ಪಹಲ್ಗಾಮ್ ದಾಳಿಗೆ ಪ್ರತೀಕಾರ.. ಸೇನೆಯಿಂದ ಓರ್ವ ಲಷ್ಕರ್ ಉಗ್ರನ ಸಂಹಾರ

author-image
Veena Gangani
Updated On
ಪಹಲ್ಗಾಮ್ ದಾಳಿಗೆ ಪ್ರತೀಕಾರ.. ಸೇನೆಯಿಂದ ಓರ್ವ ಲಷ್ಕರ್ ಉಗ್ರನ ಸಂಹಾರ
Advertisment
  • ಜಮ್ಮು-ಕಾಶ್ಮೀರದಲ್ಲಿ ಎಲ್​ಇಟಿ ಕಮಾಂಡರ್​ ಹತ್ಯೆ
  • ಎಲ್​ಇಟಿ ಟಾಪ್ ಕಮಾಂಡರ್​ ಅಲ್ತಾಫ್ ಲಲ್ಲಿ ಫಿನಿಶ್
  • ಬಂಡಿಪೋರಾ ಬಳಿ ಉಗ್ರನನ್ನ ಹೊಡೆದುರುಳಿಸಿದ ಸೇನೆ

ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ದಾಳಿ ಬೆನ್ನಲ್ಲೇ ಭಾರತೀಯ ಸೇನೆಯೂ ಓರ್ವ ಉಗ್ರ ಸಂಹಾರ ಮಾಡಿದೆ.
ಜಮ್ಮು ಕಾಶ್ಮೀರದ ಬಂಡಿಪುರದಲ್ಲಿ ಎಲ್​ಇಟಿ ಟಾಪ್ ಕಮಾಂಡರ್​ ಅಲ್ತಾಫ್ ಲಲ್ಲಿಯನ್ನು ಸೇನೆ ಹೊಡೆದುರುಳಿಸಿದೆ. ​ಈ ಅಲ್ತಾಫ್ ಲಲ್ಲಿ ಫಿನಿಶ್ ಎಲ್​ಇಟಿ ಟಾಪ್ ಕಮಾಂಡರ್ ಆಗಿದ್ದ.

ಇಂದು ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯೂ ಓರ್ವ ಉಗ್ರನ ಹತ್ಯೆ ಮಾಡಿದೆ. ಇನ್ನೂ ಇದೇ ಕಾರ್ಯಾಚರಣೆಯ ವೇಳೆ ಇಬ್ಬರು ಯೋಧರಿಗೆ ಗಾಯಗಳಾಗಿವೆ. ಸದ್ಯ ಇಬ್ಬರು ಯೋಧರು ಪ್ರಥಮ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಒಬ್ಬರಲ್ಲ, ಇಬ್ಬರು ಉಗ್ರರ ಮನೆ ಉಡೀಸ್​.. ಸ್ಫೋಟ ಮಾಡಿ ಧ್ವಂಸಗೊಳಿಸಿದ ಕ್ಷಣ ಹೇಗಿದೆ..? Video

publive-image

ಏಪ್ರಿಲ್ 22ರಂದು ಪಹಲ್ಗಾಮ್​​ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಪೈಶಾಚಿಕ ದಾಳಿಗೆ 26 ಅಮಾಯಕರು ಜೀವ ಕಳೆದುಕೊಂಡಿದ್ದರು. ಹೀಗಾಗಿ ಈ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ದಿಟ್ಟ ಹೆಜ್ಜೆಯನ್ನಿಟ್ಟಿದೆ. 26 ಪ್ರವಾಸಿಗರ ಬಲಿ ಪಡೆದಿದ್ದ ಇಬ್ಬರು ಶಂಕಿತರ ಮನೆಗಳನ್ನು ಉಡೀಸ್ ಮಾಡಲಾಗಿದೆ. ಕಾಶ್ಮೀರದ ಟ್ರಾಲ್​ನಲ್ಲಿರೋ ಅಸೀಫ್ ಶೈಖ್ ಹಾಗೂ ಅನಂತ್​​ನಾಗ್​ ಜಿಲ್ಲೆಯಲ್ಲಿದ್ದ ಉಗ್ರ ಆದಿಲ್​​ ಮನೆಯನ್ನು ಉಡೀಸ್ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment