/newsfirstlive-kannada/media/post_attachments/wp-content/uploads/2025/04/PEARL-PRODUCTION-4.jpg)
ಮುತ್ತುಗಳನ್ನು ನವರತ್ನಗಳ ಮಹಾರಾಣಿ ಎಂದೇ ಕರೆಯುತ್ತಾರೆ. ಸ್ವಾತಿ ಮಳೆಹನಿಯೊಂದು ಚಿಪ್ಪಿನೊಳಗೆ ಸೇರಿ ಮುತ್ತಾಗಿ ಆಚೆ ಬರುತ್ತವೆ ಎಂಬ ನಂಬಿಕೆ ಬಹಳ ಶತಮಾನಗಳಿಂದಲೂ ಇದೆ. ಇಂತಹ ಮುತ್ತುಗಳಿಗೆ ಆಭರಣಗಳ ತಯಾರಿಕೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಮುತ್ತುಗಳ ಆಭರಣಗಳನ್ನು ತಯಾರಿಸುವ ಉದ್ಯಮಗಳು ದೇಶಾದ್ಯಂತ ಹರಡಿರುವುದು ನಿಮಗೆ ಗೊತ್ತೆ. ಇದೆ. ಅದರಲ್ಲೂ ವಿಶ್ವದಲ್ಲಿ ಅತಿಹೆಚ್ಚು ಮುತ್ತುಗಳನ್ನು ಉತ್ಪಾದಿಸುವ ಟಾಪ್ 10 ದೇಶಗಳಿವೆ. ಅದರಲ್ಲಿ ನಮ್ಮ ಭಾರತವೂ ಕೂಡ ಒಂದು.
ಹಾಗಿದ್ರೆ ಮುತ್ತುಗಳನ್ನು ಅತಿಹೆಚ್ಚು ಉತ್ಪಾದಿಸುವ ರಾಷ್ಟ್ರ ಯಾವುದು, ಭಾರತ ಯಾವ ಸ್ಥಾನದಲ್ಲಿದೆ ಎಂದು ನೋಡುವುದಾದ್ರೆ ಹಲವು ಉಪಯುಕ್ತ ಮಾಹಿತಿಗಳು ನಮಗೆ ದೊರಕುತ್ತವೆ.
ಚೀನಾ: ಜಗತ್ತಿನಲ್ಲಿ ಅತಿಹೆಚ್ಚು ಮುತ್ತುಗಳ ಉತ್ಪಾದನೆಯನ್ನು ಚೀನಾ ತನ್ನ ಕಬಂಧ ಬಾಹುಗಳಲ್ಲಿ ಬಾಚಿಕೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮುತ್ತುಗಳ ಬೇಡಿಕೆಯನ್ನು ಚೀನಾ ಶೇಕಡಾ 70 ರಷ್ಟು ಆವರಿಸಿಕೊಂಡಿದೆ. ಅದರಲ್ಲೂ ವಿಶ್ವದ ಶೇಕಡಾ 95 ರಷ್ಟು ಫ್ರೆಶ್ ವಾಟರ್ ಪರ್ಲ್ಸ್ ಉತ್ಪಾದಿಸುವ ದೇಶ ಚೀನಾ.
ಜಪಾನ್: ಮುತ್ತುಗಳ ಅತಿಹೆಚ್ಚು ಉತ್ಪಾದನೆಯಲ್ಲಿ ಜಪಾನ್ ಕೂಡ ಒಂದು. ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ನ ಮುತ್ತುಗಳ ಕೊಡುಗೆ ಶೇಕಡಾ 10ರಷ್ಟಿದೆ. ಅದರಲ್ಲೂ ಜಪಾನ್ನಲ್ಲಿ ವಿವಿಧ ರೀತಿಯ ಬಣ್ಣದ ಮುತ್ತುಗಳು ಉತ್ಪಾದನೆಯಾಗೋದು ಇನ್ನೂ ವಿಶೇಷ. ಬಿಳಿ ಮುತ್ತುಗಳ ಜೊತೆ ಪಿಂಕ್ ಮತ್ತು ರೋಸ್ ಬಣ್ಣದ ಮುತ್ತುಗಳನ್ನು ಕೂಡ ಜಪಾನ್ ಉತ್ಪಾದನೆ ಮಾಡುತ್ತದೆ.
ಭಾರತ: ಜಾಗತಿಕವಾಗಿ ಅತಿಹೆಚ್ಚು ಮುತ್ತುಗಳ ಉತ್ಪಾದನೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಉಪ್ಪುನೀರಿನಲ್ಲಿ ಮತ್ತು ತಾಜಾ ನೀರಿನಲ್ಲಿಯೂ ಕೂಡ ಭಾರತ ಅತಿಹೆಚ್ಚು ಮುತ್ತುಗಳ ಉತ್ಪಾದನೆ ಮಾಡುತ್ತದೆ. ಹೈದ್ರಾಬಾದ್ ಸಿಟಿಯನ್ನು ಇದೇ ಕಾರಣಕ್ಕಾಗಿಯೇ ಮುತ್ತಿನ ನಗರಿ ಎಂದು ಕರೆಯಲಾಗುತ್ತದೆ.
ಆಸ್ಟ್ರೇಲಿಯಾ: ದಕ್ಷಿಣ ಸಮುದ್ರದಲ್ಲಿ ಮುತ್ತುಗಳ ಉತ್ಪಾದನೆಯಲ್ಲಿ ಆಸ್ಟ್ರೇಲಿಯಾನೇ ಕಿಂಗ್. ಇಲ್ಲಿ ಅತ್ಯುತ್ತಮ ಗುಣಮಟ್ಟದ ಮುತ್ತುಗಳು ಉತ್ಪಾದನೆಯಾಗುತ್ತವೆ. ಮುತ್ತುಗಳ ಉತ್ಪಾದನೆಯ ಪ್ರಮಾಣ ಕಡಿಮೆಯಾದರು ಗುಣಮಟ್ಟದಲ್ಲಿ ಆಸ್ಟ್ರೇಲಿಯಾದ ಮುತ್ತುಗಳಿಗೆ ಬೇರೆಯದ್ದೇ ಬೇಡಿಕೆ ಇದೆ.
ಇಂಡೋನೇಷ್ಯಾ: ದಕ್ಷಿಣ ಸಮುದ್ರದಲ್ಲಿ ಮುತ್ತೊತ್ಪಾದನೆ ಮಾಡುವ ಮತ್ತೊಂದು ಪ್ರಮುಖ ದೇಶವೆಂದರೆ ಅದು ಇಂಡೋನೇಷ್ಯಾ. ಇದು ಅತ್ಯುನ್ನತ ಗುಣಮಟ್ಟವುಳ್ಳ ಮುತ್ತುಗಳ ಉತ್ಪಾದನೆ ಮಾಡುತ್ತವೆ.
ಇದನ್ನೂ ಓದಿ: ಇದು ಭಾರತದ ಅತ್ಯಂತ ಸುಂದರವಾದ ಶಾಲೆ.. ಧೀರುಭಾಯಿ ಅಂಬಾನಿ ಸ್ಕೂಲ್ ಅಂತೂ ಅಲ್ಲ..! ಮತ್ಯಾವುದು
ಪ್ರಮುಖವಾಗಿ ಈ ಐದು ದೇಶಗಳು ಮುತ್ತುಗಳ ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮದೇ ಛಾಪು ಮೂಡಿಸಿವೆ. ಇವುಗಳ ಜೊತೆ ಫ್ರಾನ್ಸ್, ವಿಯೆಟ್ನಾಮ್ ಮಯನ್ಮಾರ್, ಥೈಲ್ಯಾಂಡ್ ಮತ್ತು ಮೆಕ್ಸಿಕೋಗಳು ಕೂಡ ಮುತ್ತುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಈ ದೇಶಗಳ ಮುತ್ತುಗಳು ಆವರಿಸಿಕೊಂಡ ಮಟ್ಟಿಗೆ ಉಳಿದ ಐದು ದೇಶಗಳ ಮುತ್ತುಗಳು ಆವರಿಸಿಕೊಂಡಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಉಳಿದ ಈ ಐದು ದೇಶಗಳ ಕೊಡುಗೆ ತೀರ ಕಡಿಮೆಯೇ ಇದೆ. ಆದರೆ ಭಾರತ, ಜಪಾನ್, ಚೀನಾ, ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾ ಜಾಗತಿಕ ಮಾರುಕಟ್ಟೆಯಲ್ಲಿ ಮುತ್ತುಗಳ ರಫ್ತಿನಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿವೆ.
ಇದನ್ನೂ ಓದಿ:ಮುಂಬೈ 26/11 ದಾಳಿಯ ಮಾಸ್ಟರ್ ಮೈಂಡ್ ಗಡಿಪಾರು.. ಇಂದು ಮಧ್ಯಾಹ್ನ ಭಾರತಕ್ಕೆ ರಾಣಾ!
ರಫ್ತಿನ ವಿಚಾರ ಬಂದಾಗ ಜಪಾನ್ ಸುಮಾರು 39,024 ಮಿಲಿಯನ್ನಷ್ಟು ಮುತ್ತುಗಳನ್ನು ರಫ್ತು ಮಾಡುತ್ತದೆ. ಚೀನಾ 30.352 ರಷ್ಟು, ಭಾರತ 8672 ಮಿಲಿಯನ್ನಷ್ಟು ಮುತ್ತುಗಳ ರಫ್ತು ಮಾಡುತ್ತದೆ. ಆಸ್ಟ್ರೇಲಿಯಾ 7344 ಮತ್ತು ಇಂಡೋನೇಷ್ಯಾ 9625 ಮಿಲಿಯನ್ನಷ್ಟು ಮುತ್ತುಗಳನ್ನು ರಫ್ತು ಮಾಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ