ದೇಶದ ಅತ್ಯಂತ ಶ್ರೀಮಂತ ಸಿಎಂ ಯಾವ ರಾಜ್ಯದವರು; ಸಿದ್ದರಾಮಯ್ಯ ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ?

author-image
Gopal Kulkarni
Updated On
ದೇಶದ ಅತ್ಯಂತ ಶ್ರೀಮಂತ ಸಿಎಂ ಯಾವ ರಾಜ್ಯದವರು; ಸಿದ್ದರಾಮಯ್ಯ ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ?
Advertisment
  • ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ
  • ನಂಬರ್​ ಸ್ಥಾನದಲ್ಲಿರುವ ಶ್ರೀಮಂತ ಮುಖ್ಯಮಂತ್ರಿ ಯಾರು ಗೊತ್ತಾ?
  • ಕರ್ನಾಟಕದ ಸಿಎಂ ಬಳಿ ಎಷ್ಟು ಕೋಟಿ ಮೌಲ್ಯದ ಆಸ್ತಿಯಿದೆ ಗೊತ್ತಾ?

ಸಿಎಂ ಸಿದ್ದರಾಮಯ್ಯ, ಕರ್ನಾಟಕದ ಮುಖ್ಯಮಂತ್ರಿ, ಎರಡು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ತಮ್ಮ ಉತ್ತಮ ಆಡಳಿತದ ಮೂಲಕ ಜನಮನ ಗೆದ್ದಿದ್ದಾರೆ.. ಸಮಾಜವಾದಿ ನಾಯಕ. ಅಹಿಂದ ನಾಯಕ ಹೀಗೆ ರಾಜ್ಯದ ಜನಮಾನಸದಲ್ಲಿ ಹೆಸರು ವಾಸಿಯಾಗಿದ್ದಾರೆ. ಇದೀಗ ಸಿದ್ದರಾಮಯ್ಯ ದೇಶದ 3ನೇ ಶ್ರೀಮಂತ ಮುಖ್ಯಮಂತ್ರಿ ಎಂಬ ಮಾಹಿತಿ ಬಹಿರಂಗವಾಗಿದೆ.

ದೇಶದ 3ನೇ ಶ್ರೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯ
ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ಚುನಾವಣಾ ಸಮಯದಲ್ಲಿ ನೀಡಿದ ಅಫಿಡವಿಟ್‌ಗಳನ್ನು ಪರಿಶೀಲಿಸಿ ದೇಶದ ಶ್ರೀಮಂತ ಸಿಎಂಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಕರ್ನಾಟಕ ಸಿಎಂ ಸಿದ್ದರಾಮಯ್ಯ ಆಸ್ತಿ 51 ಕೋಟಿ ರೂಪಾಯಿಗಳು ಅಂತ ವರದಿಯಿಂದ ತಿಳಿದು ಬಂದಿದೆ.

ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆದಾಯ 1,630 ಕೋಟಿ ರೂ.ಗಳಷ್ಟಿದೆ ಎಂದು ವರದಿ ಹೇಳಿದೆ. ಸರಾಸರಿ ಆಸ್ತಿ ಮೌಲ್ಯ 52.59 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹಾಗಾದ್ರೆ ದೇಶದ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರೋದು ಯಾರು.. ಅತಿ ಬಡ ಸಿಎಂ ಯಾರು ಅಂತ ನೋಡೋದಾದ್ರೆ.

ಇದನ್ನೂ ಓದಿ:ವಂಚಕಿ ಐಶ್ವರ್ಯ 14 KG ಚಿನ್ನ ಏನ್ ಮಾಡಿದ್ದಾಳೆ.. ಪೊಲೀಸರು ರಿಕವರಿ ಮಾಡಲು ಸಾಧ್ಯನಾ?

publive-image

ದೇಶದ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮೊದಲ ಸ್ಥಾನದಲ್ಲಿದ್ದು, ಇವರ ಆಸ್ತಿ ಮೌಲ್ಯ 931 ಕೋಟಿ.. ಇವರ ಬಳಿಕ ಅರುಣಾಚಲ ಪ್ರದೇಶದ ಸಿಎಂ ಪೇಮಾ ಖಂಡು ಇದ್ದು, 332 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ ನಮ್ಮ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಇದ್ದು, ಇವರ ಆಸ್ತಿ ಮೌಲ್ಯ 51 ಕೋಟಿ ರೂಪಾಯಿ.. ಶ್ರೀಮಂತ ಸಿಎಂ ಪಟ್ಟಿಯ ಕೊನೆ ಸ್ಥಾನದಲ್ಲಿ ಇರೋದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. ಇವರ ಬಳಿಕ ಕೇವಲ 15 ಲಕ್ಷ ಮೌಲ್ಯದ ಆಸ್ತಿ ಇದೆ. ಈ ಮೂಲಕ ದೇಶದ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯ ಅಧಿಕಾರಿ ನಿಗೂಢ ಅಂತ್ಯ; ಕಾರಣವೇನು?

ಚುನಾವಣಾ ಅಫಿಡವಿಟ್​ನ ಅಂಕಿ ಅಂಶದ ಆಧಾರದ ಮೇಲೆ ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ಈ ವರದಿಯನ್ನು ಸಿದ್ಧ ಮಾಡಿವೆ. ಸಿದ್ದರಾಮಯ್ಯ ದೇಶದ 3ನೇ ಶ್ರೀಮಂತ ಸಿಎಂ ಅನ್ನು ಮಾಹಿತಿ ನಿಜಕ್ಕೂ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment