/newsfirstlive-kannada/media/post_attachments/wp-content/uploads/2025/03/Rajat-Vinay-release-from-jail.jpg)
ಬೆಂಗಳೂರು: ಮಚ್ಚಾ.. ಮಚ್ಚು ಹಿಡಿಯೋ ಅಂತ ರೀಲ್ಸ್ ಮಾಡಿದ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರು ಜೈಲಿನಿಂದ ಬಿಡುಗಡೆ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail.jpg)
ಇಂದು ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ರಜತ್ ಹಾಗೂ ವಿನಯ್ ಇಬ್ಬರು ಒಟ್ಟಿಗೆ ರಿಲೀಸ್ ಆದರು.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-1.jpg)
ಅಂದು ಮಚ್ಚು ಹಿಡಿದು ಜೈಲಿಗೆ ಹೋದವರು ಇಂದು ಕೈಯಲ್ಲಿ ಬ್ಯಾಗ್ ಹಿಡಿದು ಒಟ್ಟಿಗೆ ಹೆಜ್ಜೆ ಹಾಕಿದರು.
ಇದನ್ನೂ ಓದಿ: ಬ್ಯಾಗ್ ಹಿಡಿದು, ಆ್ಯಪಲ್ ತಿನ್ನುತ್ತ ಜೈಲಿನಿಂದ ಹೊರಬಂದ ವಿನಯ್, ರಜತ್ ಕಿಶನ್..!
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-2.jpg)
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಿಗ್​ಬಾಸ್ ಮಾಜಿ ಸ್ಪರ್ಧಿಗಳ ಮೇಲೆ ಬಸವೇಶ್ವರ ನಗರ ಠಾಣೆ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ FIR ಹಾಕಿದ್ದರು.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-3.jpg)
ಬಳಿಕ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದರೆ ಆರೋಪಿಗಳು ಫೈಬರ್​ ಮಚ್ಚು ನೀಡಿ ಪ್ರಕರಣದ ದಿಕ್ಕು ತಪ್ಪಿಸಿದ್ದರು.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-4.jpg)
ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಫೈಬರ್ ಮಚ್ಚು ಕೊಟ್ಟು ತನಿಖೆಯ ದಾರಿ ತಪ್ಪಿಸೋ ಯತ್ನ ಮಾಡಲಾಗಿತ್ತು.
/newsfirstlive-kannada/media/post_attachments/wp-content/uploads/2025/03/Vinay-gowda-rajath-kishan.jpg)
ಸಾಕ್ಷ್ಯ ನಾಶ ಯತ್ನದ ಆರೋಪದಲ್ಲಿ ಬಸವೇಶ್ವರ ನಗರ ಪೊಲೀಸರು ಮತ್ತೆ ರಜತ್, ವಿನಯ್ ಇಬ್ಬರನ್ನು ಅರೆಸ್ಟ್ ಮಾಡಿದ್ದರು.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-5.jpg)
ನಿನ್ನೆ ಈ ರೀಲ್ಸ್ ಪ್ರಕರಣದಲ್ಲಿ ಇಬ್ಬರಿಗೂ 24ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-6.jpg)
ಜಾಮೀನು ಆದೇಶ ಪ್ರತಿ ಸರಿಯಾದ ಸಮಯಕ್ಕೆ ತಲುಪದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ರಜತ್, ವಿನಯ್ ಬಿಡುಗಡೆ ಸಾಧ್ಯವಾಗಿರಲಿಲ್ಲ.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-7.jpg)
ಆರೋಪಿಗಳ ಜಾಮೀನು ಪ್ರಕ್ರಿಯೆಗಳು ಮುಗಿದಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-8.jpg)
ಜೈಲಿನಿಂದ ರಿಲೀಸ್ ಆದ ರಜತ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ ವಿನಯ್ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail-9.jpg)
ಸರ್.. ಮಾತಾಡೋಣ ಎಲ್ಲರೂ ಸೇರ್ಕೊಂಡು ಮಾತಾಡೋಣ. ಎಲ್ರೂ ತುಂಬಾ ಸಪೋರ್ಟ್ ಮಾಡಿದ್ದೀರ. ಎಲ್ರೂ ಸೇರಿ ಮಾತಾಡೋಣ ಎಂದು ಹೇಳಿ ವಿನಯ್ ಪರಪ್ಪನ ಅಗ್ರಹಾರದಿಂದ ಹೊರಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us