ಇವು ಅಮೆರಿಕಾದ 5 ಅತ್ಯಂತ ದುಬಾರಿ ಕಾಲೇಜ್​! ಇಲ್ಲಿ ಕಲಿಯಲು ನೀವು ಎಷ್ಟು ಕೋಟಿ ಖರ್ಚು ಮಾಡಬೇಕು ಗೊತ್ತಾ?

author-image
Gopal Kulkarni
Updated On
ಇವು ಅಮೆರಿಕಾದ 5 ಅತ್ಯಂತ ದುಬಾರಿ ಕಾಲೇಜ್​! ಇಲ್ಲಿ ಕಲಿಯಲು ನೀವು ಎಷ್ಟು ಕೋಟಿ ಖರ್ಚು ಮಾಡಬೇಕು ಗೊತ್ತಾ?
Advertisment
  • ಇವು ಅಮೆರಿಕಾದ ಐದು ಪ್ರತಿಷ್ಠಿತ ಹಾಗೂ ದುಬಾರಿ ಕಾಲೇಜ್​ಗಳು
  • ಇಲ್ಲಿ ಕಲಿಯಲು ನೀವು ವರ್ಷಕ್ಕೆ ಎಷ್ಟು ಕೋಟಿ ರೂಪಾಯಿ ನೀಡಬೇಕು?
  • ಟ್ಯೂಷನ್​ ಫೀಸ್​ ಮತ್ತು ಅಡ್ಮಿಷನ್ ಫೀಸ್ ಸೇರಿ ಕೋಟಿ ದಾಟುತ್ತೆ ಶುಲ್ಕ

ಹಿಂದೆ ವಿದ್ಯಾದಾನ ಎಂದು ಕರೆಯಲಾಗುತ್ತಿತ್ತು. ಅಂದಿನ ದಾನಗಳೆಲ್ಲಾ ಇಂದು ವ್ಯಾಪಾರೀಕರಣಗೊಂಡಿವೆ. ಅನ್ನದಾನ, ಕನ್ಯಾದಾನ, ವಿದ್ಯಾದಾನಗಳೆಲ್ಲಾ ಈಗ ಬ್ಯುಸಿನೆಸ್​ಗಳಾಗಿ ಕುಳಿತಿವೆ. ಅದು ಯಾವ ಮಟ್ಟಿಗೆ ಎಂದರೆ ಎಲ್​ಕೆಜಿ ಅಡ್ಮಿಷನ್​ಗೆನೇ ಲಕ್ಷ ಲಕ್ಷ ರೂಪಾಯಿ ಕಟ್ಟಬೇಕಾದ ಕಾಲ ಈಗ ಬಂದಿದೆ. ಇನ್ನು ಅಮೆರಿಕಾದಂತಹ ದೊಡ್ಡ ರಾಷ್ಟ್ರಗಳಲ್ಲಿ ಇವುಗಳ ಬೆಲೆ ಎಲ್ಲಿಗೆ ಮುಟ್ಟಿರಬೇಕು ಎಂಬ ಒಂದು ಅಂದಾಜು ಸಿಗಲು ಅಲ್ಲಿಯ ಅತ್ಯಂತ ದುಬಾರಿ 5 ಕಾಲೇಜ್​ಗಳ ಪರಿಚಯ ನಾವು ನಿಮಗೆ ಮಾಡಿಕೊಡುತ್ತೇವೆ.

publive-image

ಹಾರ್ವೆ ಮಡ್ ಕಾಲೇಜ್: ಇದು ಅಮೆರಿಕಾದ ಪ್ರತಿಷ್ಠಿತ ಹಾಗೂ ದುಬಾರಿ ಕಾಲೇಜ್​ಗಳಲ್ಲೊಂದು. 1955ರಲ್ಲಿ ಸ್ಥಾಪನೆಯಾದ ಈ ಕಾಲೇಝ್​​ನಲ್ಲಿ ಇಂಜನಿಯರಿಂಗ್​ ಸೈನ್ಸ್ ಮತ್ತು ಹಲವು ಕೋರ್ಸ್​​​ಗಳು ಲಭ್ಯವಿವೆ ಇಲ್ಲಿ ನೀವು ಕಲಿಯಬೇಕಾದರೆ ವರ್ಷಕ್ಕೆ 62, 817 ರೂಪಾಯಿ ಟ್ಯೂಷನ್ ಫೀ ಕಟ್ಟಬೇಕು ಭಾರತೀಯರ ರೂಪಾಯಿಗಳಲ್ಲಿ 84,896 ಡಾಲರ್ ಪ್ರವೇಶ ದಾಖಲಾತಿಗೆ ಕಟ್ಟಬೇಕು ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 72 ಲಕ್ಷ 63 ಸಾವಿರದ 591 ರೂಪಾಯಿ ದಾಖಲಾತಿ ಫೀಸ್​ ಮತ್ತು ಟ್ಯೂಷನ್ ಫೀಸ್​ 53 ಲಕ್ಷ 74 ಸಾವಿರದ 540 ರೂಪಾಯಿ ಒಟ್ಟಾರೆ 1 ಕೋಟಿ 30 ಲಕ್ಷಕ್ಕೂ ಅಧಿಕ

publive-image

ಚಿಕ್ಯಾಗೋ ಯುನಿವರ್ಸಿಟಿ: ಇದು ಕೂಡ ಅಮೆರಿಕಾದ ಅತ್ಯಂತ ದುಬಾರಿ ಕಾಲೇಜ್​​ಗಳಲ್ಲಿ ಒಂದು ಇಲ್ಲಿ ಟ್ಯೂಷನ್ ಫೀ ಭಾರತೀಯ ರೂಪಾಯಿಗಳಲ್ಲಿ 54 ಲಕ್ಷ 98 ಸಾವಿರದ 2 ರೂಪಾಯಿ ಇದೆ ಇನ್ನು ಕಾಸ್ಟ್ ಆಫ್ ಅಟೆಂಡೆನ್ಸ್​ಗೆ 74 ಲಕ್ಷ 31 ಸಾವಿರದ 286 ರೂಪಾಯಿ ಕಟ್ಟಬೇಕು ಇದು ಕೂಡ ಹೆಚ್ಚು ಕಡಿಮೆ 1 ಕೋಟಿ 40 ಲಕ್ಷದವರೆಗೆ ಬರುತ್ತದೆ.

ಇದನ್ನೂ ಓದಿ: ಇದು ಭಾರತದ ಅತ್ಯಂತ ದುಬಾರಿ ಟ್ರೈನ್.. ಟಿಕೆಟ್​ ದರ ಲಕ್ಷಕ್ಕೂ ಹೆಚ್ಚು! ವಂದೇ ಭಾರತ್ ಅಲ್ಲ, ತೇಜಸ್ ಅಲ್ಲ!

publive-image

ಪೆನ್ಸಿಲ್ವೆನಿಯಾ ಯುನಿವರ್ಸಿಟಿ: ಈ ಒಂದು ಯುನಿರ್ಸಿಟಿಯಲ್ಲಿ 28 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿವರ್ಷ ಅಧ್ಯಯನ ಮಾಡುತ್ತಾರೆ. ಇಲ್ಲಿಯೂ ಕೂಡ ಟ್ಯೂಷನ್ 54 ಲಕ್ಷ 28 ಸಾವಿರದ 870 ರೂಪಾಯಿ ಇದ್ದರೆ ಅಡ್ಮಿಷನ್ ಫೀಸ್ 73 ಲಕ್ಷ 35 ಸಾವಿರದ 631 ರೂಪಾಯಿ ಇದೆ.

publive-image

ಯಾಲೆ ಯುನಿವರ್ಸಿಟಿ: ಕ್ಯಾಲಿಫೋರ್ನಿಯಾದಲ್ಲಿರುವ ಈ ಕಾಲೇಜಿನಲ್ಲಿ ನೀವು ಕಲಿಯಬೇಕಾದರೆ 53 ಲಕ್ಷ ರೂಪಾಯಿ ಟ್ಯೂಷನ್ ಫೀ ಹಾಗೂ 72 ಲಕ್ಷ ರೂಪಾಯಿ ಅಡ್ಮಿಷನ್ ಫೀ ಕಟ್ಟಬೇಕು ಅಂದ್ರೆ ಇದು ಕೂಡ ಕೋಟಿಗೆ ಬಂದು ತಲುಪುತ್ತದೆ.

publive-image

ಸೌತ್ ಕ್ಯಾಲಿಫೋರ್ನಿಯಾ ಯುನಿವರ್ಸಿಟಿ: ಲಾಸ್ ಎಂಜೆಲಿಸ್​ನಲ್ಲಿರುವ ಈ ಕಾಲೇಜು ಕೂಡ ಅಮೆರಿಕಾದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಕಾಲೇಜು ಇಲ್ಲಿ ಟ್ಯೂಷನ್ ಫೀ ಎಂದು 55 ಲಕ್ಷ 37 ಸಾವಿರ ರೂಪಾಯಿ ವಸೂಲಿ ಮಾಡಿದರೆ ಅಡ್ಮಿಷನ್ ಫೀಸ್ 72 ಲಕ್ಷದ 77 ಸಾವಿರದ 965 ರೂಪಾಯಿ ಪೀಕುತ್ತಾರೆ

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment