/newsfirstlive-kannada/media/post_attachments/wp-content/uploads/2025/02/FOCUS-DISTROYING-2.jpg)
ಪ್ರತಿ ಕೆಲಸವನ್ನು ಮಾಡುವಾಗ ನಮ್ಮ ಗಮನ, ನಮ್ಮ ಲಕ್ಷ್ಯ, ನಮ್ಮ ನಿಗಾ ತುಂಬಾ ಮುಖ್ಯವಾಗುತ್ತದೆ. ಪ್ತಿ ಕಾರ್ಯವನ್ನು ಶ್ರದ್ಧೆಯಿಂದ ಮಾಡಬೇಕು ಎಂಬ ಇಚ್ಛೆ ನಮ್ಮದಾಗಿದ್ದ್ಲಲ್ಲಿ ಅದರತ್ತ ಗಮನ ಕೊಡುವುದು ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಆದರೆ ನಾವೇ ಬೆಳೆಸಿಕೊಂಡ ಕೆಲವು ಅಭ್ಯಾಸಗಳು ಅವುಗಳನ್ನು ಧ್ವಂಸಗೊಳಿಸುತ್ತವೆ. ನಮ್ಮ ಗಮನಶಕ್ತಿಯ ಮೂಲವನ್ನೇ ನಾಶಮಾಡಬಲ್ಲ ಶಕ್ತಿ ಆ ಅಭ್ಯಾಸಗಳಿಗಿದೆ. ಹಾಗಿದ್ರೆ ಯಾವುವು ಆ ಅಭ್ಯಾಸ ಅಂತ ಒಮ್ಮೆ ಗಮನಿಸುವುದಾದ್ರೆ.
ನಿರ್ಜಲೀಕರಣ: ಅಂದ್ರೆ ಡಿಹೈಡ್ರೇಷನ್, ಇದು ಕೂಡ ನಮ್ಮ ನೆನನಪಿನ ಶಕ್ತಿ ಅಥವಾ ಗಮನದ ಶಕ್ತಿಯನ್ನು ಕುಂದಿಸುತ್ತದೆ. ಹೀಗಾಗಿ ನಿತ್ಯ ಹೆಚ್ಚು ಹೆಚ್ಚು ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಬೇಕು. ನೀರು ಹೆಚ್ಚು ಕುಡಿದಷ್ಟು ದೇಹ ಚೈತನ್ಯದಿಂದ ಹಾಗೂ ಆರೋಗ್ಯದಿಂದ ಇರುತ್ತದೆ. ಇದರಿಂದಾಗಿ ಗಮನಶಕ್ತಿಯೂ ಕೂಡ ಹೆಚ್ಚುತ್ತದೆ.
ಕಡಿಮೆ ನಿದ್ರೆ: ನಿದ್ದೆ ಎಂಬುದು ಹಸಿವು ನೀರಡಿಕೆಯಷ್ಟೇ ದೇಹಕ್ಕೆ ಬಯಸುವ ಒಂದು ಬಯಕೆ. ಇದನ್ನೂ ಸಂಪೂರ್ಣವಾಗಿ ದೇಹಕ್ಕೆ ನೀಡಬೇಕು. ಸರಿಯಾಗಿ ನಿದ್ದೆ ಮಾಡಲಾಗದವರ ಗಮನಶಕ್ತಿ ಅಥವಾ ಇಂಗ್ಲಿಷ್ನಲ್ಲಿ ಹೇಳುವುದಾದ್ರೆ ಫೋಕಸ್ ಇದನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬರು ಕನಿಷ್ಠ ಪಕ್ಷ 7 ರಿಂದ 8 ಗಂಟೆಗಳ ಕಾಲ ನಿತ್ಯ ನಿದ್ದೆ ಮಾಡಬೇಕು.
ಅತಿಯಾದ ಸೋಷಿಯಲ್ ಮೀಡಿಯಾ ಬಳಕೆ: ಇಂದು ಮನುಷ್ಯ ಜಗತ್ತಿನ ಜನರ ಅರ್ಧ ಸಮಯವನ್ನು ಕೊಲ್ಲುತ್ತಿರುವುದು ಸೋಷಿಯಲ್ ಮೀಡಿಯಾಗಳು.ಅದರಲ್ಲೂ ರೀಲ್ಸ್ಗಳು. ಇವುಗಳಿಂದ ಬರುವ ನೋಟಿಫಿಕೇಷನ್ಸ್ಗಳು ನಮ್ಮ ಗಮನವನ್ನು ಬೇರೆಯತ್ತ ಸೆಳೆಯುತ್ತವೆ. ಅತಿಯಾದ ಸೋಷಿಯಲ್ ಮೀಡಿಯಾ ಬಳಕೆ ನಮ್ಮಲ್ಲಿ ಒತ್ತಡವನ್ನು ಮತ್ತಷ್ಟು ಸೃಷ್ಟಿಸುತ್ತವೆ, ಇದರಿಂದ ನಮ್ಮ ಗಮನದಶಕ್ತಿ ಸಾಕಷ್ಟು ಹಾಳು ಮಾಡುವುದರಲ್ಲಿ ಸೋಷಿಯಲ್ ಮೀಡಿಯಾಗಳು ಪ್ರಮುಖ ಪಾತ್ರವಹಿಸುತ್ತವೆ.
ಇದನ್ನೂ ಓದಿ: ಸೀರೆಲಿ ಹುಡುಗಿರ ನೋಡಲೆಬಾರದು.. ಮೈಸೂರ್ ಸಿಲ್ಕ್ ಸೀರೆಗೆ ಈ ಮಾರ್ಡನ್ ಬ್ಲೌಸ್ ಡಿಸೈನ್ಸ್ ಟ್ರೈ ಮಾಡಿ ನೋಡಿ!
ಒಂದೇ ಬಾರಿ ಹಲವು ಕೆಲಸ: ಮಲ್ಟಿ ಟಾಸ್ಕಿಂಗ್, ಒಂದೇ ಬಾರಿ ಅನೇಕ ಕೆಲಸದಲ್ಲಿ ತೊಡಗುವುದರಿಂದಲೂ ಕೂಡ ನಮ್ಮ ಗಮನಶಕ್ತಿ ಹಾಳಾಗುತ್ತದೆ. ಕಾರಣ ನಾವು ಒಂದೇ ಕಡೆ ನಮ್ಮ ಲಕ್ಷ್ಯವನ್ನು ಗಟ್ಟಿಯಾಗಿ ನಿಲ್ಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಒಂದು ಸಮಯದಲ್ಲಿ ಒಂದೇ ಟಾಸ್ಕ್ ಕಡೆ ಗಮನವಿಟ್ಟುಕೊಳ್ಳುವುದು ತುಂಬಾ ಮುಖ್ಯ.
ಯೋಜನೆಯಿಲ್ಲದ ದಿನಗಳು: ಒಂದು ದಿನ ಒಂದು ವಾರ ಅಥವಾ ಈ ತಿಂಗಳು ಹೇಗೆ ಕಳೆಯಬೇಕು ಎಂಬುದನ್ನು ನಾವು ಪಕ್ಕಾ ಪ್ಲಾನ್ ಮಾಡದಿದ್ದಾರೆ. ನಮ್ಮ ಗಮನ ನೂರೆಂಟು ಕಡೆ ಹರಿದು ಹೋಗಿ ಏನೂ ಮಾಡಲಾರದ ಸ್ಥಿತಿಗೆ ಬಂದು ಬಿಡುತ್ತೇವೆ. ಹೀಗಾಗಿ ಪ್ರಮುಖವಾದ ವಿಷಯಗಳಿಗೆ ಸರಿಯಾದ ಸಮಯ ಕೊಟ್ಟು ಅವುಗಳನ್ನು ಮುಗಿಸಲು ನೋಡಿ. ಸರಿಯಾದ ಟೈಮ್ ಟೇಬಲ್ ನಿಮ್ಮ ಗಮನಶಕ್ತಿಯನ್ನು ಸುಧಾರಿಸುತ್ತದೆ.
ಇದನ್ನೂ ಓದಿ:ಮನೆ ಬೀರುವಿನಲ್ಲಿರೋ ದುಬಾರಿ ಬೆಲೆಯ ಸೀರೆ ಸೇಫ್ ಆಗಿರಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಚಿತ್ತ ಚಾಂಚಲ್ಯದಿಂದ ಆರಂಭವಾಗುವ ಮುಂಜಾನೆ: ಇತ್ತೀಚಿನ ದಿನಗಳಲ್ಲಿ ಜನರ ಮುಂಜಾನೆ ಆರಂಭವಾಗುವುದೇ ಒಂದು ಮೊಬೈಲ್ ಫೋನ್ ನೋಡುತ್ತಾ ಏಳುವುದರಿಂದ ಇಲ್ಲವೇ ಟಿವಿ ಆನ್ ಮಾಡಿ ಅದರ ಮುಂದೆ ಕುಳಿತೂ ಮೊಬೈಲ್ನಲ್ಲಿ ತೊಡಗುವುದು. ಇವೆಲ್ಲವೂ ನಮ್ಮ ಚಿತ್ತ ಚಾಂಚಲ್ಯಕ್ಕೆ ಕಾರಣವಾಗುತ್ತವೆ. ಇದರ ಬದಲು ಧ್ಯಾನ, ಪ್ರಾಣಾಯಾಮ ಹೀಗೆ ಹಲವು ಉತ್ತಮ ರೂಢಿಗಳೊಂದಿಗೆ ದಿನವನ್ನು ಆರಂಭಿಸಿದರೆ ಈ ಚಿತ್ತ ಚಾಂಚಲ್ಯವನ್ನು ನಿಯಂತ್ರಣಕ್ಕೆ ತರಬಹುದು.
ಯೋಗ್ಯವಲ್ಲದ ಆಹಾರ ಕ್ರಮ: ಪೂರ್ ಡೈಯಟ್, ಅಂದ್ರೆ ಸರಿಯಲ್ಲದ ಆಹಾರ ಕ್ರಮವೂ ಕೂಡ ನಮ್ಮ ಗಮನಶಕ್ತಿಯನ್ನು ಧ್ವಂಸಗೊಳಿಸುತ್ತದೆ. ಹೆಚ್ಚು ಪೋಷಕಾಂಶ ಹಾಗೂ ಪೌಷ್ಠಿಕಾಂಶ, ಜೀವಸತ್ವ ಇರುವ ಆಹಾರವನ್ನು ಸೇವಿಸುವುದರಿಂದ ಈ ಅಪಾಯದಿಂದ ಪಾರಾಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ