/newsfirstlive-kannada/media/post_attachments/wp-content/uploads/2024/04/NAMMA_METRO-1.jpg)
ಮೆಟ್ರೋ ಸಂಪರ್ಕ ವಿಸ್ತರಣೆ ನಗರವನ್ನು ಆಧುನಿಕರಣಕ್ಕೆ ತೆಗೆದುಕೊಂಡು ಹೋಗುತ್ತಿವೆ. ಅದು ಅಲ್ಲದೇ ಅತಿಹೆಚ್ಚು ಜನದಟ್ಟಣೆ ಹಾಗೂ ಕಾರ್ಬನ್​ಡೈಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರಲ್ಲಿಯೂ ಕೂಡ ಇವು ಪ್ರಮುಖ ಪಾತ್ರವಹಿಸುತ್ತವೆ. ಅದರಲ್ಲು ವಿಶ್ವದಲ್ಲಿ 5 ಟಾಪ್ ದೇಶಗಳು ತಮ್ಮ ದೊಡ್ಡ ದೊಡ್ಡ ನಗರಗಳಲ್ಲಿ ಮೆಟ್ರೋ ಪ್ರಯಾಣದ ಸಂಪರ್ಕವನ್ನು ಅದ್ಭುತವಾಗಿ ಕಲ್ಪಿಸಿವೆ. ವರ್ಷದಿಂದ ವರ್ಷಕ್ಕೆ ಸಂಪರ್ಕಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಐದು ಪ್ರಮುಖ ದೇಶಗಳು ಯಾವುವು ಮತ್ತು ಭಾರತ ಯಾವ ಸ್ಥಾನದಲ್ಲಿದೆ ಎಂಬುದನ್ನು ನೋಡುವುದಾದ್ರೆ.
ಮೆಟ್ರೋ ವ್ಯವಸ್ಥೆಯನ್ನು ವಿಶ್ವದಲ್ಲಿಯೇ ಅದ್ಭುತವಾಗಿ ಅಳವಡಿಸಿಕೊಂಡಿರುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಚೀನಾ. ಒಟ್ಟು 47 ನಗರಗಳಲ್ಲಿ 11 ಸಾವಿರ ಕಿಲೋ ಮೀಟರ್​​ವರೆಗೂ ತನ್ನ ಮೆಟ್ರೋ ಸೇವೆಯನ್ನು ವಿಸ್ತರಿಸಿದೆ ಚೀನಾ. ಶಾಂಘೈ ನಗರ ಅತಿದೊಡ್ಡ ಮೆಟ್ರೋ ಸಂಪರ್ಕ ಸೇವೆಯನ್ನು ಹೊಂದಿದ್ದು ಒಟ್ಟು 508 ನಿಲ್ದಾಣಗಳ ಸುಮಾರು 896 ಕಿಲೋ ಮೀಟರ್​ನಷ್ಟು ಮೆಟ್ರೋ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಬೀಜಿಂಗ್ ಸಬ್​ವೇಯನ್ನು ನೋಡುವುದಾದ್ರೆ 523 ಮೆಟ್ರೋ ನಿಲ್ದಾಣಗಳನ್ನು ಹೊಂದಿರುವ ಬೀಜಿಂಗ್​ 879 ಕಿಲೋ ಮೀಟರ್​​ನಷ್ಟು ಮೆಟ್ರೋ ರೈಲುಗಳು ಓಡಾಡುತ್ತವೆ. ಶೇಂಜೆನ್​ ನಗರದ ಮೆಟ್ರೋ ವ್ಯವಸ್ಥೆ ನೋಡುವುದಾದ್ರೆ 595 ಕಿಲೋ ಮೀಟರ್​ ವರೆಗೆ ಮೆಟ್ರೋ ಟ್ರೇನ್​ಗಳು ಸೇವೆ ನೀಡುತ್ತಿದ್ದು ಒಟ್ಟು 398 ನಿಲ್ದಾಗಳನ್ನು ಹೊಂದಿದೆ.
/newsfirstlive-kannada/media/post_attachments/wp-content/uploads/2025/02/NAMMA-METRO-3.jpg)
ಚೀನಾ ಹೊರತುಪಡಿಸಿದರೆ ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ. ಅಮೆರಿಕ ಅತ್ಯಂತ ಸಮರ್ಪಕ ಮೆಟ್ರೋ ಸೇವೆಯನ್ನು ತನ್ನ ಪ್ರಜೆಗಳಿಗೆ ನೀಡುತ್ತಿದೆ. ನ್ಯೂಯಾರ್ಕ್, ಚಿಕ್ಯಾಗೊ, ಲಾಸ್ ಎಂಜೆಲ್ಸ್​ನಂತಹ ನಗರಗಳಲ್ಲಿ ಮೆಟ್ರೋ ನೆಟ್​ವರ್ಕ್​ನ್ನು ಅದ್ಭುತವಾಗಿ ಕಲ್ಪಿಸಿಕೊಟ್ಟಿದೆ. ಟ್ರಾಫಿಕ್ ಸುಗಮಗೊಳಿಸಲು ಹಾಗೂ ವಾತಾವರಣದ ನೈರ್ಮಲ್ಯ ಕಾಪಾಡಲು ನಿಟ್ಟಿನಲ್ಲಿ ಅಮೆರಿಕ ಮೆಟ್ರೋವನ್ನು ಹೆಚ್ಚು ಅವಲಂಬಿಸಿದೆ. ನ್ಯೂಯಾರ್ಕ್​ ಸಿಟಿಯಲ್ಲಿ ಒಟ್ಟು 472 ಸ್ಟೇಷನ್​​ಗಳಿದ್ದು 394 ಕಿಲೋ ಮೀಟರ್ ಮೆಟ್ರೋ ನೆಟ್​ವರ್ಕ್ ವ್ಯವಸ್ಥೆಯಿದೆ. ಇನ್ನು ಚಿಕ್ಯಾಗೋನಲ್ಲಿ 145 ನಿಲ್ದಾಣಗಳಿದ್ದು 360 ಕಿಲೋ ಮೀಟರ್ ವ್ಯಾಪ್ತಿಯವರೆಗೂ ಮೆಟ್ರೋ ರೈಲಿನ ವ್ಯವಸ್ಥೆ ಹರಡಿಕೊಂಡಿದೆ. ವಾಷಿಂಗ್ಟನ್​ನಲ್ಲಿ 91 ಮೆಟ್ರೋ ಸ್ಟೇಷನ್​ಗಳಿದ್ದು 188 ಕಿಲೋ ಮೀಟರ್​ ಮೆಟ್ರೋ ನೆಟ್​ವರ್ಕ್ ಸೇವೆ ಇದೆ.
ಇದನ್ನೂ ಓದಿ:ಚೀನಾ-ಭಾರತ ಅಲ್ಲವೇ ಅಲ್ಲ! ಜಗತ್ತಿನಲ್ಲೇ ಅತ್ಯಂತ ಚಿಕ್ಕ ರಾಷ್ಟ್ರಗೀತೆ ಹೊಂದಿರುವ ರಾಷ್ಟ್ರ ಯಾವುದು?
ಮೆಟ್ರೋ ಸಂಪರ್ಕದಲ್ಲಿ ಭಾರತವೇನು ಹಿಂದೆ ಬಿದ್ದಿಲ್ಲ. ಭಾರತ ಕಳೆದ ಹಲವು ದಶಕಗಳಿಂದ ಮೆಟ್ರೋ ವಿಸ್ತರಣೆಯ ಬಗ್ಗೆ ಹೆಚ್ಚು ಗಮನಹರಿಸುತ್ತಿದೆ. ಲಕ್ಷಾಂತರ ಜನರು ದೊಡ್ಡ ದೊಡ್ಡ ನಗರಗಳಲ್ಲಿ ಮೆಟ್ರೊ ಟ್ರೇನ್​ಗಳನ್ನ ಬಳಸುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಅತಿದೊಡ್ಡ ಮೆಟ್ರೋ ನೆಟ್​ವರ್ಕ್​ ಹೊಂದಿದ್ದು ರಾಷ್ಟ್ರ ರಾಜಧಾನಿ ದೆಹಲಿ. ದೆಹಲಿಯಲ್ಲಿ ಒಟ್ಟು 286 ಮೆಟ್ರೋ ನಿಲ್ದಾಣಗಳಿವೆ. 391 ಕಿಲೋ ಮೀಟರ್​ನಷ್ಟು ವ್ಯಾಪ್ತಿಯಲ್ಲಿ ಮೆಟ್ರೋ ರೈಲುಗಳು ಓಡಾಡುತ್ತಿವೆ. ಇನ್ನು ಎರಡನೇ ಸ್ಥಾನದಲ್ಲಿ ನಮ್ಮ ಹೆಮ್ಮೆಯ ಬೆಂಗಳೂರು ಇದೆ 42 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇಲ್ಲಿ ಮೆಟ್ರೋ ರೈಲು ಸಂಚಾರ ಮಾಡುತ್ತಿದ್ದು ಒಟ್ಟು 41 ಮೆಟ್ರೋ ನಿಲ್ದಾಣಗಳಿವೆ. ಇನ್ನು ಕೊಲ್ಕತ್ತಾದಲ್ಲಿ 40 ಕಿಲೋ ಮೀಟರ್ ಉದ್ದದ ಟ್ರ್ಯಾಕ್​​​ನಲ್ಲಿ ಮೆಟ್ರೋ ರೈಲುಗಳು ಓಡಾಡುತ್ತವೆ. ಕೊಲ್ಕತ್ತಾದಲ್ಲಿ ಒಟ್ಟು 34 ಮೆಟ್ರೋ ನಿಲ್ದಾಣಗಳಿವೆ.
ಇದನ್ನೂ ಓದಿ:ವಿಚಿತ್ರ ಸಾಹಸಕ್ಕೆ ಕೈಹಾಕಿದ ಚೀನಾ! ಸಮುದ್ರ ಆಳದಲ್ಲಿ ಸ್ಪೇಸ್ ಸ್ಟೇಷನ್, ಭಯ ಹುಟ್ಟಿಸಿದ ಈ ಕಡಲ ಬೇಟೆ..!
ಇನ್ನು ಜಪಾನ್​ನಲ್ಲಿಯೂ ಕೂಡ ತನ್ನ ಮೆಟ್ರೋ ಸಂಪರ್ಕವನ್ನು ಬಹುದೊಡ್ಡದಾಗಿ ವಿಸ್ತರಿಸಿದೆ. ಟೋಕಿಯೋದಲ್ಲಿ 304 ಕಿಲೋ ಮೀಟರ್ ಉದ್ದದ ಮೆಟ್ರೋ ಸೇವೆಯಿದ್ದು ಒಟ್ಟು 180 ಸ್ಟೇಷನ್​ಗಳಿವೆ. ಒಸಾಕಾದಲ್ಲಿ 140ಕಿಮೀ ಅಂತರದಲ್ಲಿ ಓಡಾಡುವ ಮೆಟ್ರೋ ರೈಲುಗಳು 130 ಸ್ಟೇಷನ್​ಗಳಿಗೆ ಸೇವೆ ನೀಡುತ್ತವೆ. ನಾಗೊಯಾ ಸಿಟಿಯಲ್ಲಿಯೂ 140 ಕಿಲೋ ಮೀಟರ್ ಮೆಟ್ರೋ ಟ್ರ್ಯಾಕ್ ಇದ್ದು 98 ನಿಲ್ದಾಣಗಳಿವೆ
ಇನ್ನು ಸೌತ್ ಕೋರಿಯಾದಲ್ಲಿಯೂ ಮೆಟ್ರೋ ಸೌಲಭ್ಯ ಅದ್ಭುತವಾಗಿದೆ ಸಿಯೋಲ್​ನಲ್ಲಿ ಸುಮಾರು 800 ನಿಲ್ದಾಣಳಿದ್ದು 1,100 ಕಿಮೀಯವರೆಗೂ ಮೆಟ್ರೋ ಜಾಲ ವಿಸ್ತರಿಸಿಕೊಂಡಿದೆ. ಇನ್ನು ಬುಸಾನ್​ನಲ್ಲಿ 129 ಕಿಮೀಯಷ್ಟು ಮೆಟ್ರೋ ರೈಲುಗಳು ಓಡಾಡುತ್ತವೆ ಮತ್ತು 49 ಸ್ಟೇಷನ್​ಗಳು ಇವೆ. ಇಂಚಿಯೋನ್​ನಲ್ಲಿ 40 ಕಿಮೀ ವಿಸ್ತಾರದಲ್ಲಿ ಮೆಟ್ರೋ ಸೇವೆ ಹಬ್ಬಿಕೊಂಡಿದ್ದು 28 ಸ್ಟೇಷನ್​ಗಳಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us