/newsfirstlive-kannada/media/post_attachments/wp-content/uploads/2024/02/kerebete.jpg)
ಸೆಲೆಬ್ರಿಟಿ ಕ್ರಿಕೆಟ್ ಲೀಗ್.. ಸಂಭ್ರಮ ಶುರು..
ಕನ್ನಡ ಚಲನಚಿತ್ರ ಕಪ್ ಯಶಸ್ವಿ ಆದ ಬೆನ್ನಲ್ಲೇ ಸಿನಿಮಾ ತಾರೆಯರ ಮತ್ತೊಂದು ಕ್ರಿಕೆಟ್ ಹಬ್ಬ ಶುರುವಾಗಿದೆ. ಮಾಲಿವುಟ್ ಟು ಬಾಲಿವುಡ್ ತನಕ ಎಲ್ಲಾ ಇಂಡಸ್ಟ್ರಿಗಳು ಭಾಗವಹಿಸುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 10 ಆವೃತ್ತಿಗೆ ಆರಂಭವಾಗ್ತಿದೆ. ಇತ್ತೀಚೆಗಷ್ಟೇ ಬುರ್ಜ್ ಖಲೀಫಾದಲ್ಲಿ ಈ ವರ್ಷದ ಕ್ರಿಕೆಟ್ ಲೀಗ್ ಉದ್ಘಾಟನೆ ನಡೀತು. ಇದೀಗ ಬೆಂಗಳೂರಿನಲ್ಲೂ ಕರ್ನಾಟಕ ಬುಲ್ಡೋಜರ್ಸ್ ತಂಡ ಸುದ್ದಿಗೋಷ್ಠಿ ನಡೆಸಿದ್ದು ಇಂದಿನಿಂದ ಭರದಿಂದ ಪ್ರಾಕ್ಟೀಸ್ ನಡೆಸಲು ತಯಾರಾಗಿದ್ದಾರೆ.
ಶಿವಣ್ಣನ ಸಿನಿ ಜರ್ನಿಗೆ 38 ವರ್ಷ
ಕರುನಾಡ ಚಕ್ರವರ್ತಿ ಶಿವಣ್ಣ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿ 38 ವಸಂತಗೂ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಾಮನ್ ಡಿಪಿ ಬಿಡುಗಡೆ ಮಾಡಿ, ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ. 1986ರಲ್ಲಿ ಆನಂದ್ ಸಿನಿಮಾ ಮೂಲಕ ಆರಂಭವಾದ ಶಿವಣ್ಣನ ಸಿನಿಮಾ ಜರ್ನಿ ಇಲ್ಲಿವರೆಗೂ ಅದೇ ವೇಗದಲ್ಲಿ ಮುಂದುವರಿಯುತ್ತಿದೆ. 38 ವರ್ಷದ ಈ ಸಿನಿಪಯಣದಲ್ಲಿ 135ಕ್ಕೂ ಅಧಿಕ ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದಾರೆ.
‘ಕೆರೆಬೇಟೆ’ಗೆ ಕಿಚ್ಚನ ಸಾಥ್..
ಗೌರಿ ಶಂಕರ್ ನಿರ್ಮಾಣ ಮಾಡಿ, ನಟಿಸಿರುವ ಕೆರೆಬೇಟೆ ಸಿನಿಮಾದ ಟೀಸರ್ ಸಿನಿಪ್ರೇಮಿಗಳ ಗಮನ ಸೆಳೆದಿತ್ತು.. ಇದೀಗ ಟ್ರೈಲರ್ ಲಾಂಚ್ಗೆ ಭರ್ಜರಿ ಸಿದ್ಧತೆ ನಡೆಸಿದ್ದು, ಕಿಚ್ಚನ ಸುದೀಪ್ ಕೆರೆಬೇಟೆಗೆ ಸಾಥ್ ಕೊಟ್ಟಿದ್ದಾರೆ. ಇದೇ 20ರಂದು ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಈವೆಂಟ್ ನಡೀತಿದ್ದು, ಕಿಚ್ಚ ಟ್ರೈಲರ್ ಲಾಂಚ್ ಮಾಡ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ಸಿನಿಮಾವನ್ನ ದಿನಕರ್ ತೂಗುದೀಪ ಪ್ರೆಸೆಂಟ್ ಮಾಡ್ತಿದ್ದಾರೆ.
ಅಲ್ಲು ಅರ್ಜುನ್ಗೆ ಮೃಣಾಲ್ ನಾಯಕಿ..!
ಅನಿಮಲ್ ಸಿನಿಮಾದ ಭರ್ಜರಿ ಸಕ್ಸಸ್ ಬಳಿಕ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಟ ಅಲ್ಲು ಅರ್ಜುನ್ಗೆ ನಿರ್ದೇಶನದ ಸಿದ್ಧತೆ ನಡೆಸಿದ್ದಾರೆ. ಇದೀಗ ಬಂದಿರೋ ಲೇಟೆಸ್ಟ್ ವಿಚಾರ ಏನೆಂದ್ರೆ ಈ ಸಿನಿಮಾಗೆ ಮೃಣಾಲ್ ಠಾಕೂರ್ ನಾಯಕಿಯಾಗಿ ಆಯ್ಕೆ ಆಗುವ ಸಾಧ್ಯತೆ ಇದೆ. ಮೃಣಾಲ್ ಠಾಕೂರ್ ಲಕ್ಕಿ ಚಾರ್ಮ್ ಆಗಿದ್ದು, ಅವರ ನಟನೆಯ ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್ ಆಗ್ತಿವೆ. ಸೀತಾರಾಮಂ, ಜೆರ್ಸಿ, ಹಾಯ್ ನಾನಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಇದೀಗ ಅಲ್ಲು ಅರ್ಜುನ್ ಜೊತೆಯೂ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ