ಇವತ್ತೇ ಕೊನೆ ದಿನ.. ನಾಳೆಯಿಂದ ₹2000 ನೋಟು ಕೇವಲ ಕಾಗದದ ತುಂಡು; ಆರ್‌ಬಿಐ ಕೊಟ್ಟ ಸ್ಪಷ್ಟನೆ ಏನು?

author-image
admin
Updated On
ಇವತ್ತೇ ಕೊನೆ ದಿನ.. ನಾಳೆಯಿಂದ ₹2000 ನೋಟು ಕೇವಲ ಕಾಗದದ ತುಂಡು; ಆರ್‌ಬಿಐ ಕೊಟ್ಟ ಸ್ಪಷ್ಟನೆ ಏನು?
Advertisment
  • ನೋಟು ವಾಪಸ್ ಮಾಡೋ ಗಡುವು ವಿಸ್ತರಿಸುವ ಸಾಧ್ಯತೆ ಇಲ್ಲ ಎಂದ RBI
  • ಸೆಪ್ಟೆಂಬರ್ 1ರವರೆಗೆ ಶೇಕಡಾ 93ರಷ್ಟು ಕರೆನ್ಸಿ ನೋಟು ಬ್ಯಾಂಕ್‌ಗಳಿಗೆ ವಾಪಸ್
  • ಅಕ್ಟೋಬರ್ 1ರಿಂದ 2000 ಮುಖಬೆಲೆಯ ನೋಟು ಕೇವಲ ಕಾಗದದ ಪೀಸ್

ನವದೆಹಲಿ: ಎರಡು ಸಾವಿರ ರೂಪಾಯಿ ಪಿಂಕ್ ನೋಟಿನ ಚಲಾವಣೆಯನ್ನು ಹಿಂಪಡೆದಿರುವ ಆರ್‌ಬಿಐ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. ಇಂದೇ ಕೊನೆಯ ದಿನ. ನಾಳೆಯಿಂದ 2000 ಮುಖಬೆಲೆಯ ನೋಟುಗಳು ಕೇವಲ ಕಾಗದದ ತುಂಡು ಆಗಿರಲಿದೆ. ಇವತ್ತು ಸಂಜೆಯ ಬಳಿಕ ಯಾವ ಬ್ಯಾಂಕ್‌ಗಳಲ್ಲೂ 2000 ನೋಟುಗಳನ್ನು ಸ್ವೀಕರಿಸಲಾಗುವುದಿಲ್ಲ. ಅಕ್ಟೋಬರ್ 1ರಿಂದ ಪಿಂಕ್ ನೋಟು ತನ್ನ ಮೌಲ್ಯವನ್ನು ಕಳೆದುಕೊಳ್ಳಲಿದೆ ಎನ್ನಲಾಗಿದೆ.

2,000 ಮುಖಬೆಲೆಯ ನೋಟು ವಾಪಸ್ ಪಡೆದಿದ್ದ ಆರ್‌ಬಿಐ, ನೋಟುಗಳನ್ನ ಬದಲಾಯಿಸಲು ಸೆಪ್ಟೆಂಬರ್ 30ರವರೆಗೂ ಗಡುವು ವಿಧಿಸಿತ್ತು. ನೋಟು ಬದಲಾವಣೆಗೆ RBI ನೀಡಿರೋ ಕೊನೇ ದಿನ ಇಂದಿಗೆ ಅಂತ್ಯವಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ಅಕ್ಟೋಬರ್ 1 ರಿಂದ 2000 ರೂಪಾಯಿ ಮುಖಬೆಲೆಯ ನೋಟು ಕೇವಲ ಒಂದು ಕಾಗದದ ತುಂಡು ಆಗಿರಲಿದೆ ಎಂದು ಸ್ಪಷ್ಟಪಡಿಸಿದೆ.

publive-image

ಇದನ್ನೂ ಓದಿ: ₹2000 ಪಿಂಕ್‌ ನೋಟ್‌ ಇನ್ನೂ ನಿಮ್ಮ ಬಳಿ ಇದ್ಯಾ?; ಬ್ಯಾಂಕ್‌ಗೆ ವಾಪಸ್ ಮಾಡದಿದ್ರೆ ಅಪರಾಧ ಆಗುತ್ತಾ?

ಪಿಂಕ್ ನೋಟು ಬ್ಯಾಂಕ್‌ಗಳಿಗೆ ಹಿಂತಿರುಗಿಸಲು ಸೆಪ್ಟೆಂಬರ್ 30 ಕೊನೇ ದಿನವಾಗಿತ್ತು. ಈ ಗಡುವು ಮುಗಿದ ಬಳಿಕ ಅಕ್ಟೋಬರ್ ತಿಂಗಳ ಅಂತ್ಯದವರಿಗೂ ಕಾಲಾವಕಾಶ ವಿಸ್ತರಿಸುವ ಸಾಧ್ಯತೆ ಇದೆ ಅನ್ನೋ ವರದಿಯಾಗಿತ್ತು. ಈ ಮಾಹಿತಿಯನ್ನು ತಳ್ಳಿ ಹಾಕಿರುವ ಆರ್‌ಬಿಐ, ಅಕ್ಟೋಬರ್ 1 ರಿಂದ 2000 ನೋಟು ತನ್ನ ಮೌಲ್ಯವನ್ನು ಕಳೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದೆ.

2000 ರೂಪಾಯಿ ಮುಖಬೆಲೆಯ ನೋಟನ್ನು ಕಳೆದ ಮೇ 19ರಂದು ರಿಸರ್ವ್​ ಬ್ಯಾಂಕ್​​ ಆಫ್​ ಇಂಡಿಯಾ ಚಲಾವಣೆಯಿಂದ ಹಿಂಪಡೆದಿತ್ತು. ಆರ್‌ಬಿಐ ನೀಡಿರೋ ಮಾಹಿತಿ ಪ್ರಕಾರ, ಆಗಸ್ಟ್ 31, 2023ರವರೆಗೆ ಚಲಾವಣೆಯಿಂದ ಮರಳಿ ಪಡೆದ ₹2,000 ನೋಟುಗಳ ಒಟ್ಟು ಮೌಲ್ಯ ₹3.32 ಲಕ್ಷ ಕೋಟಿಯಾಗಿದೆ. ಮೇ ತಿಂಗಳಿಂದ ಸೆಪ್ಟೆಂಬರ್ 1ರವರೆಗೆ ಶೇಕಡಾ 93ರಷ್ಟು ಕರೆನ್ಸಿ ನೋಟು ಬ್ಯಾಂಕ್‌ಗಳಿಗೆ ವಾಪಸ್ ಆಗಿರೋ ಮಾಹಿತಿ ಇದೆ. ಉಳಿದ ಶೇಕಡಾ 7ರಷ್ಟು 2000 ನೋಟುಗಳನ್ನು ಇಂದೇ ಬ್ಯಾಂಕ್‌ಗಳಿಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ನಾಳೆಯಿಂದ ಅವು ಕೇವಲ ಕಾಗದದ ತುಂಡು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment