/newsfirstlive-kannada/media/post_attachments/wp-content/uploads/2025/07/sigandur-cable-bridge.jpg)
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಬಾರಗೊಡ್ಲು-ಕಳಸವಳ್ಳಿ (ಸಿಗಂದೂರು: Ambaragodlu- Kalasavalli bridge) ನಡುವೆ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ನೂತನ ಸೇತುವೆ ನಾಳೆ ಲೋಕಾರ್ಪಣೆ ಆಗಲಿದೆ. ಕೇಬಲ್ ಸೇತುವೆ (Cable bridge) ಇದಾಗಿದ್ದು, 473 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ವಿಶ್ವಕ್ಕೆ ದೊಡ್ಡ ಮೆಸೇಜ್​ ಕೊಡಲಿದೆ ಭಾರತ.. ಶೀಘ್ರದಲ್ಲೇ ಹೈಪರ್ಸಾನಿಕ್ ಮಿಸೈಲ್ ವಿಷ್ಣುವಿನ ಪರೀಕ್ಷೆ!
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (Nitin Gadkari), ಪ್ರಹ್ಲಾದ್ ಜೋಶಿ ಅವರು ನಾಳೆ ಬೆಳಗ್ಗೆ ಸಿಗಂದೂರಿಗೆ ತೆರಳಿ ಪೂಜೆ ಸಲ್ಲಿಸಿ ಸೇತುವೆ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ. ಸೇತುವೆ ಉದ್ಘಾಟನೆ ನಂತರ ಮಧ್ಯಾಹ್ನ ಸಾಗರದ ನೆಹರೂ ಮೈದಾನದಲ್ಲಿ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಅದರಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ (HD Deve Gowda) ಕೂಡ ಬರುವ ಸಾಧ್ಯತೆ ಇದೆ.
ಸೇತುವೆಯ ವಿಶೇಷತೆಗಳು ಏನೇನು..?
- ಟೆಂಡರ್ ಮೊತ್ತ 473 ಕೋಟಿ ರೂಪಾಯಿ
- ಕಾಮಗಾರಿ ಆರಂಭವಾದ ದಿನ 2019, ಡಿಸೆಂಬರ್ 12
- ಕಾಮಗಾರಿ ಮುಕ್ತಾಯವಾದ ದಿನ 2025, ಜುಲೈ 14
- ಕಾಮಗಾರಿ ನಿರ್ವಹಿಸಿದ ಏಜೆನ್ಸಿ -ದಿಲೀಪ್ ಬಿಲ್ಡ್ ಕಾನ್
- ಸೇತುವೆಯ ಉದ್ದ-2125 ಮೀಟರ್
- ಸೇತುವೆಯ ಅಗಲ- 16 ಮೀಟರ್
- ಸೇತುವೆ ಫುಟ್​ಪಾತ್ 2*1.5 ಮೀಟರ್
- ಸಂಪರ್ಕ ರಸ್ತೆ 1.05 ಕೀಮೀ ನಿಂದ 3 ಕೀಮಿ
- ತಳಪಾಯ 164 ಫೈಲ್ಸ್
- ಉಕ್ಕಿನ ಕೇಬಲ್ ಉದ್ದ 470 ಮೀಟರ್
- ಕೇಬಲ್ ಎತ್ತರ 38.50 ಮೀಟರ್
ಇದನ್ನೂ ಓದಿ: KTM ADVENTURE 390X ಅತ್ಯಂತ ಕಡಿಮೆ ಬೆಲೆಗೆ ಲಭ್ಯ.. ಹಳೆ ಮಾಡೆಲ್​ಗಿಂತ 70 ಸಾವಿರ ರೂಪಾಯಿ ಕಡಿಮೆ!
ಜುಲೈ 14ರಂದು ಈ ಅತ್ಯಾಧುನಿಕ ಸಿಗಂದೂರು ಕೇಬಲ್ ಸೇತುವೆ ಲೋಕಾರ್ಪಣೆ..! pic.twitter.com/lshUoUKkqb
— BJP Karnataka (@BJP4Karnataka) July 11, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ