IPL2025; ಮೆಗಾ ಆಕ್ಷನ್​ಗೆ ಭಾರತದ ಮೂವರು ವಿಕೆಟ್​ ಕೀಪರ್​ಗಳು ಎಂಟ್ರಿ.. ಕ್ಯಾಪ್ಟನ್​ ಆಗಿದ್ರೂ ಕೈ ಬಿಟ್ಟ ಫ್ರಾಂಚೈಸಿ​

author-image
Bheemappa
Updated On
IPL2025; ಮೆಗಾ ಆಕ್ಷನ್​ಗೆ ಭಾರತದ ಮೂವರು ವಿಕೆಟ್​ ಕೀಪರ್​ಗಳು ಎಂಟ್ರಿ.. ಕ್ಯಾಪ್ಟನ್​ ಆಗಿದ್ರೂ ಕೈ ಬಿಟ್ಟ ಫ್ರಾಂಚೈಸಿ​
Advertisment
  • ಮುಂಬೈ ಇಂಡಿಯನ್ಸ್ ರಿಟೈನ್ ಮಾಡಿಕೊಂಡ ಪ್ಲೇಯರ್ಸ್ ಯಾರು?
  • ವಿಕೆಟ್ ಕೀಪರ್, ನಾಯಕ ಆದರೂ ರಿಟೈನ್ ಮಾಡಿಕೊಳ್ಳದ ಫ್ರಾಂಚೈಸಿ
  • ಆಕ್ಷನ್​ನಲ್ಲಿ ಮೂವರು ಪ್ಲೇಯರ್ಸ್ ಯಾವ ಟೀಮ್ ಪಾಲಾಗುತ್ತಾರೆ?

2025ರ ಐಪಿಎಲ್​ ಟೂರ್ನಿಗಾಗಿ ಎಲ್ಲಾ 10 ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಮೆಗಾ ಆಕ್ಷನ್​ಗೆ ರೆಡಿಯಾಗಲಿದೆ. 2025ರ ಮೆಗಾ ಆಕ್ಷನ್​ನಲ್ಲಿ ಭಾರತದ ಮೂವರು ಸ್ಟಾರ್ ವಿಕೆಟ್​ ಕೀಪರ್​​ಗಳು​ ಇರುವುದು ಕನ್​ಫರ್ಮ್ ಆಗಿದೆ. ಆದರೆ ಆಕ್ಷನ್​ನಲ್ಲಿ ಯಾವ ಟೀಮ್ ಪಾಲಾಗುತ್ತಾರೆ ಎಂಬುದು ಕುತೂಹಲ ಮೂಡಿದೆ.

ಕನ್ನಡಿಗ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಆಗಿದ್ದ ಕೆ.ಎಲ್ ರಾಹುಲ್ ಅವರನ್ನು ಫ್ರಾಂಚೈಸಿ ಕೈ ಬಿಟ್ಟಿದೆ. ಹೀಗಾಗಿ ರಾಹುಲ್ 2025ರ ಮೆಗಾ ಆಕ್ಷನ್​ಗೆ ಹೋಗಲಿದ್ದಾರೆ. ವಿಕೆಟ್​ ಕೀಪರ್, ಬ್ಯಾಟ್ಸ್​​ಮನ್ ಆಗಿರುವ ರಾಹುಲ್​ 2024ರ ಟೂರ್ನಿಯ ಪಂದ್ಯವೊಂದು ನಡೆಯುವ ವೇಳೆ ಲಕ್ನೋ ಓನರ್ ಜೊತೆ ಕಹಿ ಘಟನೆ ನಡೆಯಿತು. ಅಂದಿನಿಂದ ಫ್ರಾಂಚೈಸಿ- ರಾಹುಲ್ ಮಧ್ಯೆ ಸಂಬಂಧ ಅಷ್ಟೇನೂ ಚೆನ್ನಾಗಿ ಇರಲಿಲ್ಲ. ರಾಹುಲ್ ಹೊರ ಬರುತ್ತಾರೆ ಎಂದು ವರದಿಗಳು ಬರುತ್ತಲೇ ಇದ್ದವು. ಅದರಂತೆ ರಾಹುಲ್ ಲಕ್ನೋ ತಂಡವನ್ನ ಬಿಟ್ಟು ಹೊರ ಬಂದಿದ್ದು 2025ರ ಮೆಗಾ ಆಕ್ಷನ್​ಗೆ ಹೋಗಲಿದ್ದಾರೆ.

publive-image

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್ ಹಾಗೂ ವಿಕೆಟ್​ ಕೀಪರ್ ಆಗಿದ್ದ​ ರಿಷಬ್ ಪಂತ್ ಕೂಡ ಮೆಗಾ ಆಕ್ಷನ್​ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲಿನ ಊಹಾಪೋಹಗಳಂತೆ ಡೆಲ್ಲಿ ರಿಟೈನ್​ ಲಿಸ್ಟ್​ನಲ್ಲಿ ಪಂತ್ ಹೆಸರು ಇಲ್ಲ, ಗಂಭೀರವಾದ ಅಪಘಾತವಾದ ಬಳಿಕ ಚೇರಿಸಿಕೊಂಡು ಬಂದಿದ್ದ ಪಂತ್​ರನ್ನ ಡೆಲ್ಲಿ ಮತ್ತೆ ತಂಡದಲ್ಲಿ ಆಡಿಸಿತ್ತು. ಆದರೆ ಈಗ ತಂಡದಿಂದ ಅವರನ್ನು ಕೈ ಬಿಡಲಾಗಿದ್ದು ಮೆಗಾ ಆಕ್ಷನ್​ನಲ್ಲಿ ಯಾವ ತಂಡದ ಪಾಲಾಗುತ್ತಾರೆ ಎಂಬುದು ಫ್ಯಾನ್ಸ್​ಗೆ ಕುತೂಹಲ ಮೂಡಿಸಿದೆ.

ಇನ್ನು ಮುಂಬೈ ಇಂಡಿಯನ್ಸ್​ ತಂಡದ ವಿಕೆಟ್​ ಕೀಪರ್ ಆಗಿದ್ದ ಇಶನ್ ಕಿಶನ್ ಅವರೂ ಆಕ್ಷನ್​ಗೆ ಆಗಮಿಸಿದ್ದಾರೆ. ಕಿಶನ್ ಆಕ್ಷನ್​ನಲ್ಲಿ ಬೇರೆ ತಂಡದ ಪಾಲಾಗಲಿದ್ದಾರೆ. ಮುಂಬೈ ಫ್ರಾಂಚೈಸಿ ಬೂಮ್ರಾ, ರೋಹಿತ್, ಸೂರ್ಯ, ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾರನ್ನ ತಂಡದಲ್ಲಿ ಉಳಿಸಿಕೊಂಡಿದೆ. ಕಿಶನ್ ಸೇರಿದಂತೆ ಇನ್ನು ಕೆಲ ಆಟಗಾರರನ್ನ ರಿಲೀಸ್ ಮಾಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment