿಪತಿ ದೊಡ್ಮನೆಯ ದೊರೆ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಅವರು ಇದೇ 26 ರಂದು ನಮ್ಮ ನಾಡಿಗೆ ಮರಳುತ್ತಿದ್ದಾರೆ. ಅವರ ಕಟ್ಟಾಭಿಮಾನಿಯಾಗಿ ನಾನು ಸ್ವಾಗತ ಕೋರುತ್ತೇನೆ ಎಂದು ದುನಿಯಾ ವಿಜಯ್ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: Kumbh Mela; 2000 ಕೋಟಿ ಹಣದ ಡ್ರಗ್ಸ್ ಕೇಸ್​ನಲ್ಲಿ ಸಿಲುಕಿದ್ದ ಬಾಲಿವುಡ್ ನಟಿ ಈಗ ಸಾಧ್ವಿ
ಇನ್ನು ಶಿವಣ್ಣ ಅಮೆರಿಕಾದಿಂದ ವಾಪಸ್ ಬರುತ್ತಿರುವ ಸುದ್ದಿಯಿಂದ ಅವರ ಅಭಿಮಾನಿಗಳು ತೀವ್ರ ಸಂತಸಗೊಂಡಿದ್ದಾರೆ. ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡುವದಕ್ಕೆ ಕಾಯುತ್ತಿದ್ದಾರೆ. ಏರ್​​ಪೋರ್ಟ್​ ಹಾಗೂ ಶಿವಣ್ಣನ ಮನೆಯ ಎದುರು ಅಭಿಮಾನಿಗಳ ಸಾಗರ ಕಾಣುವ ಎಲ್ಲಾ ಸಾಧ್ಯತೆಗಳು ಕೂಡ ಇವೆ. ಶಿವಣ್ಣನ ಸ್ವಾಗತಕ್ಕೆ ದೊಡ್ಮನೆಯ ಅಭಿಮಾನಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಅದ್ದೂರಿಯಾಗಿ ವೆಲ್​ಕಮ್ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us