newsfirstkannada.com

ಮತ್ತೊಂದು ಇಂಡಸ್ಟ್ರೀ ಹಿಟ್​ ಕೊಡಲು ಮುಂದಾದ ಅಲ್ಲು ಅರ್ಜುನ್​​, ತ್ರಿವಿಕ್ರಮ್​​; ಇಲ್ಲಿದೆ ಟಾಪ್​​ 5 ಸಿನಿಮಾ ಸುದ್ದಿ!

Share :

Published July 3, 2023 at 10:13pm

Update July 3, 2023 at 10:34pm

    ಎಲ್ಲಾ ಥಿಯೇಟರ್​ಗಳಿಂದ ಎತ್ತಂಗಡಿ ಆಯ್ತು ಪ್ರಭಾಸ್​​ ನಟನೆಯ ಆದಿಪುರುಷ

    ಪಿಆರ್​ಕೆ ಸಂಸ್ಥೆಯಿಂದ ಮತ್ತೊಂದು ಸಧಬಿರುಚಿಯ ಸಿನಿಮಾ ತಯಾರು

    ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ಫೋಟೋಶೂಟ್​​ ವೈರಲ್​​

ಅಲ್ಲು ಅರ್ಜುನ್ ಹೊಸ ಸಿನಿಮಾ

ಪುಷ್ಪ-2 ಚಿತ್ರದಲ್ಲಿ ಬ್ಯುಸಿಯಿರುವ ಅಲ್ಲು ಅರ್ಜುನ್ ಮತ್ತೊಂದು ಹೊಸ ಚಿತ್ರ ಘೋಷಿಸಿದ್ದಾರೆ. ‘ಜುಲಾಯಿ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲ ವೈಕುಂಠಪುರಮುಲೋ’ ಅಂಥಹ ಸೂಪರ್​ ಹಿಟ್ ಕೊಟ್ಟಿರೋ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಅಲ್ಲು ಅರ್ಜುನ್ ಮತ್ತೊಮ್ಮೆ ಕೈ ಜೋಡಿಸಿದ್ದು, ಕುತೂಹಲ ಹೆಚ್ಚಿಸಿದೆ. ಪುಷ್ಪ ಬಿಡುಗಡೆಗೂ ಮುಂಚೆಯೇ ಈಗಾಗಲೇ ‘ಅರ್ಜುನ್ ರೆಡ್ಡಿ’ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಟೀ-ಸೀರಿಸ್ ನಿರ್ಮಾಣ ಸಂಸ್ಥೆ ಜೊತೆ ಒಂದ್ ಸಿನಿಮಾ ಘೋಷಿಸಿದ್ದಾರೆ. ಈಗ ಮತ್ತೊಂದ್ ಸಿನಿಮಾ ಅನೌನ್ಸ್​ ಆಗಿದೆ.

PRK ಹೊಸ ಚಿತ್ರ ‘ಆಚಾರ್ & ಕೋ’

ಹೊಸ ಕಂಟೆಂಟ್​ ಹೊಸ ಟ್ಯಾಲೆಂಟ್​ಗಳಿಗೆ ಮಣೆ ಹಾಕುವ ಪಿಆರ್​ಕೆ ಸಂಸ್ಥೆಯಿಂದ ಮತ್ತೊಂದು ಸಧಬಿರುಚಿಯ ಸಿನಿಮಾ ತಯಾರಾಗಿದೆ. ‘ಆಚಾರ್ & ಕೋ’ ಪಿಆರ್​ಕೆ ಸಂಸ್ಥೆಯಿಂದ ರೆಡಿಯಾಗಿರುವ ಮೊದಲ ಮಹಿಳಾ ನಿರ್ದೇಶನದ ಚಿತ್ರವಾಗಿದ್ದು, ಜುಲೈ 28ಕ್ಕೆ ಬಿಡುಗಡೆಯಾಗಲಿದೆ. ಸಿಂಧು ಶ್ರೀನಿವಾಸ ಮೂರ್ತಿ ಈ ಚಿತ್ರ ನಿರ್ದೇಶಿದ್ದು, ಬಿಂದು ಮಾಲಿನಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಡಾನ್ನಿಲಾ ಕೊರ್ರೆಯಾ ಕ್ರಿಯೇಟಿವ್ ನಿರ್ಮಾಪಕಿ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ದುಬಾರಿ ಮನೆ ಖರೀದಿಸಿದ ಜಾಕ್​ಲೀನ್

ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಮುಂಬೈನ ಬಾಂದ್ರಾದಲ್ಲಿ ಲಕ್ಷುರಿ ಮನೆಯನ್ನು ಖರೀದಿಸಿದ್ದಾರಂತೆ. ಸೈಫ್ ಅಲಿ ಖಾನ್, ಕರೀನಾ ಕಪೂರ್, ರಣಬೀರ್ ಕಪೂರ್, ಆಲಿಯಾ ಭಟ್ ಅವರ ಮನೆಯೂ ಇದೇ ಏರಿಯಾದಲ್ಲೇ ಇದ್ದು ಜಾಕ್​ಲೀನ್​ ಹೊಸ ಮನೆಯೂ ಅಲ್ಲೆ ಪಕ್ಕದಲ್ಲಿರುವುದು ವಿಶೇಷ. ಸದ್ಯಕ್ಕೆ ಜಾಕ್​ಲೀನ್ ಖರಿದೀರಿಸಿರುವ ಮನೆಯ ಬೆಲೆ ಎಷ್ಟು ಎನ್ನುವ ಬಗ್ಗೆ ಮಾಹಿತಿ ಇಲ್ಲವಾದರೂ ಮನೆಯ ಫೊಟೋ ಮತ್ತು ವಿಡಿಯೋ ವೈರಲ್ ಆಗ್ತಿದೆ.

ಆದಿಪುರುಷ್ ಗೇಮ್ ಓವರ್

ಪ್ರಭಾಸ್ ನಟನೆಯ ಆದಿಪುರುಷ ಚಿತ್ರ ಪ್ರದರ್ಶನ ಆಗುತ್ತಿದ್ದ ಥಿಯೇಟರ್​ಗಳು ಸಿನಿಮಾನ ಎತ್ತಂಗಡಿ ಮಾಡಿವೆ. ನಿರೀಕ್ಷಿತ ಗಳಿಕೆ ಕಾಣದ ಕಾರಣ ಥಿಯೇಟರ್​ಗಳಿಂದ ಆದಿಪುರುಷ ಎತ್ತಂಗಡಿ ಆಗ್ತಿವೆ. ಹೈದರಾಬಾದ್​, ಚೆನ್ನೈ, ಮುಂಬೈ, ದೆಹಲಿ, ಬೆಂಗಳೂರು ಸೇರಿ ಬಹುತೇಕ ಪ್ರಮುಖ ನಗರಗಳಲ್ಲಿ ಕೇವಲ ಒಂದು ಅಥವಾ ಎರಡು ಥಿಯೇಟರ್​ನಲ್ಲಿ ಮಾತ್ರ ಆದಿಪುರುಷ ಉಳಿದುಕೊಂಡಿದೆ. ಇನ್ನು 17ನೇ ದಿನ ಭಾರತದಲ್ಲಿ ಕೇವಲ 1 ಕೋಟಿ ಗಳಿಸಿದ್ದಷ್ಟೇ ಸಮಾಧಾನ ತಂದಿದೆ.

ಕಂಗನಾ ರಣಾವತ್​ ಹೊಸ್​ ಫೋಟೋಶೂಟ್​​ ವೈರಲ್​​​

ಬಾಲಿವುಡ್​​ ಖ್ಯಾತ ನಟಿ ಕಂಗನಾ ರಣಾವತ್​ ನಿರ್ಮಾಣದ ಟಿಕು ವೆಡ್ಸ್ ಶೆರು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಅವರ ಎಮರ್ಜೆನ್ಸಿ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್​ ಹೊಸ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಣದಲ್ಲಿ ವೈರಲ್​ ಆಗಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮತ್ತೊಂದು ಇಂಡಸ್ಟ್ರೀ ಹಿಟ್​ ಕೊಡಲು ಮುಂದಾದ ಅಲ್ಲು ಅರ್ಜುನ್​​, ತ್ರಿವಿಕ್ರಮ್​​; ಇಲ್ಲಿದೆ ಟಾಪ್​​ 5 ಸಿನಿಮಾ ಸುದ್ದಿ!

https://newsfirstlive.com/wp-content/uploads/2023/07/allu-arjun-6.jpg

Load More