/newsfirstlive-kannada/media/post_attachments/wp-content/uploads/2024/12/intelligence-agencies.jpg)
ಬೇಹುಗಾರಿಕಾ ಸಂಸ್ಥೆಗಳು ಅಂದ್ರೆ ಇಂಟಲಿಜೆನ್ಸ್ ಎಜೆನ್ಸಿಗಳು ದೇಶದ ಸುರಕ್ಷತೆ, ಭದ್ರತೆ ಹಾಗೂ ಗೌರವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದೇಶಗಳ ಸುಭದ್ರತೆ ಅಪಾಯ ತಂದೊಡ್ಡುವ ಘಟನೆಗಳು ಮುಂಚಿತವಾಗಿಯೇ ಗುರುತಿಸಿ ಅವುಗಳನ್ನು ವ್ಯವಸ್ಥಿತವಾಗಿ ಹೊಡೆದು ಹಾಕಲು ಬೇಹುಗಾರಿಕಾ ಸಂಸ್ಥೆಗಳ ಅವಶ್ಯಕತೆ ತುಂಬಾನೇ ಮುಖ್ಯ. ಈ ಬೇಹುಗಾರಿಕಾ ಸಂಸ್ಥೆಗಳು ದೇಶಗಳ ಆಂತರಿಕ ಭದ್ರತೆಗೆ ಬರುವ ತೊಂದರೆಗಳ ಬಗ್ಗೆ ವಿಷವನ್ನು ಸಂಗ್ರಹಿಸಿ ಸರ್ಕಾರಕ್ಕೆ ಹಾಗೂ ಭದ್ರತಾ ವ್ಯವಸ್ಥೆಗೆ ತಲುಪಿಸುತ್ತವೆ. ಇದರಿಂದ ಶತ್ರು ದೇಶಗಳು ನಮ್ಮ ದೇಶದ ಮೇಲೆ ಮಾಡಬೇಕೆಂದಿರುವ ಹಾನಿಯನ್ನು ಸರಳವಾಗಿ ತಪ್ಪಿಸಲು ಅನುಕೂಲ. ದೇಶಕ್ಕೆ ಬೇಕಾದ ಶತ್ರುಗಳು ಎಲ್ಲಿದ್ದಾರೆ. ಯಾರ ರಕ್ಷಣೆಯಲ್ಲಿದ್ದಾರೆ ಎಂಬುದನ್ನು ಕೂಡ ಈ ಬೇಹುಗಾರಿಕೆ ಸಂಸ್ಥೆಗಳು ಬಹುಬೇಗ ಪತ್ತೆ ಹಚ್ಚುತ್ತವೆ. ಸರ್ಕಾರದ್ದೇ ಒಂದು ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಈ ಬೇಹುಗಾರಿಕಾ ಸಂಸ್ಥೆಗಳ ಭದ್ರತೆಯ ವಿಚಾರ ಬಂದಾಗ ಇವು ಬಂಡೆಗಲ್ಲಿನಂತೆ ನಿಲ್ಲುತ್ತವೆ . ವಿಶ್ವದಲ್ಲಿ ಅಂತಹ ಅಪಾಯಕಾರಿ ಹಾಗೂ ಟಾಪ್ 10 ಬೇಹುಗಾರಿಕಾ ಸಂಸ್ಥೆಗಳು ಯಾವುವು ಅನ್ನೋದರ ಬಗ್ಗೆ ನೋಡುವುದಾದ್ರೆ.
ಸೆಂಟ್ರಲ್ ಇಂಟಲಿಜೆನ್ಸ್ ಎಜೆನ್ಸಿ (ಸಿಎಐ) ಯುಎಸ್: ಜಾಗತಿಕವಾಗಿ ಅತ್ಯಂತ ಚಿರಪರಿಚಿತ ಇರುವ ಬೇಹುಗಾರಿಕೆ ಸಂಸ್ಥೆ ಅಂದ್ರೆ ಅದು ಅಮೆರಿಕಾದ ಸಿಐಎ. ಇದು ವಿಶ್ವದ ಬೇಹುಗಾರಿಕೆ ಸಂಸ್ಥೆಗಳಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ. ಇದು ಅಮೆರಿಕಾ ಪರವಾಗಿ ಈಗಾಗಲೇ ಹಲವಾರು ಆಪೇಷನ್ಗಳನ್ನು ನಡೆಸಿದೆ. ಇದು ಪ್ರಮುಖವಾಗಿ ಭಯೋತ್ಪಾದನೆ ವಿರುದ್ಧ ಹಾಗೂ ಸೈಬರ್ ಸೆಕ್ಯೂರಿಟಿಯ ಪರವಾಗಿ ಕಾರ್ಯನಿರ್ವಹಿಸುತ್ತದೆ. ಓಸಾಮಾ ಬಿನ್ ಲಾಡೆನ್, ಬರ್ಕ್ ಅಲ್ ಬಗ್ಧಾದಿ ಹತ್ಯೆಯ ಹಿಂದೆ ಅಮೆರಿಕಾದ ಈ ಬೇಹುಗಾರಿಕೆ ಸಂಸ್ಥೆಯು ಕಲೆ ಹಾಕಿದ ಮಾಹಿತಿ ಕಂಡು ಇಡೀ ಜಗತ್ತೆ ನಿಬ್ಬೆರಗಾಗಿತ್ತು.
ಮೊಸಾದ್ -ಇಸ್ರೇಲ್: ವಿಶ್ವದಲ್ಲಿ ಅತ್ಯಂತ ಅಪಾಯಕಾರಿ ಬೇಹುಗಾರಿಕೆ ಸಂಸ್ಥೆ ಅಂದ್ರೆ ಅದು ಇಸ್ರೇಲ್ನ ಮೊಸಾದ್. ತನ್ನ ದೇಶದ ಶತ್ರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಒಳಹೊಕ್ಕು ಹೊಡೆದು ಬಂದು ನಾನೇ ಹೊಡೆದುರುಳಿಸಿದ್ದು ಎಂದು ಎದೆತಟ್ಟಿಕೊಂಡು ಹೇಳುವ ಬೇಹುಗಾರಿಕೆ ಸಂಸ್ಥೆ ಜಗತ್ತಿನಲ್ಲಿ ಯಾವುದಾದರೂ ಇದ್ರೆ ಅದು ಮೊಸಾದ್ ಮಾತ್ರ. ವಿಶ್ವದಲ್ಲಿಯೇ ಅತ್ಯಂತ ಗೌರವಕ್ಕೆ ಪಾತ್ರವಾದ ಬೇಹುಗಾರಿಕಾ ಸಂಸ್ಥೆಯೂ ಕೂಡ ಹೌದು ಮೊಸಾದ್. ಭಯೋತ್ಪಾದನೆ ವಿರುದ್ಧ ಈ ಒಂದು ಸಂಸ್ಥೆ ಕೈಗೊಂಡ ಆಪರೇಷನ್ಗಳು ವಿಶ್ವದ ಯಾವ ಸಂಸ್ಥೆಗಳು ಕೂಡ ಕೈಗೊಂಡಿಲ್ಲ. ಹಿಜ್ಬುಲ್ಲಾ, ಹಮಾಸ್ ಹೂತಿ ಭಯೋತ್ಪಾದಕ ಸಂಘಟನೆಗಳ ಪ್ರಮುಖ ನಾಯಕರನ್ನೇ ಇದು ಅವರಿರುವ ಪ್ರದೇಶಕ್ಕೆ ನುಗ್ಗಿ ಹೊಡೆದಿದೆ. ಇದು ನಡೆಸಿದ ಆಪರೇಷನ್ ಎಂಟೆಬ್ಬೆ, ಆಪರೇಷನ್ ಱತ್ ಆಫ್ ಗಾಡ್, ಆಪರೇಷನ್ ಫಿನಾಲೆ, ಅಪೇಷನ್ ಪ್ಲಾಸ್ಮಾಗಳೆಲ್ಲಾ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸುವಂತಿದ್ದವು. ಬೇಹುಗಾರಿಕೆ ಸಂಸ್ಥೆ ಇದ್ರೆ ಮೊಸಾದ್ ತರವೇ ಇರಬೇಕು ಎಂಬ ಮಾತುಗಳನ್ನು ಪ್ರಚಲಿತದಲ್ಲಿಡುವಷ್ಟರ ಮಟ್ಟಿಗೆ ಮೊಸಾದ್ ಅಪಾಯಕಾರಿ
ಇದನ್ನೂ ಓದಿ: ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಗೆ RSS ಖಂಡನೆ.. ಪ್ರಧಾನಿ ಮೋದಿ ಸರ್ಕಾರಕ್ಕೆ ಆಗ್ರಹ; ಹೇಳಿದ್ದೇನು?
ಸಿಕ್ರೇಟ್ ಇಂಟಲಜೆನ್ಸ್ ಸರ್ವಿಸ್ (ಎಂ16) ಯುಕೆ: ಯುಕೆನ ಬೇಹುಗಾರಿಕೆ ಸಂಸ್ಥೆಯನ್ನು ಸಾಮಾನ್ಯವಾಗಿ ಎಂ16 ಎಂದು ಕರೆಯಲಾಗುತ್ತದೆ. ಈ ಒಂದು ಸಂಸ್ಥೆ ಪ್ರಮುಖವಾಗಿ ಕೌಂಟರ್ ಟೆರರಿಸಂ ಹಾಗೂ ಸೈಬರ್ ಆಪರೇಷನ್ಗಳನ್ನು ನಿರ್ವಹಿಸುತ್ತದೆ.
ಫೆಡರಲ್ ಸೆಕ್ಯೂರಿಟಿ ಸರ್ವಿಸ್ (ಎಫ್ಎಸ್ಬಿ) ರಷ್ಯಾ; ಎಫ್ಎಸ್ಬಿ ರಷ್ಯಾದ ಮತ್ತೊಂದು ಬೇಹುಗಾರಿಕಾ ಸಂಸ್ಥೆಯಾದ ಕೆಬಿಜಿಯ ಉತ್ತರಾಧಿಕಾರಿ ಅಥವಾ ಅಂಗಸಂಸ್ಥೆ. ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಇದು ಎಲ್ಲಿಯೂ ರಾಜಿ ಮಾಡಿಕೊಳ್ಳದಂತೆ ಕಾರ್ಯನಿರ್ವಹಿಸುತ್ತದೆ. ದೇಶದ ಆಂತರಿಕ ಸುರಕ್ಷತೆಯ ಜೊತೆ ಜೊತೆಗೆ ಅಂತಾರಾಷ್ಟ್ರೀಯವಾಗಿ ರಷ್ಯಾಗೆ ಆಗಲಿರುವ ಸಮಸ್ಯೆಗಳು ಏನು. ಯಾವೆಲ್ಲಾ ರಷ್ಯಾದ ವಿರುದ್ಧ ಕುತಂತ್ರಗಳನ್ನು ಹೆಣೆಯುತ್ತಿವೆ ಎಂಬ ಪಕ್ಕಾ ಮಾಹಿತಿಯನ್ನು ಕಲೆ ಹಾಕುವ ಸಂಸ್ಥೆ ಎಫ್ಎಸ್ಬಿ.
ಇದನ್ನೂ ಓದಿ:ಈ ಪಟ್ಟಣದಲ್ಲಿ ಇಂಟರ್ನೆಟ್ ಇಲ್ಲ… ಫೋನ್ ಇಲ್ಲ.. ವೈಫೈ ಇಲ್ಲ.. ಮೈಕ್ರೋವೇವ್ ಕೂಡ ಇಲ್ಲ!ಕಾರಣವೇನು?
ರಿಸರ್ಚ್ ಅಂಡ್ ಅನಾಲಸಿಸ್ ವಿಂಗ್ (ರಾ)- ಭಾರತ; 1962ರಲ್ಲಿ ಚೀನಾದೊಂದಿಗಿನ ಯುದ್ಧದಲ್ಲಿ ಸೋತ ಬಳಿಕ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ತನ್ನದೇ ಆದ ಒಂದು ಬೇಹುಗಾರಿಕಾ ಸಂಸ್ಥೆ ಬೇಕು ಎಂಬುದರ ಅರಿವಾಯಿತು. ಇದರ ಪರಿಣಾಮವೇ 1968ರಲ್ಲಿ ಸೃಷ್ಟಿಯಾದ ರಿಸರ್ಚ್ ಅಂಡ್ ಅನಾಲಸಿಸ್ ವಿಂಗ್ ಇದನ್ನು ಚಿಕ್ಕದಾಗಿ ರಾ ಎಂದು ಕರೆಯುತ್ತಾರೆ. ವಿಶ್ವದ ಅತ್ಯಂತ ಅಪಾಯಕಾರಿ ಬೇಹುಗಾರಿಕೆ ಸಂಸ್ಥೆಗಳಲ್ಲಿ ಇದಕ್ಕೆ ಐದನೇ ಸ್ಥಾನವನ್ನು ನೀಡಲಾಗಿದೆ. ಆಪರೇಷನ್ ಬ್ಲೂಸ್ಟಾರ್, ಆರಪೇಷನ್ ಸ್ಮೈಲಿಂಗ್ ಬುದ್ಧ, ಆಪರೇಷನ್ ಕಹುತಾ ಎಂಬಂತ ಅಪಾಯಕಾರಿ ಆಪರೇಷನ್ಗಳನ್ನು ಸರಳವಾಗಿ ಮಾಡಿ ಮುಗಿಸಿದೆ ಈ ಬೇಹುಗಾರಿಕೆ ಸಂಸ್ಥೆ.
ಇಂಟರ್ ಸರ್ವಿಸ್ ಇಂಟಲಿಜೆನ್ಸ್ (ಐಎಸ್ಐ)-ಪಾಕಿಸ್ತಾನ: ಪಾಕಿಸ್ತಾನದ ಐಎಸ್ಐ ಬೇಹುಗಾರಿಕಾ ಸಂಸ್ಥೆಯೂ ಕೂಡ ಅತ್ಯುತ್ತಮ ಬೇಹುಗಾರಿಕಾ ಸಂಸ್ಥೆಗಳ ಸಾಲಿನಲ್ಲಿ ಒಂದು. ಇದು ಪ್ರಾದೇಶಿಕ ಬೌಗೋಳಿಕ ರಾಜಕೀಯ ವಿಚಾರದಲ್ಲಿ ಮೂಗು ತೂರಿಸುವ ಬಗ್ಗೆ ಜಾಗತಿಕವಾಗಿ ಪರ ಹಾಗೂ ವಿರೋಧಗಳ ಮಾತುಗಳನ್ನು ಪಡೆದುಕೊಂಡಿದೆ. ಇದು ಹೆಚ್ಚು ಅಪಘಾನಿಸ್ಥಾನ ಹಾಗೂ ದಕ್ಷಿಣ ಏಷಿಯಾ ಭಾಗದಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.
ಈ ಬೇಹುಗಾರಿಕಾ ಸಂಸ್ಥೆಗಳ ಜೊತೆಗೆ 7 ಸ್ಥಾನದಲ್ಲಿ ಚೀನಾದ ಮಿನಿಸ್ಟ್ರಿ ಆಫ್ ಸ್ಟೇಟ್ ಸೆಕ್ಯೂರಿಟಿ, ಜರ್ಮನಿಯ ಬಿಎನ್ಡಿ, ಫ್ರಾನ್ಸ್ನ ಡಿಜಿಎಸ್ಇ ಹಾಗೂ ಆಸ್ಟ್ರೇಲಿಯಾದ ಎಎಸ್ಐಎಸ್ ಕೂಡ ಸ್ಥಾನವನ್ನು ಪಡೆದುಕೊಂಡಿವೆ. ಇವು ವಿಶ್ವದ ಟಾಪ್ ಟೆನ್ ಬೇಹುಗಾರಿಕಾ ಸಂಸ್ಥೆಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ