ಕಡಿಮೆ ಅವಧಿಯಲ್ಲಿ 5 ಸರ್ಟಿಫೈಡ್​ ಕೋರ್ಸ್.. ಕೈ ತುಂಬಾ ಸಂಬಳ..!

author-image
Ganesh
ಕಡಿಮೆ ಅವಧಿಯಲ್ಲಿ 5 ಸರ್ಟಿಫೈಡ್​ ಕೋರ್ಸ್.. ಕೈ ತುಂಬಾ ಸಂಬಳ..!
Advertisment
  • ಕಾಮರ್ಸ್‌ ಓದಿದೋರು ಮುಂದೇನು ಅನ್ನೋ ಚಿಂತೆನಾ?
  • ಈ ಕೋರ್ಸ್‌ಗಳ ಕಲಿಕೆಯಿಂದ ಕರಿಯರ್​ಗೆ ಒಳ್ಳೆ ಅವಕಾಶ
  • ಬಿಕಾಂ ಮುಗಿಸಿದವರು ಓದಲೇಬೇಕಾದ ಸ್ಟೋರಿ ಇದು

ಕಾಮರ್ಸ್‌ ಓದಿದೋರು ಮುಂದೇನು ಅನ್ನೋ ಚಿಂತೆಯಲ್ಲಿದ್ದರೆ ಈ ಶಾರ್ಟ್‌ ಟರ್ಮ್‌ ಕೋರ್ಸ್‌ಗಳನ್ನು ಮಾಡಿ ಹೆಚ್ಚು ಹೆಚ್ಚು ಸಂಬಳ ಪಡೆಯಬಹುದು. ಈ ಕೋರ್ಸ್‌ಗಳ ಕಲಿಕೆಯಿಂದ ಯಾವೆಲ್ಲ ಕರಿಯರ್ ಅವಕಾಶಗಳಿವೆ ಅನ್ನೋ ಕಂಪ್ಲೀಟ್​​ ಮಾಹಿತಿ ಇಲ್ಲಿದೆ..

ಹೆಚ್ಚಾಗುತ್ತಿರುವ ಜಾಗತಿಕ ಸ್ಪರ್ಧೆ, ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷತೆ ಹೊಂದಿರೋ ವೃತ್ತಿಪರರನ್ನೇ ಬೆಂಬಲಿಸುತ್ತಿರೋ ಕಂಪನಿಗಳು. ಅಂದ್ರೆ ಯಾರಿಗೆ ಹೆಚ್ಚು ಟ್ಯಾಲೆಂಟ್​ ಇದ್ಯೋ ಅವರಿಗೆ ಮಾತ್ರ ಇಂದು ಕೆಲಸ ನೀಡಲಾಗುತ್ತಿದೆ. ಬಿಕಾಂ ನಂತರ ಈ ಕಡಿಮೆ ಅವಧಿಯ ಕೋರ್ಸ್​ಗಳನ್ನು ಮಾಡಿದ್ರೆ ನೀವು ಹೆಚ್ಚಿನ ಉದ್ಯೋಗ ಅವಕಾಶಗಳ ಜತೆಗೆ ಹೆಚ್ಚು ಸಂಬಳ ಪಡೆಯಬಹುದು..

ಇದನ್ನೂ ಓದಿ: ಯಾರಿಗೆ ಎಜುಕೇಷನ್​ ಲೋನ್​ ಸಿಗುತ್ತೆ..? ವಿದ್ಯಾರ್ಥಿಗಳು ಓದಲೇಬೇಕಾದ ಸ್ಟೋರಿ..!

ಅಂಕಿ-ಅಂಶಗಳ ಪ್ರಕಾರ ಬ್ಯಾಚುಲರ್ ಆಫ್‌ ಕಾಮರ್ಸ್‌ ಪದವೀಧರರ ಉದ್ಯೋಗಾವಕಾಶವು 2025ರ ವೇಳೆಗೆ ಭಾರತದಲ್ಲಿ ಕೇವಲ ಶೇಕಡ. 50ರಷ್ಟಿದೆ. ಯಾರೇ ಆಗಲಿ ಡಿಗ್ರಿ ಮಾಡಿದ ಮೇಲೂ ಉದ್ಯೋಗ ಖಾತ್ರಿಪಡಿಸಿಕೊಳ್ಳಲು ಕನಿಷ್ಠ ಕೌಶಲ್ಯ ಬೇಕಿದೆ. ನೀವು ಡಿಗ್ರಿಯಲ್ಲಿ ಕೇವಲ ಥಿಯರಿ ಮಾತ್ರ ಕಲಿಯುತ್ತೀರಿ. ಇದು ಚಾರ್ಟರ್ಡ್‌ ಅಕೌಂಟೆನ್ಸಿ, ಬ್ಯಾಂಕಿಂಗ್, ಹಣಕಾಸು ಅಥವಾ ತೆರಿಗೆಯಂತಹ ನಿರ್ದಿಷ್ಟ ಡೊಮೇನ್‌ಗಳ ಬಗ್ಗೆ ಪ್ರಾಕ್ಟಿಕಲ್​​ ನಾಲೆಜ್ ಕಲಿಸೋದಿಲ್ಲ. ಆದ್ದರಿಂದ ನಿಸ್ಸಂದೇಹವಾಗಿ ಕಾಮರ್ಸ್‌ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಈ ಶಾರ್ಟ್‌ ಟರ್ಮ್‌ ಕೋರ್ಸ್‌ಗಳನ್ನು ಮಾಡಲೇಬೇಕು.

ಶಾರ್ಟ್‌ ಟರ್ಮ್‌ ಕೋರ್ಸ್‌ಗಳು..

ಎಫ್‌ಎಂವಿಎ ಕೋರ್ಸ್​​. ಈ ಕೋರ್ಸ್‌ ಅವಧಿ 1 ವರ್ಷದಿಂದ 6 ತಿಂಗಳು ಇರುತ್ತದೆ. ಫೈನಾನ್ಷಿಯಲ್ ಮಾಡೆಲಿಂಗ್ ಎಕ್ಸಿಕ್ಯೂಟಿವ್‌ ಸರಾಸರಿ ವಾರ್ಷಿಕ ವೇತನ 8 ಲಕ್ಷ ಇರಲಿದೆ. ಫೈನಾನ್ಷಿಯಲ್ ಮಾಡೆಲಿಂಗ್ ಕುರಿತಾಗಿ ಈ ಕೋರ್ಸ್​​ನಲ್ಲಿ ಕಲಿಯಬಹುದು. ಫೈನಾನ್ಷಿಯಲ್ ಮಾಡೆಲಿಂಗ್'ನ ಪ್ರಮುಖ ಕರಿಯರ್ ಅವಕಾಶಗಳು ಅಂದ್ರೆ ಪ್ರಾಜೆಕ್ಟ್‌ ಫೈನಾನ್ಸ್‌ , ಇನ್‌ವೆಸ್ಟ್‌ಮೆಂಟ್‌ ಬ್ಯಾಂಕಿಂಗ್, ಫೈನಾನ್ಞಿಯಲ್ ಅನಾಲಿಸಿಸ್, ಫೈನಾನ್ಷಿಯಲ್ ಮಾಡೆಲಿಂಗ್ ಅನಾಲಿಸ್ಟ್‌, ಇನ್‌ವೆಸ್ಟ್‌ಮೆಂಟ್ ಅನಾಲಿಸ್ಟ್‌ ಆಗಿದೆ.

ಯುಎಸ್‌ ಸರ್ಟಿಫೈಡ್ ಮ್ಯಾನೇಜ್ಮೆಂಟ್ ಅಕೌಂಟಿಂಗ್. ಇದೊಂದು ಪ್ರೊಫೇಶನಲ್ ಸ್ಕಿಲ್ ಬಿಲ್ಡಿಂಗ್ ಕೋರ್ಸ್‌. ಕಂಪನಿಗೆ ತಂತ್ರಗಾರಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಕೌಂಟಿಂಗ್ ಪ್ರೊಫೇಶನಲ್‌ಗಳಿಗೆ ಸಹಾಯ ಮಾಡುತ್ತದೆ. ಈ ಕೋರ್ಸ್‌ ಪಡೆದವರಿಗೆ ಕರಿಯರ್ ಅವಕಾಶಗಳೆಂದರೆ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್, ಪ್ರೊಫೆಸರ್ ಇನ್ ಅಕೌಂಟಿಂಗ್ ಅಂಡ್ ಫೈನಾನ್ಸ್‌, ಸ್ಟ್ರಾಟೆಜಿಕ್ ಹೆಡ್, ರಿಕವರಿ ಕನ್ಸಲ್‌ಟಂಟ್, ಫೈನಾನ್ಷಿಯಲ್ ರಿಸ್ಕ್‌ ಮ್ಯಾನೇಜರ್ ಆಗಬಹುದು.

ಡಿಪ್ಲೊಮ ಇನ್ ಇಂಟರ್‌ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಸ್ಟ್ಯಾಂಡರ್ಡ್ಸ್‌. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಕೋರ್ಸ್​ಗೆ ಭಾರೀ ಡಿಮ್ಯಾಂಡ್​. ಡಿಪ್ಲೊಮ ಇನ್ ಇಂಟರ್‌ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಸ್ಟ್ಯಾಂಡರ್ಡ್ಸ್‌ ಕೋರ್ಸ್‌ ಅನ್ನು ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಕಲಿಯಬಹುದು. ಇದು 6 ತಿಂಗಳ ಅಲ್ಪಾವಧಿ ಕೋರ್ಸ್‌ ಆಗಿದೆ. ಈ ಕೋರ್ಸ್​​ ಕಲಿತರೆ 8 ಲಕ್ಷವರೆಗೆ ವಾರ್ಷಿಕ ಸಂಭಾವನೆ ಇದೆ. IFRSನ ಪ್ರಮುಖ ಕರಿಯರ್‌ಗಳೆಂದರೆ ಫೈನಾನ್ಷಿಯಲ್ ಕನ್ಸಲ್‌ಟಿಂಗ್, ಐಎಫ್‌ಆರ್‌ಎಸ್‌ ಟ್ರೈನರ್, ಫೈನಾನ್ಷಿಯಲ್ ಅನಾಲಿಸ್ಟ್‌, ಚಾರ್ಟರ್ಡ್‌ ಅಕೌಂಟಂಟ್‌, ಎಸಿಸಿಎ ಆಗಿದೆ.

ಇದನ್ನೂ ಓದಿ: ಕೈಗೆಟುಕುವ ದರದಲ್ಲಿ MBBS ಸೀಟ್.. ಆದರೂ ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗೋದು ಯಾಕೆ..?

ಸರ್ಟಿಫಿಕೇಟ್‌ ಇನ್ ಸ್ಟಾಕ್ ಮಾರ್ಕೆಟ್‌, ಇದು ಮತ್ತೊಂದು ಟ್ರೆಂಡಿಂಗ್​ ಕೋರ್ಸ್​. ಎರಡು ದಶಕಗಳಿಂದ ಇತ್ತೀಚೆಗೆ ಸ್ಟಾಕ್‌ ಮಾರ್ಕೆಟ್‌ನಲ್ಲಿ ಟ್ರೇಡಿಂಗ್ ಮಾಡುವವರ ಸಂಖ್ಯೆ ಹೇರಳವಾಗಿದೆ. ಇದು ಸ್ಟಾಕ್‌ ಬ್ರೋಕರ್‌ಗಳಿಗೆ ಬ್ಯುಸಿನೆಸ್‌ ಹೆಚ್ಚಿಸಿದೆ. ಇವರು ಬಂಡವಾಳ ಹೂಡಿಕೆದಾರರು ಮತ್ತು ಸ್ಟಾಕ್‌ ಮಾರ್ಕೆಟ್‌ಗಳ ನಡುವೆ ಸಂಬಂಧ ಬೆಸೆಯಲಿದ್ದು, ತಮ್ಮ ಕ್ಲೈಂಟ್‌ಗಳಿಗೆ ಸಲಹೆ ನೀಡುತ್ತಾರೆ. ಇದು 6 ತಿಂಗಳ ಕೋರ್ಸ್ ಆಗಿದ್ದು, ಈ ಕೋರ್ಸ್‌ ಪಡೆದವರಿಗೆ ಕರಿಯರ್‌ ಅವಕಾಶಗಳೆಂದರೆ - ಈಕ್ವಿಟಿ ಡೀಲರ್, ಈಕ್ವಿಟಿ ಅಡ್ವೈಸರ್, ಸ್ಟಾಕ್‌ಬ್ರೋಕರ್, ಫ್ಲೋರ್ ಬ್ರೋಕರ್, ಅಕೌಂಟ್ ಮ್ಯಾನೇಜರ್ ಆಗಬಹುದು.

ಸರ್ಟಿಫಿಕೇಟ್‌ ಇನ್ ಇ-ಕಾಮರ್ಸ್‌, ಇದು ಕೂಡ ಬೆಸ್ಟ್​ ಕೋರ್ಸ್​ ಆಗಿದೆ. ಈಗ ರೀಟೈಲ್ ಕ್ಷೇತ್ರವನ್ನು ಇ-ಕಾಮರ್ಸ್‌ ಕಂಪನಿಗಳು ಸ್ವಾಧೀನಪಡಿಸಿಕೊಂಡಿವೆ. ಹೆಚ್ಚು ಹೆಚ್ಚು ಆನ್‌ಲೈನ್‌ ಸ್ಟೋರ್‌ಗಳನ್ನು ತೆರೆಯುವುದರೊಂದಿಗೆ , ಈ ಉದ್ಯಮದಲ್ಲಿ ವೃತ್ತಿಜೀವನದ ವ್ಯಾಪ್ತಿ ಹೆಚ್ಚುತ್ತಿದೆ. ಈ ಕಾಮರ್ಸ್‌ ವ್ಯವಹಾರವನ್ನು ನಡೆಸುವ ಪರಿಕಲ್ಪನೆಗಳ ಬಗ್ಗೆ ತಿಳಿದುಕೊಳ್ಳಲು ಅಭ್ಯರ್ಥಿಗಳು ಇ-ಕಾಮರ್ಸ್‌ನಲ್ಲಿ ಪ್ರಮಾಣ ಪತ್ರ ಕೋರ್ಸ್‌ ಅನ್ನು ಮುಂದುವರಿಸಬಹುದು. ವಾಣಿಜ್ಯ ಪದವೀಧರರಿಗೆ ಉದ್ಯೋಗ ಆಧಾರಿತ ಕೋರ್ಸ್‌ ಹೊಂದಿರುವ ವೃತ್ತಿಪರರು ಸರಾಸರಿ ವೇತನವು ಸುಮಾರು 5-8 ಲಕ್ಷವರೆಗೆ ಇರುತ್ತದೆ. ಸಂಭಾವ್ಯ ಜಾಬ್‌ ಪ್ರೊಫೈಲ್‌ಗಳೆಂದರೆ-ಈ-ಬ್ಯುಸಿನೆಸ್ ಕನ್ಸಲ್‌ಟಂಟ್, ಕಸ್ಟಮರ್ ರಿಲೇಶನ್‌ ಮ್ಯಾನೇಜರ್, ಬ್ಯುಸಿನೆಸ್ ಅನಾಲಿಸ್ಟ್‌ ಕೂಡ ಆಗಬಹುದು.

ಇದನ್ನೂ ಓದಿ: SSLC ಮುಗಿಸಿ ಮನೆಯಲ್ಲೇ ಕೂತಿದ್ದೀರಾ? ಡೈರೆಕ್ಟ್​​ ಇಂಜಿನಿಯರಿಂಗ್​ ಮಾಡಬಹುದು.. ಹೇಗೆ ಅಂತೀರಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment