ಇವು ವಿಶ್ವದ ಟಾಪ್ 5 ಪುಟ್ಟ ಹಾಗೂ ಸುಂದರ ದೇಶಗಳು; ಪುಟಾಣಿ ದೇಶಗಳ ವಿಶೇಷತೆಗಳು ಏನು?

author-image
Gopal Kulkarni
Updated On
ಇವು ವಿಶ್ವದ ಟಾಪ್ 5 ಪುಟ್ಟ ಹಾಗೂ ಸುಂದರ ದೇಶಗಳು; ಪುಟಾಣಿ ದೇಶಗಳ ವಿಶೇಷತೆಗಳು ಏನು?
Advertisment
  • ವಿಶ್ವದಲ್ಲಿಯೇ ಅತ್ಯಂತ ಪುಟ್ಟ 5 ರಾಷ್ಟ್ರಗಳು ಯಾವುವು ಅಂತ ಗೊತ್ತಾ?
  • ಈ ದೇಶಗಳ ಜನಸಂಖ್ಯೆಯ ಭಾರತದ ಒಂದು ಹಳ್ಳಿಗೆ ಸಮವಾಗುತ್ತೆ
  • ಕಡಿಮೆ ಜನಸಂಖ್ಯೆ ಹೊಂದಿದರು ಶ್ರೀಮಂತ ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿವೆ

ವಿಶ್ವದಲ್ಲಿ ಒಟ್ಟು 195 ರಾಷ್ಟ್ರಗಳಿವೆ. ಒಂದೊಂದು ರಾಷ್ಟ್ರಗಳು ಒಂದೊಂದು ವಿಶೇಷತೆಗಳನ್ನು ಹೊಂದಿವೆ. ಅತಿದೊಡ್ಡ ರಾಷ್ಟ್ರ, ಅತಿ ಶ್ರೀಮಂತ ರಾಷ್ಟ್ರ, ಅತಿಹೆಚ್ಚು ಮಿಲಟರಿ ಶಕ್ತಿ ಹೊಂದಿದ ರಾಷ್ಟ್ರ, ಅತಿಹೆಚ್ಚು ರೈಲ್ವೆ ಸಂಪರ್ಕ ಹೊಂದಿರುವ ರಾಷ್ಟ್ರ ಹೀಗೆ ರಾಷ್ಟ್ರಗಳನ್ನು ವಿವಿಧ ರೀತಿಯಲ್ಲಿ ವಿಂಗಡಿಸಿ ನೋಡಲಾಗುತ್ತದೆ. ರಷ್ಯಾ ಅಮೆರಿಕಾ ಚೀನಾ ಭಾರತದ ಬೃಹತ್ ರಾಷ್ಟ್ರಗಳ ವೈವಿದ್ಯತೆಯ ಬಗ್ಗೆ ಜಗತ್ತಿನಲ್ಲಿ ಬಹುತೇಕ ಜನರಿಗೆ ಪರಿಚಯವಿದೆ. ವಿಶ್ವದಲ್ಲಿ ಹೇಗೆ ಇಂತಹ ದೊಡ್ಡ ಹಾಗೂ ಬೃಹತ್ ರಾಷ್ಟ್ರಗಳಿವೆಯೋ ಹಾಗೆಯೇ ಅತ್ಯಂತ ಪುಟ್ಟ ಪುಟ್ಟ ರಾಷ್ಟ್ರಗಳು ಇವೆ. ಅವು ಕೂಡ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿವೆ. ಅಂತಹ ಪುಟ್ಟ ರಾಷ್ಟ್ರಗಳು ಯಾವುವು? ಅವುಗಳ ಸೌಂದರ್ಯ ಹಾಗೂ ಸಂಸ್ಕೃತಿ ಏನು ಅನ್ನೋನ್ನ ನಾವು ಇಲ್ಲಿ ನಿಮಗೆ ಹೇಳುತ್ತೇವೆ.

publive-image

1. ಲೀಚ್ಟೆನ್ಸ್ಟೀನ್: ಈ ಒಂದು ದೇಶ ಅತ್ಯಂತ ಪುಟ್ಟವಾದ ದೇಶ. ಈ ದೇಶದ ಜನಸಂಖ್ಯೆ 2023ರ ಪ್ರಕಾರ ಕೇವಲ 39,850 ಅಷ್ಟು ಪುಟ್ಟದಾದ ರಾಷ್ಟ್ರವಿದು. ಯುರೋಪ್​ನ ಅತ್ಯಂತ ನಾಲ್ಕನೇ ಪುಟ್ಟದಾದ ರಾಷ್ಟ್ರ ಲೀಚ್ಟೆನ್ಸ್ಟೀನ್. ಇದು ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು ಎಂದು ಗುರುತಿಸಲಾಗುತ್ತದೆ. ಜನಸಂಖ್ಯೆ ಕಡಿಮೆಯಿದ್ದರು ಕೂಡ ಇಲ್ಲಿ ಸಂಪತ್ತಿಗೆ ಕೊರತೆಯಿಲ್ಲ. ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಕಾರ್ಪೋರೇಟ್ ಟ್ಯಾಕ್ಸ್ ಹೊಂದಿರುವ ದೇಶ ಇದು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್​ ಕದ್ದ ಕಳ್ಳರಿಗೆ ಹೊಡೀತು ಜಾಕ್​ಪಾಟ್​! ಕೋರ್ಟ್​ ಮೆಟ್ಟಿಲೇರಿದ್ದೇಕೆ ಮಾಲೀಕ?

publive-image

2. ವ್ಯಾಟಿಕನ್ ಸಿಟಿ : ವ್ಯಾಟಿಕನ್ ಸಿಟಿ ಕೂಡ ವಿಶ್ವದ ಅತ್ಯಂತ ಪುಟ್ಟ ರಾಷ್ಟ್ರಗಳಲ್ಲಿ ಒಂದು. ಇದು ತನ್ನ ವಾಸ್ತುಶಿಲ್ಪ ಹಾಗೂ ವಿಶೇಷ ಸಂಸ್ಕೃತಿಯ ಮೂಲಕವೇ ಗುರುತಿಸಿಕೊಂಡಿದೆ. ಕೇವಲ 121 ಎಕರೆಯಲ್ಲಿ ವಿಸ್ತರಿಸಿಕೊಂಡಿರುವ ಈ ದೇಶದಲ್ಲಿ ಇರುವುದು ಕೇವಲ ಅಂದ್ರೆ ಕೇವಲ 764 ಜನಸಂಖ್ಯೆ ಹೊಂದಿದೆ. 26 ಜೂನ್, 2023ರ ಪ್ರಕಾರ ಈ ದೇಶದ ಜನಸಂಖ್ಯೆ 764 ಅಂದ್ರೆ ನಮ್ಮ ದೇಶದಲ್ಲಿರುವ ಒಂದು ಸಣ್ಣ ಹಳ್ಳಿಯಲ್ಲಿರುವ ಜನಸಂಖ್ಯೆಗಿಂತಲೂ ಕೂಡ ಕಡಿಮೆ. ಕ್ರಿಶ್ಚಿಯನ್ನರ ಅತ್ಯಂತ ಪವಿತ್ರ ಕ್ಷೇತ್ರ ಇದಾಗಿದೆ. ಇಲ್ಲಿಯೇ ಕ್ರಿಶ್ಚನರು ಹೆಚ್ಚು ಪೂಜಿಸುವ ಕ್ಯಾಥೊಲಿಕ್ ಚರ್ಚ ಇರುವುದು ಇಲ್ಲಿಯೇ.

ಇದನ್ನೂ ಓದಿ: ಪಾಕಿಸ್ತಾನದಲ್ಲಿದೆ ಮಹಾಶಿವನ ಪುರಾತನ ಮಂದಿರ; ಮಹಾದೇವನ ಕಣ್ಣೀರಿನಿಂದಲೇ ತುಂಬಿದ ಆ ಕುಂಡ ಹೇಳುವ ಕಥೆಯೇನು?

publive-image

3. ಮೊನಾಕೊ: ಮೊನಾಕೊ ಇದು ಕೇವಲ ಐಷಾರಾಮಿ ಕ್ಯಾಸಿನೋ ಹಾಗೂ ಮೆಡಿಟೇರಿಯನ್ ವೀವ್ಸ್​​ಗೆ ಅಂತಲೇ ಫೇಮಸ್ ಆಗಿರುವ ದೇಶ. 2023ರ ಪ್ರಕಾರ ಈ ದೇಶದಲ್ಲಿ ಇರುವ ಜನಸಂಖ್ಯೆ ಕೇವಲ 38,956. ಇದರ ವಿಸ್ತಿರ್ಣ ಇರೋದು ಕೇವಲ 3.83 ಕಿಲೋ ಮೀಟರ್​ ವ್ಯಾಪ್ತಿ ಮಾತ್ರ. ವಿಶ್ವದ ಅತ್ಯಂತ ಪುಟ್ಟ ರಾಷ್ಟ್ರಗಳಲ್ಲಿ ಇದು ಕೂಡ ಒಂದು

publive-image

4. ನೌರು: ವಿಶ್ವದಲ್ಲಿರುವ ಮತ್ತೊಂದು ಪುಟ್ಟ ರಾಷ್ಟ್ರ ಅಂದ್ರೆ ಅದು ನೌರು. ಇಲ್ಲಿರುವ ಜನಸಂಖ್ಯೆಯೂ ಕೂಡ ತೀರ ಅಂದ್ರೆ ತೀರ ಕಡಿಮೆ. ಇಲ್ಲಿ ವಾಸಿಸುವವ ಜಸಸಂಖ್ಯೆ ಕೇವಲ 11 ಸಾವಿರದ 875 ಜನರು ಮಾತ್ರ. ಅತ್ಯಂತ ಕಡಿಮೆ ಕ್ರೈಂ ರೇಟ್ ಹೊಂದಿರುವ ದೇಶಗಳಲ್ಲಿ ನೈರು ಕೂಡ ಒಂದು. ಅತಿಹೆಚ್ಚು ಕ್ರಿಶ್ಚಿಯನ್​ರು ಇಲ್ಲಿ ವಾಸ ಮಾಡುತ್ತಾರೆ. ಜಗತ್ತಿನ ಅತ್ಯಂತ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ನೌರು ಕೂಡ ಒಂದು. ಇಲ್ಲಿರುವ ಅತ್ಯಂತ ಸುಂದರ ದ್ವೀಪಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.

publive-image

5. ತುವಲು: ಇದು ವಿಶ್ವದಲ್ಲಿ ಅತ್ಯಂದ ಚಿಕ್ಕದಾದ ದೇಶಗಳಲ್ಲಿ ಒಂದು. ಈ ದೇಶದ ಜನಸಂಖ್ಯೆ ಒಟ್ಟು 9,816. ಕೃಷಿ ಮತ್ತು ಮೀನುಗಾರಿಕೆಯ ಮೇಲೆ ಅತಿಹೆಚ್ಚು ಅವಲಂಬಿತಗೊಂಡಿರುವ ದೇಶ ತುವಲು.ಮೂರನೇ ಚಾರ್ಲ್ಸ್​ ದೊರೆ ಈ ದೇಶದ ಮೇಲೆ ನಿಯಂತ್ರಣವನ್ನು ಹೊಂದಿದ್ದಾರೆ. ಈ ದೇಶದ ತನ್ನದೇ ಆದ ಒಂದು ಮಿಲಿಟರಿ ಶಕ್ತಿಯನ್ನು ಇಂದಿಗೂ ಕೂಡ ಹೊಂದಿಲ್ಲ.

ಇವಿಷ್ಟೇ ಅಲ್ಲ ಸ್ಯಾನ್ ಮ್ಯಾರಿನೋ, ಮಾರ್ಷಲ್ ದ್ವೀಪ, ಸೈಂಟ್ ಕಿಟ್ಸ್ ಆ್ಯಂಡ್ ನೆವ್ವಿಸ್, ಮಲ್ಟಾ, ಮಾಲ್ಡೀವ್ಸ್ ಇವು ಕೂಡ ದೇಶದ ಅತ್ಯಂತ ಪುಟ್ಟ ರಾಷ್ಟ್ರಗಳಲ್ಲಿ ಒಂದಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment