/newsfirstlive-kannada/media/post_attachments/wp-content/uploads/2024/04/SHANKAR-RAO.jpg)
ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ಭದ್ರತಾಪಡೆ ಹಾಗೂ ಮಾವೋವಾದಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ನಕ್ಸಲ್ ನಾಯಕ ಶಂಕರ್ ರಾವ್ ಸೇರಿದಂತೆ 29 ನಕ್ಸಲರನ್ನು ಹತ್ಯೆ ಮಾಡಲಾಗಿದ್ದು, 18 ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್​ ವಿರುದ್ಧ ರೊಚ್ಚಿಗೆದ್ದ ಅಮೀರ್ ಖಾನ್, ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್​ ದಾಖಲು
ನಕ್ಸಲರ ದಾಳಿಗೆ ಮೂವರು ಯೋಧರು ಗಾಯಗೊಂಡಿದ್ದಾರೆ. ನಕ್ಸಲ್​ ನಾಯಕ ಶಂಕರ್​ ರಾವ್​ ದಾಳಿ ವೇಳೆ ತಲೆಗೆ 25 ಲಕ್ಷ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಕೂಂಬಿಂಗ್ ನಡೆದ ಸ್ಥಳದಲ್ಲಿ ಹಲವು ಸ್ಫೋಟಕ ವಸ್ತುಗಳು ಸೇರಿದಂತೆ ಎಕೆ 47 ಬಂದೂಕನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಶೀಘ್ರದಲ್ಲೇ ಆರ್​ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!
ಬಾರ್ಡರ್​ ಸೆಕ್ಯೂರಿಟಿ ಫೋರ್ಸ್​ (ಬಿಎಸ್​ಎಫ್) ಹಾಗೂ ಛತ್ತೀಸ್​ಗಢದ ಡಿಸ್ಟ್ರಿಕ್ಟ್​​ ರಿಸರ್ವ್​​ ಗಾರ್ಡ್​ (ಡಿಆರ್​​ಜಿ) ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆದಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಕ್ಸಲರು ಮತ್ತೆ ಬಾಲ ಬಿಚ್ಚಿದ್ದರು. ಈ ಹಿನ್ನೆಲೆಯಲ್ಲಿ ಮಾದ್​​ ಪ್ರದೇಶದಲ್ಲಿ ಭದ್ರತಾ ಪಡೆ ಕೂಂಬಿಂಗ್ ನಡೆಸಿತ್ತು. ಕಂಕೇರ್​​ ಜಿಲ್ಲೆಯಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us