/newsfirstlive-kannada/media/post_attachments/wp-content/uploads/2025/05/IND_DGMO_3.jpg)
ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಉಗ್ರ ನೆಲೆಗಳು ಧ್ವಂಸ ಹಾಗೂ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. 35 ರಿಂದ 40 ಪಾಕ್ ಯೋಧರು ಜೀವ ಕಳೆದುಕೊಂಡಿದ್ದಾರೆ ಎಂದು ಭಾರತ ಸೇನೆಯ ಮೂರು ಪಡೆಯ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಏರ್ ಮಾರ್ಷಲ್ ಎ.ಕೆ ಭಾರ್ತಿ, ಮೇ 7 ರಂದು ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸಿರ್ ಅಹ್ಮದ್ ಅವರಂತಹ ಉಗ್ರರು ಸೇರಿದಂತೆ 100ಕ್ಕೂ ಹೆಚ್ಚು ಉಗ್ರರು ಉಸಿರು ಚೆಲ್ಲಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 35 ರಿಂದ 40 ಪಾಕಿಸ್ತಾನದ ಸೈನಿಕರು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ 9 ಭಯೋತ್ಪಾದಕರ ನೆಲೆಗಳು ಧ್ವಂಸವಾಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾಕ್ ಮೇಲೆ ಭಾರತ ಸೇನೆಯ ದಾಳಿ ಹೇಗಿತ್ತು..? ಫೋಟೋ ಸಮೇತ ಸಾಕ್ಷಿ ತೋರಿಸಿದ DGMO ಅಧಿಕಾರಿಗಳು
ಪಾಕಿಸ್ತಾನದ 700 ಡ್ರೋಣ್ಗಳನ್ನು ಭಾರತ ಯಶಸ್ವಿಯಾಗಿ ಉಡೀಸ್ ಮಾಡಿದೆ. ಹೀಗಾಗಿ ಪಾಕಿಸ್ತಾನದ ಏರ್ ಬೇಸ್ಗಳನ್ನು ನಾವು ಟಾರ್ಗೆಟ್ ಮಾಡಿದ್ದೇವು. ಉಗ್ರರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿದೆ. ನಮ್ಮ ವಾಯುನೆಲೆ ಮೇಲೆ ವಿಫಲ ದಾಳಿ ಮಾಡಿದ್ದರಿಂದ ನಮಗೆ ಬೇರೆ ದಾರಿಗಳಿರಲಿಲ್ಲ. ಹೀಗಾಗಿ ಪ್ರತಿ ದಾಳಿ ನಡೆಸಿ ಡ್ರೋಣ್ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿದ್ದಾರೆ.
ಪಾಕ್ನ ಬಾವಲ್ಪುರ, ಮುರಿದ್ಕೆ, ಮರ್ಕಜಾ ಪ್ರದೇಶಗಳಲ್ಲಿ ಇದ್ದಂತಹ ಭಯೋತ್ಪಾದಕರ ತರಬೇತಿ ತಾಣಗಳನ್ನು ಧ್ವಂಸ ಮಾಡಿದ್ದೇವೆ. ಖಚಿತ ಮಾಹಿತಿ ಮೇರೆಗೆ ಉಗ್ರರ ನೆಗಲೆಗಳನ್ನು ನಾಶ ಮಾಡಲಾಗಿದೆ. ಒಟ್ಟು 21 ನೆಲೆಗಳನ್ನು ಪಾಯಿಂಟ್ ಮಾಡಲಾಗಿತ್ತು. ಇದರಲ್ಲಿ 9 ಉಗ್ರರ ಅಡಗು ತಾಣಗಳನ್ನು ಹೊಡೆದು ನಾಶ ಮಾಡಲಾಗಿದೆ. ಇಂದು ರಾತ್ರಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದರೆ ತಕ್ಕ ಉತ್ತರ ನೀಡುತ್ತೇವೆ. ಭಾರತದ ದಾಳಿಗೆ ಹೆದರಿ ಪಾಕಿಸ್ತಾನದ ಡಿಜಿಎಂಒಗಳು ನಮಗೆ ಕರೆ ಮಾಡಿ ಕದನ ವಿರಾಮಕ್ಕೆ ಮನವಿ ಮಾಡಿದ್ದರು. ಶಾಂತಿ ಕಾಪಾಡಲು ನಾವು ಒಪ್ಪಿಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ