ರಾಮಾಚಾರಿ ವೀಕ್ಷಕರಿಗೆ ಬಿಗ್​ ಶಾಕ್​.. ಮುಕ್ತಾಯ ಹಂತದಲ್ಲಿದೆ ಟಾಪ್​ ಸೀರಿಯಲ್​..!

author-image
Veena Gangani
Updated On
ರಾಮಾಚಾರಿ ವೀಕ್ಷಕರಿಗೆ ಬಿಗ್​ ಶಾಕ್​.. ಮುಕ್ತಾಯ ಹಂತದಲ್ಲಿದೆ ಟಾಪ್​ ಸೀರಿಯಲ್​..!
Advertisment
  • ರಾಮ್​ಜಿ ಗರಡಿಯಿಂದ ಪ್ರಸಾರವಾಗುತ್ತಿದ್ದ ರಾಮಾಚಾರಿ ಸೀರಿಯಲ್
  • ರಾಮಾಚಾರಿಯಾಗಿ ರಿತ್ವಿಕ್​, ಚಾರು ಆಗಿ ಮೌನ ಗುಡ್ಡೆಮನೆ ನಟನೆ
  • ಟಾಪ್​ ಸ್ಥಾನದಲ್ಲಿ ಧಾರಾವಾಹಿ ಟಿಆರ್​ಪಿನಲ್ಲಿ ಕೊನೆ ಸ್ಥಾನ ತಲುಪಿದೆ

ರಾಮಚಾರಿ ಕಳೆದ 2 ವರ್ಷಗಳಿಂದ ಸೀರಿಯಲ್​ ಪ್ರಿಯರನ್ನ ರಂಜಿಸ್ತಿರೋ ಧಾರಾವಾಹಿ. ಖ್ಯಾತ ನಿರ್ದೇಶಕ ನಿರ್ಮಾಪಕ ಕೆ.ಎಸ್​. ರಾಮ್​ಜಿ ಅವರ ಗರಡಿಯಿಂದ ಪ್ರಸಾರವಾಗ್ತಿರೋ ರಾಮಾಚಾರಿಗೆ ನಾಯಕ ರಿತ್ವಿಕ್​ ಕೃಪಾಕರ್ ಹಾಗೂ ನಾಯಕಿ ಮೌನ ಗುಡ್ಡೆಮನೆ ಜೀವತುಂಬಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೈಲಿನಲ್ಲಿ ಭಾರೀ ಅನಾಹುತ.. ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಟ್ರೈನು.. VIDEO

publive-image

ರಿತ್ವಿಕ್​ ಧಾರಾವಾಹಿಗಾಗಿ ಜಿಮ್​ನಲ್ಲಿ ಕಸರತ್ತು ಮಾಡಿ ಬರೋಬ್ಬರಿ 30 ಕೆಜಿ ತೂಕ ಇಳಿಸಿದ್ರು. ರಿತ್ವಿಕ್​ ಭಾಷೆ ಡೆಡಿಕೇಶನ್​ಗೆ ಜನ ಕೈ ಬಿಡಲಿಲ್ಲ. ಅದ್ಭುತವಾದ ರೆಸ್ಪಾನ್ಸ್​ ಸಿಕ್ಕಿತೆ. ಈಗ ಚಿಕ್ಕ ಮಕ್ಕಳು ಕೂಡ ರಾಮಾಚಾರಿಯನ್ನ ಗುರುತಿಸೋ ಮಟ್ಟಿಗೆ ಜನಪ್ರಿಯತೆ ಪಡೆದಿದ್ದಾರೆ. ನಟಿ ಮೌನ ಅವರಿಗೂ ಅಷ್ಟೇ ಚಾರು ಪಾತ್ರ ವೀಕ್ಷಕರ ಮನಸ್ಸಲ್ಲಿ ಜಾಗ ಮಾಡಿಕೊಟ್ಟಿದೆ. ಕೇವಲ 21 ವರ್ಷಕ್ಕೆ ಕನಸು ನನಸು ಮಾಡಿಕೊಂಡಿದ್ದಾರೆ ನಟಿ.

publive-image

ರಕ್ಕು ಪಾತ್ರ ಕೂಡ ಸಿಕ್ಕಾಪಟ್ಟೆ ಕ್ಲಿಕ್​ ಆಯ್ತು. ಮೊದಲು ಪಾತ್ರ ಮಾಡಿದ್ದ ದೇವಿಕಾ ಭಟ್​ಗೂ ಕೆಲ ದಿನಗಳಲ್ಲೇ ಜನಪ್ರಿಯತೆ ತಂದುಕೊಟ್ಟಿತ್ತು. ನಂತರ ಪಾತ್ರಕ್ಕೆ ಎಂಟ್ರಿ ಕೊಟ್ಟ ವಿದ್ಯಾ ರಾಜ್​ ಅದೃಷ್ಟವೇ ಬದಲಾಯಿತು. ವಿದ್ಯಾ ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚ್ತಿದ್ದಾರೆ. ಹೀಗೆ ಸಾಕಷ್ಟು ಕಲಾವಿದರಿಗೆ ಬ್ರೇಕ್​ ನೀಡಿದ ಧಾರಾವಾಹಿ ರಾಮಾಚಾರಿ. ಹಲವು ಮಜಲುಗಳಲ್ಲಿ ಮೂಡಿ ಬಂದಿರೋ ರಾಮಾಚಾರಿ ಸ್ಟೋರಿ ಇತ್ತಿಚೀಗೆ ಕೊಂಚ ಡಲ್​ ಹೊಡಿತಿದೆ.

publive-image

ರೇಟಿಂಗ್​ ಕೂಡ ಡೌನ್​ ಆಗಿದ್ದು, ಟಾಪ್​ ಸ್ಥಾನದಲ್ಲಿ ಧಾರಾವಾಹಿ ಟಿಆರ್​ಪಿನಲ್ಲಿ ಕೊನೆ ಸ್ಥಾನ ತಲುಪಿದೆ. ಹೀಗಾಗಿ ರಾಮಾಚಾರಿಯನ್ನ ಮುಕ್ತಾಯ ಮಾಡೋ ಪ್ಲ್ಯಾನ್​ನಲ್ಲಿದೆ ತಂಡ ಎನ್ನಲಾಗ್ತಿದೆ. ಈಗಾಗಲೇ ಹೊಸ ಧಾರಾವಾಹಿ ಶ್ರೀಗಂಧದ ಗುಡಿ ಟೈಟಲ್​ ಅನೌನ್ಸ್​ ಆಗಿದ್ದು, ರಾಮಾಚಾರಿ ಜಾಗಕ್ಕೆ ಈ ಧಾರಾವಾಹಿ ಬರಲಿದೆ ಎನ್ನಲಾಗ್ತಿದೆ. ಇನ್ನು, ಬಿಗ್​ಬಾಸ್​ ಸೀಸನ್ 12 ಕೂಡ ಅನೌನ್ಸ್​ ಆಗಿದ್ದು, ಇನ್ನು 3 ತಿಂಗಳಲ್ಲಿ ಕೆಲ ಧಾರಾವಾಹಿಗಳಿಗೆ ಶುಭಂ​ ಹೇಳಿದೆ ತಂಡ. ಆ ಲಿಸ್ಟ್​ನಲ್ಲಿ ರಾಮಾಚಾರಿ ಕೂಡ ಇದೆ. ಒಟ್ಟಾರೆ ರಾಮಾಚಾರಿ ಮುಕ್ತಾಯದ ಸುದ್ದಿ ಇಂಡಸ್ಟ್ರಿಯಲ್ಲಿ ಓಡಾಡ್ತಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ ಹೊರ ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment