/newsfirstlive-kannada/media/post_attachments/wp-content/uploads/2025/07/garlic.jpg)
ಬೆಳ್ಳುಳ್ಳಿ ಇದು ಒಂದು ಮಸಾಲೆ ಪದಾರ್ಥ. ಇದರಲ್ಲಿ ಎಷ್ಟೋ ಪೋಷಕಾಂಶಗಳಿದ್ದು ಔಷಧಿಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಅದರಲ್ಲಿ ಮುಖ್ಯ ಎಂದರೆ ಆಯುರ್ವೇದದಲ್ಲಿ ಇದಕ್ಕೆ ಪ್ರತ್ಯೇಕ ಸ್ಥಾನ ವಿದೆ. ಹೀಗಾಗಿಯೇ ಬೆಳ್ಳುಳ್ಳಿಯನ್ನು ಹಲವಾರು ಔಷಧಿಗಳಲ್ಲಿ ಉಪಯೋಗ ಮಾಡುತ್ತಾರೆ. ಇದರ ಜೊತೆಗೆ ಅಡುಗೆಯಲ್ಲಿ ಆಹಾರಕ್ಕೆ ಮತ್ತಷ್ಟು ರುಚಿ ಕೂಡ ಕೊಡುತ್ತದೆ. ಎಷ್ಟೋ ಔಷಧಿ ಗುಣ ಇರೋ ಈ ಬೆಳ್ಳುಳ್ಳಿ ಅನಾರೋಗ್ಯಕ್ಕೂ ಕಾರಣವಾಗುತ್ತದೆ.
/newsfirstlive-kannada/media/post_attachments/wp-content/uploads/2025/07/garlic_New.jpg)
ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಹಸಿ ಬೆಳ್ಳುಳ್ಳಿಯನ್ನು ಕೆಲವರು ತಿನ್ನುತ್ತಾರೆ. ಹೀಗೆ ತಿನ್ನುವುದು ಒಳ್ಳೆಯದೇ ಆದರೂ ಹಸಿ ಬೆಳ್ಳುಳ್ಳಿಯನ್ನ ಹೆಚ್ಚಾಗಿ ತಿಂದರೆ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಹೆಚ್ಚಾಗಿ ಇದನ್ನು ತಿಂದರೆ ರಕ್ತದೊತ್ತಡ ಕಡಿಮೆಯಾಗಿ ಲೋ-ಬಿಪಿಗೆ ಕಾರಣವಾಗುತ್ತದೆ. ಕಣ್ಣು ತಿರುಗುವಂತಹ ಸಮಸ್ಯೆ ಕೂಡ ಎದುರಾಗಬಹುದು.
ಆಯುರ್ವೇದ ಪ್ರಕಾರ ಬೆಳ್ಳುಳ್ಳಿ ಖಾರವಾಗಿದೆ ಎಂದು ಹೇಳಬಹುದು. ನಿತ್ಯ ಬೆಳ್ಳುಳ್ಳಿ ಅಧಿಕವಾಗಿ ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆಗಳು ಬರುತ್ತವೆ. ಮಲಬದ್ಧತೆ, ಗ್ಯಾಸ್​​, ಹೊಟ್ಟೆ ಉಬ್ಬರದಂತ ಸಮಸ್ಯೆಗಳು ನಮ್ಮಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಕಡಿಮೆ ಪ್ರಮಾಣದಲ್ಲಿ ತಿಂದರೆ ಆರೋಗ್ಯ ಸುಧಾರಿಸುತ್ತದೆ.
ಬೆಳ್ಳುಳ್ಳಿಯನ್ನ ಹೆಚ್ಚಾಗಿ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ನಿಮಗೆ ಗ್ಯಾಸ್ ಸಮಸ್ಯೆ ಇದ್ದರೇ ಬೆಳ್ಳುಳ್ಳಿಯನ್ನ ಕಡಿಮೆ ಮಟ್ಟದಲ್ಲಿ ತಿನ್ನಬೇಕು. ಏಕೆಂದರೆ ಹೆಚ್ಚಾಗಿ ತಿಂದರೆ ಹೃದಯಲ್ಲಿ ಉರಿಯೂತದ ಸಮಸ್ಯೆ ಉಂಟಾಗುತ್ತದೆ. ಇದು ಅಲ್ಲದೇ ಹಸಿ ಬೆಳ್ಳುಳ್ಳಿ ಸೇವನೆಯಿಂದ ರಕ್ತ ತೆಳುವಾಗುತ್ತದೆ. ಬೆಳ್ಳುಳ್ಳಿಯಲ್ಲಿ ರಕ್ತ ತೆಳುವಾಗುವಂತ ಅಂಶಗಳು ಇರುತ್ತವೆ. ಕೆಲವೊಬ್ಬರು ಈಗಾಗಲೇ ಮಾತ್ರೆ, ಔಷಧಿಗಳನ್ನ ತೆಗೆದುಕೊಳ್ಳುತ್ತಿದ್ದರೇ ಬೆಳ್ಳುಳ್ಳಿಗಳನ್ನ ತಿನ್ನಲೇಬಾರದು.
ಇದನ್ನೂ ಓದಿ: ಉತ್ತರಾಖಂಡ ಸರ್ಕಾರಿ ನೌಕರರಿಗೆ ಬಿಗ್ ಶಾಕ್​.. ₹5 ಸಾವಿರಕ್ಕಿಂತ ಹೆಚ್ಚು ಖರೀದಿಸಿದ್ರೆ ಅನುಮತಿ ಕಡ್ಡಾಯ!
/newsfirstlive-kannada/media/post_attachments/wp-content/uploads/2024/10/GARLIC.jpg)
ದಿನಕ್ಕೆ ಎಷ್ಟು ಬೆಳ್ಳುಳ್ಳಿ ತಿನ್ನಬೇಕು..?
ಒಂದು ದಿನಕ್ಕೆ ಬೆಳ್ಳುಳ್ಳಿಯಲ್ಲಿನ ಒಂದೋ, ಎರಡೋ ಎಸಳು ಅಥವಾ ಪೀಸ್​ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಹೆಚ್ಚಾಗಿ ಬೆಳ್ಳುಳ್ಳಿ ತಿನ್ನುವುದು ಆರೋಗ್ಯಕ್ಕೆ ಹಾನಿಕರವಾಗಿದೆ. ಅಡುಗೆಯಲ್ಲಿ ಉಪಯೋಗಿಸುವುದು ಆರೋಗ್ಯದ ಮೇಲೆ ಪರಿಣಾಮ ಬೀರಲ್ಲ. ಇದು ಹಸಿ ಬೆಳ್ಳುಳ್ಳಿ ಬಗ್ಗೆ ಮಾತ್ರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us