newsfirstkannada.com

ಗುಜರಾತ್​ನಲ್ಲಿ ಬಲಿಷ್ಠ ಹೈದ್ರಾಬಾದ್​​​​ ಟೀಮ್​.. ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ CSK

Share :

Published March 30, 2024 at 3:02pm

  ಆಟಗಾರರಿಗೆಲ್ಲ ಶಾಲು ಹಾಗೂ ಹೂಮಾಲೆ ಹಾಕಿ ಸ್ವಾಗತ

  ಗುಜರಾತ್ ಟೈಟನ್ಸ್​ ಎದುರಿಸಲಿರುವ ಪ್ಯಾಟ್​​​ ಕಮಿನ್ಸ್​ ಪಡೆ

  ವಿಶಾಖಪಟ್ಟಣಂನಲ್ಲಿ ಚೆನ್ನೈ ವಿರುದ್ಧ ಹೋರಾಡಲಿದೆ ಡೆಲ್ಲಿ

ಐಪಿಎಲ್​​ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್​ ದಾಖಲಿಸಿದ ಸನ್​ರೈಸರ್ಸ್​ ಹೈದ್ರಾಬಾದ್​​ ತಂಡ ಮುಂದಿನ ಪಂದ್ಯವನ್ನಾಡಲು ಅಹ್ಮದಾಬಾದ್​ಗೆ ಬಂದಿಳಿದಿದೆ. ಹೈದ್ರಾಬಾದ್​ನಿಂದ ಅಹ್ಮದಾಬಾದ್​ಗೆ ಆಗಮಿಸಿದ ಆಟಗಾರರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಆಟಗಾರರಿಗೆಲ್ಲ ಶಾಲು ಹಾಗೂ ಹೂಮಾಲೆ ಹಾಕುವ ಮೂಲಕ ಸ್ವಾಗತಿಸಲಾಯಿತು. ಪ್ಯಾಟ್​​​ ಕಮಿನ್ಸ್​ ನಾಯಕತ್ವದ ಆರೆಂಜ್ ಆರ್ಮಿ ನಾಳೆ, ಗುಜರಾತ್ ಟೈಟನ್ಸ್​ ತಂಡವನ್ನ ಎದುರಿಸಲಿದೆ.

ಹೈದ್ರಾಬಾದ್​ನಲ್ಲಿ ನಡೆದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್​ ವಿರುದ್ಧ ಪ್ಯಾಟ್​​​ ಕಮಿನ್ಸ್ ಭರ್ಜರಿ ಬ್ಯಾಟಿಂಗ್ ಮಾಡಿತ್ತು. ಇಡೀ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ 277 ರನ್​ಗಳನ್ನ ಗಳಿಸಿ ಆರ್​ಸಿಬಿ ರೆಕಾರ್ಡ್​ ಬ್ರೇಕ್ ಮಾಡಿ ಹೊಸ ದಾಖಲೆ ಬರೆದರು. ಇವರ ಬ್ಯಾಟಿಂಗ್ ಆರ್ಭಟಕ್ಕೆ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಭಾರೀ ಅವಮಾನಕ್ಕೆ ಒಳಗಾಯಿತು ಎಂದು ಹೇಳಬಹುದು.

ಹ್ಯಾಟ್ರಿಕ್ ಗೆಲುವಿಗೆ ಚೆನ್ನೈ ಭರ್ಜರಿ ತಾಲೀಮು..!

ಚೆನ್ನೈ ಸೂಪರ್ ಕಿಂಗ್ಸ್​​ ತಂಡ 17ನೇ ಐಪಿಎಲ್​ ಆವೃತ್ತಿಯಲ್ಲಿ ಸೋಲಿಲ್ಲದ ಸರದಾರ ಅನ್ನಿಸಿಕೊಂಡಿದೆ. ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿರೋ ಚೆನ್ನೈ ತಂಡ ಭರ್ಜರಿ ತಾಲೀಮು ನಡೆಸಿದೆ. ನಾಳೆ ವಿಶಾಖಪಟ್ಟಣಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೆಣಸಾಡಲಿದ್ದು, ಆಟಗಾರರು ಚೆಪಾಕ್​ ಮೈದಾನದಲ್ಲಿ ಬೆವರು ಹರಿಸಿದ್ದಾರೆ. ಅಜಿಂಕ್ಯಾ ರಹಾನೆ, ರಚಿನ್ ರವೀಂದ್ರ, ಮುಸ್ತಾಫಿಜುರ್ ರೆಹಮಾನ್ ಸೇರಿದಂತೆ ಅನೇಕ ಆಟಗಾರರು ಟ್ರೈನಿಂಗ್ ಸೆಷನ್​​ನಲ್ಲಿ ಭಾಗಿಯಾಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗುಜರಾತ್​ನಲ್ಲಿ ಬಲಿಷ್ಠ ಹೈದ್ರಾಬಾದ್​​​​ ಟೀಮ್​.. ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ CSK

https://newsfirstlive.com/wp-content/uploads/2024/03/DHONI-2-1.jpg

Load More