Advertisment

2024ರಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಾಡಿದ ಟಾಪ್‌ 10 ವಿಷಯಗಳು ಯಾವುವು? ನೀವೂ ಗೆಸ್ ಮಾಡಿ!

author-image
admin
Updated On
2024ರಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಾಡಿದ ಟಾಪ್‌ 10 ವಿಷಯಗಳು ಯಾವುವು? ನೀವೂ ಗೆಸ್ ಮಾಡಿ!
Advertisment
  • ಅಂತರ್ಜಾಲದಲ್ಲಿ ಭಾರತೀಯರು ಏನೇನು ಹುಡುಕಾಡಿದ್ದಾರೆ ಗೊತ್ತಾ?
  • ಕ್ರೀಡೆ, ಮನರಂಜನೆ, ರಾಜಕೀಯದಲ್ಲಿ ಅಗ್ರಸ್ಥಾನದಲ್ಲಿ ಇರೋದು ಯಾವ್ದು?
  • ಜನಪ್ರಿಯವಾದ ಸರ್ಚ್​​ನಲ್ಲಿ ಅತ್ಯುತ್ತಮ ಬೇಕರಿ, ಟ್ರೆಂಡಿ ಕೆಫೆ, ಶಿವಮಂದಿರ

ಇನ್ನೇನು ಕೆಲವೇ ದಿನಗಳಲ್ಲಿ 2024 ಮುಗಿಸಿ 2025ರ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. 2024ರ ವರ್ಷಾಂತ್ಯದ ಹೊತ್ತಿಗೆ ಅಂತರ್ಜಾಲದಲ್ಲಿ ಭಾರತೀಯರು ಏನೇನು ಹುಡುಕಾಡಿದ್ದಾರೆ ಅನ್ನೋ ಮಾಹಿತಿಯನ್ನ ಗೂಗಲ್ ಹಂಚಿಕೊಂಡಿದೆ. ಕ್ರೀಡೆ, ಮನರಂಜನೆ ಸೇರಿ ಗೂಗಲ್​ನಲ್ಲಿ 2024ರ ಹುಡುಕಾಟದ ವರದಿಯಲ್ಲಿ ಭಾರತೀಯ ವೈವಿದ್ಯಮಯ ಆಸಕ್ತಿಗಳು ಬಹಿರಂಗವಾಗಿವೆ.

Advertisment

ಇದನ್ನೂ ಓದಿ: ಸ್ಟಾರ್​ ನಟನ ಮನೆಯಲ್ಲಿ ಅಲ್ಲೋಲ ಕಲ್ಲೋಲ; ತಂದೆ, ಮಗನ ಮಧ್ಯೆ ಮಾರಾಮಾರಿ; ಕಾರಣವೇನು? 

ನೆಟ್ಟಿಗರ ಹುಡುಕಾಟದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅಗ್ರಸ್ಥಾನದಲ್ಲಿದ್ದು ಕಬ್ಬಡ್ಡಿ, ಫುಟ್​ಬಾಲ್​ನಂತಹ ಕ್ರೀಡೆಗಳ ಬಗ್ಗೆ ತಿಳಿಯಲು ಸಹ ಜನ ಆಸಕ್ತಿ ವಹಿಸಿದ್ದಾರೆ. ಇವೆಲ್ಲದರ ಜೊತೆಗೆ ಪರಿಸರ ಕಾಳಜಿ ಬಗ್ಗೆಯೂ ನೆಟ್ಟಿಗರು ಆಸಕ್ತಿ ವಹಿಸಿದ್ದಾರೆ. 2024ರ ಗೂಗಲ್ ಇಯರ್ ಇನ್ ಸರ್ಚ್​ ವರದಿ ಪ್ರಕಾರ ಭಾರತೀಯ ಬಳಕೆದಾರರಲ್ಲಿ ಗಾಳಿಯ ಗುಣಮಟ್ಟದ ಬಗ್ಗೆ ಜನ ಹೆಚ್ಚು ಸರ್ಚ್​ ಮಾಡಿದ್ದು ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಅವರ ಕಾಳಜಿ ವ್ಯಕ್ತವಾಗಿದೆ. ಜನಪ್ರಿಯವಾದ ಸರ್ಚ್​​ನಲ್ಲಿ ಅತ್ಯುತ್ತಮ ಬೇಕರಿ, ಟ್ರೆಂಡಿ ಕೆಫೆ, ಫೋಲಿಯೋ ಹನಿ, ಶಿವಮಂದಿರ ಸಹ ಒಳಗೊಂಡಿದೆ.

publive-image

1. ಇಂಡಿಯನ್ ಪ್ರೀಮಿಯರ್ ಲೀಗ್
ಭಾರತೀಯರ ಕ್ರಿಕೆಟ್ ಬಗ್ಗೆಗಿನ ಅಭಿರುಚಿ ಮುಂದುವರೆದಿದೆ. ಹುಡುಕಾಟದಲ್ಲಿ ಕ್ರಿಕೆಟ್​ ಅಗ್ರಸ್ಥಾನ ಪಡೆದಿದೆ. ಗೂಗಲ್​​ ಸರ್ಚ್​​ನಲ್ಲಿ ಐಪಿಎಲ್​ ಕುರಿತಾಗಿ ಹೆಚ್ಚು ಜನರು ಶೋಧಿಸಿದ್ದಾರೆ. ತಮ್ಮ ನೆಚ್ಚಿನ ತಂಡಗಳು, ಆಟಗಾರರು, ಹರಾಜುಗಳ ಕುರಿತಾಗಿ ಹುಡುಕಾಡಿದ್ದಾರೆ.

Advertisment

publive-image

2. ಟಿ-20 ವಿಶ್ವಕಪ್
ಗೂಗಲ್ ಸರ್ಚ್​​ನಲ್ಲಿ ಟಿ-20 ವಿಶ್ವಕಪ್ ಎರಡನೇ ಸ್ಥಾನದಲ್ಲಿದೆ. ಟಿ-20 ವಿಶ್ವಕಪ್​​ನ ಪ್ರತಿ ಪಂದ್ಯದ ಕುರಿತಾಗಿ ಭಾರತೀಯರು ಅತಿ ಹೆಚ್ಚು ಸರ್ಚ್​ ಮಾಡಿದ್ದಾರೆ. ಟಿ-20 ವಿಶ್ವಕಪ್ ಕ್ರಿಕೆಟ್​ ಸ್ಕೋರ್​ಗಳು, ಆಟಗಾರರ ಪ್ರದರ್ಶನ, ಆಟದ ಮುನ್ನೋಟ ಅತಿ ಹೆಚ್ಚು ಸರ್ಚ್​ ಕಂಡಿದೆ.

publive-image

3. ಭಾರತೀಯ ಜನತಾ ಪಕ್ಷ
ರಾಜಕೀಯದ ಬಗ್ಗೆ ಆಸಕ್ತಿ ಯಾರಿಗಿಲ್ಲ ಹೇಳಿ? ಸದ್ಯ ಅಧಿಕಾರದಲ್ಲಿ ಓಡುತ್ತಿರುವ ಕುದುರೆ ಭಾರತೀಯ ಜನತಾ ಪಕ್ಷ. ಪ್ರಧಾನಮಂತ್ರಿ ಮೋದಿ ನೇತೃತ್ವದ ಬಿಜೆಪಿ ಅತ್ಯಂತ ಪ್ರಾಬಲ್ಯ ಹೊಂದಿದೆ. ರಾಷ್ಟ್ರೀಯ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಬಿಜೆಪಿಯ ನೀತಿಗಳು, ನಾಯಕರು ಮತ್ತು ಚುನಾವಣಾ ತಂತ್ರಗಳ ಬಗ್ಗೆ ಹುಡುಕಾಟ ಅತಿ ಉನ್ನತ ಮಟ್ಟಕ್ಕೆ ತಲುಪಿತ್ತು ಎಂದು ಗೂಗಲ್​ ವರದಿ ಹೇಳಿದೆ.

publive-image

4. 2024ರ ಚುನಾವಣೆ
ಈ ವರ್ಷದ ಹುಡುಕಾಟದಲ್ಲಿ 4ನೇ ಸ್ಥಾನದಲ್ಲಿರುವುದು ಕೂಡ ರಾಜಕೀಯ ವಿಚಾರವೇ. ಇದು 2024ರ ಚುನಾವಣೆಗಳು ಇಡೀ ದೇಶದಲ್ಲಿಯೇ ಕ್ಷಣಕ್ಷಣಕ್ಕೂ ಕುತೂಹಲ ಉಂಟು ಮಾಡಿದ್ದವು. ಫಲಿತಾಂಶದ ದಿನವಂತೂ ಗೂಗಲ್​ನಲ್ಲಿ ಸರ್ಚಿಂಗ್ ಹೆಚ್ಚಾಗಿತ್ತು ಅಂತ ಗೂಗಲ್ ಹೇಳಿದೆ. ಮತ ಎಣಿಕೆ, ರಾಜಕೀಯ ಪಕ್ಷಗಳ ಸ್ಥಾನಗಳು, ಭವಿಷ್ಯ, ರಾಜಕೀಯ ಪಕ್ಷಗಳ ಪರ್​​ಫಾರ್ಮನೆನ್ಸ್​ ಹುಡುಕಾಟದಲ್ಲಿ ಪ್ರಾಬಲ್ಯ ಹೊಂದಿವೆ. ಚುನಾವಣೆ ಫಲಿತಾಂಶಗಳು ವ್ಯಾಪಕವಾದ ಆಸಕ್ತಿ ಹುಟ್ಟುಹಾಕಿದ್ದು ಇದು ವರ್ಷದ ಟ್ರೆಂಡಿಂಗ್​​ನಲ್ಲಿ ಒಂದಾಗಿದೆ ಅಂತ ಗೂಗಲ್ ಹೇಳಿದೆ.

Advertisment

publive-image

5. ಪ್ಯಾರಿಸ್ ಒಲಿಂಪಿಕ್ಸ್‌
2024ರಲ್ಲಿ ಭಾರತೀಯರು ಕ್ರೀಡೆಗಳತ್ತಲೂ ಅತಿ ಹೆಚ್ಚು ಆಸಕ್ತಿ ತೋರಿಸಿದ್ದಾರೆ. 2024ರ ಪ್ಯಾರಿಸ್​ ಒಲಿಂಪಿಕ್ಸ್​​ ಬಗ್ಗೆ ಭಾರತೀಯರು ಅತಿ ಹೆಚ್ಚು ನಿರೀಕ್ಷೆ ಹೊಂದಿದ್ದರು. ವಿನೇಶ್ ಫೋಗಟ್​, ನೀರಜ್ ಚೋಪ್ರಾ, ಲೈವ್ ಅಪ್​​ಡೇಟ್​, ಇತರ ಕ್ರೀಡಾಪಟುಗಳ ಆಟದ ಬಗ್ಗೆ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ್ದಾರೆ.

publive-image

6. ಅತಿಯಾದ ತಾಪಮಾನ
2024ರಲ್ಲಿ ಅತಿ ಹೆಚ್ಚು ಶಾಖ ಭಾರತೀಯರನ್ನು ಕಾಡಿತ್ತು. ಹೆಚ್ಚಿನ ತಾಪಮಾನ ಹೇಗೆ ನಿಭಾಯಿಸುವುದು, ಆ ಕುರಿತಾಗಿ ಸಲಹೆಗಳ ಬಗ್ಗೆ ಅನೇಕ ಜನ ಸರ್ಚ್​ ಮಾಡಿದ್ದಾರೆ. ನಿರಂತರವಾದ ಬೇಸಿಗೆಯಂತಹ ಬಿಸಿಲಿನಿಂದ ರಕ್ಷಣೆ, ತಂಪಾಗಿರುವುದು ಹೇಗೆ ಮತ್ತು ಬಿರು ಬಿಸಿಲಿನ ಅವಧಿಯಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬ ಬಗ್ಗೆ ಜನರಲ್ಲಿ ಅತಿ ಹೆಚ್ಚು ಆಸಕ್ತಿ ವಹಿಸಿದ್ರು. ಅತಿಯಾದ ಬಿಸಿಗಾಳಿ, ಹವಾಮಾನ ಬದಲಾವಣೆ ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮಗಳ ಬಗ್ಗೆ ಭಾರತೀಯರಲ್ಲಿ ಚಿಂತೆ ಹೆಚ್ಚುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತದೆ.

publive-image

7. ರತನ್ ಟಾಟಾ
ಟಾಟಾ ಗ್ರೂಪ್​ನ ಅಧ್ಯಕ್ಷ , ಉದ್ಯಮಿ ರತನ್ ಟಾಟಾ ನಿಧನ ಸುದ್ದಿ ತಿಳಿಯುತ್ತಲೇ ಭಾರತೀಯರು ಗೂಗಲ್​​ನಲ್ಲಿ ಹುಡುಕಿದ್ದು ಟ್ರೆಂಡಿಂಗ್. ಅನಾರೋಗ್ಯದಿಂದ ಟಾಟಾ ಅಕ್ಟೋಬರ್ 9ರಂದು ನಿಧನರಾಗಿದ್ದರು. ಟಾಟಾ ಅವರ ಕುರಿತಾಗಿ ಹುಡುಕಾಟ ಒಂದೇ ದಿನದಲ್ಲಿ ಶೇ.1000ರಷ್ಟು ಏರಿಕೆಯಾಗಿತ್ತು. ಅವರ ಇತ್ತೀಚಿನ ಸಂದರ್ಶನ, ಅವರ ವ್ಯವಹಾರಗಳ ಬಗ್ಗೆ ಭಾರತೀಯರ ಆಸಕ್ತಿಯಿಂದ ಶೋಧಿಸಿದ್ರು.

Advertisment

publive-image

8. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ರಾಜಕೀಯದ ಬಗ್ಗೆ ಭಾರತೀಯರಲ್ಲಿ ಆಸಕ್ತಿ, ಗೂಗಲ್​ ಸರ್ಚ್​​ನಲ್ಲಿ ಮತ್ತೆ ಸಾಬೀತಾಯ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗೂಗಲ್​ ಸರ್ಚ್​​ನಲ್ಲಿ ಗಮನ ಸೆಳೆದಿದ್ದು 8ನೇ ಸ್ಥಾನದಲ್ಲಿದೆ. ಇದು ಭಾರತದಲ್ಲಿ ಬದಲಾಗುತ್ತಿರುವ ರಾಜಕೀಯ ಆಸಕ್ತಿ ಪ್ರತಿಬಿಂಬಿಸುತ್ತದೆ. 2024ರ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದ ಬಗ್ಗೆ ಡಿಜಿಟಲ್ ವೇದಿಕೆಗಳಲ್ಲಿ ಹೆಚ್ಚು ಆಸಕ್ತಿ, ಚರ್ಚೆಯನ್ನು ಹುಟ್ಟುಹಾಕಿದವು.

publive-image

9. ಪ್ರೊ. ಕಬಡ್ಡಿ
ಭಾರತೀಯರಲ್ಲಿ ಕ್ರೀಡೆ ಅಂದರೆ ಕ್ರಿಕೆಟ್ ಎನ್ನುವಷ್ಟರ ಮಟ್ಟಿಗೆ ಜನಪ್ರಿಯವಾದರೂ ಇತ್ತೀಚೆಗೆ ಕ್ರಿಕೆಟ್ ಜೊತೆ ಜೊತೆಗ ಇತರ ಕ್ರೀಡೆಗಳತ್ತಲೂ ಒಲವು ತೋರುತ್ತಿದ್ದಾರೆ ಎಂಬುದು ಗೂಗಲ್ ಸರ್ಚ್​ ವರದಿ ಹೇಳಿದೆ. 2024ರಲ್ಲಿ ಕ್ರೀಡಾಪ್ರೇಮಿಗಳು ಪ್ರೊ.ಕಬಡ್ಡಿ ಲೀಗ್​ (PKL) ಕ್ಲಬ್​ಗಳು, ಆಟಗಾರರು, ವೇಳಾಪಟ್ಟಿ ಬಗ್ಗೆಯೂ ಆಸಕ್ತಿ ವಹಿಸಿರುವುದ ಕಂಡು ಬಂದಿದೆ. ಇದು ಭಾರತದಲ್ಲಿ ಗ್ರಾಮೀಣ ಕ್ರೀಡೆಯಾದ ಪ್ರೊ.ಕಬಡ್ಡಿ ಲೀಗ್​ ಬೆಳೆಯುತ್ತಿರುವುದು, ಅಭಿಮಾನಿಗಳು ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದ ಗೂಗಲ್ ಸರ್ಚ್​​ನಲ್ಲಿ ಪತ್ತೆಯಾಗಿದೆ.

10. ಇಂಡಿಯನ್ ಸೂಪರ್ ಲೀಗ್
ಕ್ರಿಕೆಟ್​, ಕಬಡ್ಡಿ ಬಳಿಕ ಗೂಗಲ್​​ ಸರ್ಚ್​​ನಲ್ಲಿ ಜನಪ್ರಿಯ ಎನಿಸಿದ್ದು ಇಂಡಿಯನ್ ಸೂಪರ್ ಲೀಗ್. ಭಾರತದಲ್ಲಿ ಫುಟ್​ಬಾಲ್​ ಬಗ್ಗೆ ಆಸಕ್ತಿ ಹೆಚ್ಚುತ್ತಿರುವುದು ಇದರಿಂದ ಪತ್ತೆಯಾಗಿದೆ. ಬಳಕೆದಾರರು ಇಂಡಿಯನ್ ಸೂಪರ್ ಲೀಗ್​(ಐಎಸ್​ಎಲ್)ನ ಆಟಗಾರರ ಬಗ್ಗೆ, ಕ್ಲಬ್​ಗಳ ಬಗ್ಗೆ, ಪಂದ್ಯಗಳ ಬಗ್ಗೆ ತಿಳಿಯಲು ಉತ್ಸುಕರಾಗಿದ್ದು ಕಂಡು ಬಂದಿದೆ. ಇದು ಕ್ರೀಡೆಯಲ್ಲಿ ಭಾರತೀಯರ ಆಸಕ್ತಿ ಹೆಚ್ಚುತ್ತಿರುವುದಕ್ಕೆ ಸಾಕ್ಷಿ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment